ರೈಲು ನಿಲ್ದಾಣದಲ್ಲೇ ಹೆರಿಗೆ ನೋವು: ಒಂದು ರೂಪಾಯಿ ಕ್ಲಿನಿಕ್ ನಲ್ಲಿ ಡೆಲಿವರಿ!
ಥಾಣೆ. ಅ 10: ಮುಂಬೈಗೆ ತೆರಳುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 29 ವರ್ಷ ವಯಸ್ಸಿನ ತುಂಬು ಗರ್ಭಣಿಗೆ ಮಹಾರಾಷ್ಟ್ರದ ಥಾಣೆ ನಿಲ್ದಾಣದಲ್ಲಿಯೇ ನೋವು ಕಾಣಿಸಿಕೊಂಡು, ಅಲ್ಲಿನ ಒಂದು ರೂಪಾಯಿ ಚಿಕಿತ್ಸಾಲಯದಲ್ಲಿ ಹೆರಿಗೆಯಾದ ಘಟನೆ ನಡೆದಿದೆ. ಕರ್ಜನತ್ ನಿಂದ ಪರೇಲ್ ಗೆ ಹೊರಟಿದ್ದ ಸುಭಂತಿ ಪಾತ್ರಾ ಅವರಿಗೆ ಥಾಣೆಯ ಬಳಿ ಹೆರಿಗೆ ನೋವು ಕಾಣಿಸಿಕೊಂಡಿತ್ತು ಎಂದು ಒಂದು ರೂಪಾಯಿ ಚಿಕಿತ್ಸಾಲಯದ ಕಾರ್ಯನಿರ್ವಹಣಾಧಿಕಾರಿ ಡಾ ರಾಹುಲ್ ಗುಳೆ ತಿಳಿಸಿದ್ದಾರೆ. ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡ ಕೂಡಲೇ ರೈಲ್ವೆ ಅಧಿಕಾರಿಗಳು ಕೂಡಲೇ ಪ್ಲಾಟ್ಫಾರಂನಲ್ಲರುವ ಚಿಕಿತ್ಸಾಲಯಕ್ಕೆ ಕರೆತಂದರು. ಅರ್ಧ ಗಂಟೆಯಲ್ಲಿ ಸುಸೂತ್ರವಾಗಿ ಹೆರಿಗೆಯಾಗಿ, ತಾಯಿ ಹಾಗೂ ಗಂಡು ಮಗು ಆರೋಗ್ಯವಾಗಿದ್ದಾರೆ. ಹೆಚ್ಚುವರಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ತುರ್ತು ಚಿಕಿತ್ಸೆಗಾಗಿ ಈ ಒಂದು ರೂಪಾಯಿ ಚಿಕಿತ್ಸಾಲಯವನ್ನು ತೆರೆಯಲಾಯಿತು. ಇದರ ಮೂಲ ಅಗತ್ಯ ಸೇವೆ ಒದಗಿಸಲು ನಮಗೆ ಅವಕಾಶ ನೀಡಿದ ರೈಲ್ವೆ ಅಧಿಕಾರಿಗಳಿಗೆ ಧನ್ಯವಾದ. ಈ ಹೆರಿಗೆಯ ಮೂಲಕ ಒಂದು ರೂಪಾಯಿ ಚಿಕಿತ್ಸಾಲಯದ ಮಹತ್ವ ಹಾಗೂ ರೈಲು ನಿಲ್ದಾಣದಲ್ಲಿ ಇಂತಹ ಚಿಕಿತ್ಸಾಲಯದ ಅಗತ್ಯವಿದೆ ಎಂಬುದು ಸಾಬೀತಾಗಿದೆ ಎಂದು ಡಾ ಗುಳೆ ಹೇಳಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 