ಆರೋಗ್ಯವಂತರಾಗಿರುವುದೇ ಸಮಾಜಕ್ಕೆ ಉತ್ತಮ ಕೊಡುಗೆ: ಡಾ.ದಾದಾಪೀರ
ರಾಣೇಬೆನ್ನೂರ 08: ಸರ್ವರೂ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುವುದರ ಜೊತೆಗೆ ಆರೋಗ್ಯವಂತರಾದಾಗ ಸಮಾಜದಲ್ಲಿ ನಾವು ಉತ್ತಮವಾದ ಕೊಡುಗೆ ನೀಡುವುದರ ಮೂಲಕ ಮತ್ತು ಆದರ್ಶವಂತರಾಗಿರಲು ಸಾಧ್ಯವಾಗುತ್ತದೆ ಎಂದು ಹರನಗಿರಿ ಸಮುದಾಯ ಕೇಂದ್ರದ ಆಯುಷ್ ವೈದ್ಯಾಧಿಕಾರಿ ಡಾ.ದಾದಾಪೀರ ಹೇಳಿದರು.
ಗುರುವಾರದಂದು ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಏರಿ್ಡಸಿದ್ದ ಮಕ್ಕಳ ಆರೋಗ್ಯ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಕ್ಕಳು ಮೊದಲು ತಾವುಗಳು ಸ್ವಚ್ಛತೆಯಿಂದ ಇದ್ದು ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕು ಎಂದರು.
ಕೋವಿಡ್ನಿಂದಾಗಿ ಈಗಾಗಲೇ ಸಾಕಷ್ಟು ಜನರು ಮತ್ತು ಮಕ್ಕಳು ಸಹ ಸಂಕಷ್ಟವನ್ನು ಅನುಭವಿಸಿದ್ದಾರೆ. ಸಾವು ನೋವು ಸಂಭವಿಸಿವೆ. ಹೀಗಿರುವಾಗ ಮಕ್ಕಳು ಮೊದಲು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಮತ್ತು ಸಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಸರಕಾರ ಮಕ್ಕಳಿಗಾಗಿಯೇ ಈ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದೆ ಇದರ ಸದುಪಯೋಗಪಡೆದುಕೊಂಡು ಆರೋಗ್ಯವಂತರಾಗಿರಬೇಕು ಎಂದರು.
ಎಸ್ಡಿಎಂಸಿ ಅಧ್ಯಕ್ಷ ಜಿ.ವಿ.ದೀಪಾವಳಿ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮುದಾಯ ಆರೋಗ್ಯಾಧಿಕಾರಿಗಳಾದ ರಂಜನಾ ಹಲವಾಗಲ, ವಿನಾಯಕ ಗುಣಮುಖ, ಪ್ರಲ್ಹಾದ ವಾಲ್ಮೀಕಿ, ಹನುಮಂತ ಮಡ್ಲೂರ, ಆರೋಗ್ಯ ಸಹಾಯಕರಾದ ಯಶೋದಾ ಹೊರಕೇರಿ, ಸವಿತಾ ಕೆಂಚಣ್ಣನವರ, ಅಜಯ್ ವಿರಕ್ತಮಠ, ಲ್ಯಾಬ್ ಟೆಕ್ನೇಷಿಯನ್ ನೀಲಮ್ಮ ಗೊಟಗೋಡಿಮಠ, ಅಂಗನವಾಡಿ ಮೇಲ್ವಿಚಾರಕಿ ಶೋಭಾ ಹುಲ್ಮನಿ, ಸಹಾಯಕಿರಾದ ವನಜಾಕ್ಷಿ ಪೂಜಾರ, ಮಂಗಳಾ ಉಪ್ಪಿನ, ಮುಖ್ಯ ಶಿಕ್ಷಕ ಎಂ.ಎಸ್.ಹಲಗೇರಿ, ಗ್ರಾಪಂ ಸದಸ್ಯರಾದ ದೇವರಾಜ ಆನಿಶೆಟ್ರ, ಪುಟ್ಟಪ್ಪ ಗಂಟಿ ಸೇರಿದಂತೆ ಎಸ್ಡಿಎಂಸಿ ಸದಸ್ಯರು ಹಾಗೂ ಶಾಲಾ ಸಿಬ್ಬಂಧಿವರ್ಗ ಮತ್ತಿತರರು ಇದ್ದರು.