ಚಿಕ್ಕೋಡಿ

ಭವಿಷ್ಯತ್ತಿನಲ್ಲಿ ಚಿಕ್ಕೋಡಿ ಜಿಲ್ಲೆ ಘೋಷಣೆ ಸಾಧ್ಯತೆ: ಶಾಸಕ ಗಣೇಶ ಹುಕ್ಕೇರಿ

ಭವಿಷ್ಯತ್ತಿನಲ್ಲಿ ಚಿಕ್ಕೋಡಿ ಜಿಲ್ಲೆ ಘೋಷಣೆ ಸಾಧ್ಯತೆ: ಶಾಸಕ ಗಣೇಶ ಹುಕ್ಕೇರಿ

ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಪ್ರಯತ್ನ: ಚಿಕ್ಕೋಡಿಗೆ 40 ಕೋಟಿ ರೂ ಅನುದಾನದ ಭರವಸೆ 

ಚಿಕ್ಕೋಡಿ 13: ಭವಿಷ್ಯತ್ತಿನಲ್ಲಿ ಚಿಕ್ಕೋಡಿ ಜಿಲ್ಲೆಯಾಗುವುದು ಶತಸಿದ್ಧ, ಹೀಗಾಗಿ ಚಿಕ್ಕೋಡಿ ಜಿಲ್ಲೆಯಾಗಲು ಬೇಕಾದ ಮೂಲಭೂತ ಸೌಕರ್ಯ ಒದಗಿಸಲಾಗುತ್ತದೆ. ಬರುವ ಎರಡು ತಿಂಗಳ ಒಳಗಾಗಿ ಚಿಕ್ಕೋಡಿ ನಗರದ ಅಭಿವೃದ್ಧಿಗೆ ವಿಶೇಷ 40 ಕೋಟಿ ರೂ ಅನುದಾನ ಬರಲಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು. 

ಇಲ್ಲಿನ ಇಂದಿರಾ ನಗರ ಕ್ರಾಸ್ ಹತ್ತಿರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ದಿ.ದೇವರಾಜ ಅರಸು ಭವನ ನಿರ್ಮಾಣ ಕಾಮಗಾರಿಗೆ ಶಂಕಸ್ಥಾನೆ ನೆರವೇರಿಸಿ ಅವರು ಮಾತನಾಡಿದರು. 

ಚಿಕ್ಕೋಡಿ ಜಿಲ್ಲೆಯಾಗುತ್ತದೆಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಈಗಾಗಲೇ ಬಹುತೇಕ ಜಿಲ್ಲಾ ಮಟ್ಟದ ಕಚೇರಿಗಳನ್ನು ಮಂಜೂರು ಮಾಡಿಸಿ ಕಾರಾ​‍್ಯರಂಭಗೊಳಿಸಿದ್ದಾರೆ. ಉಳಿದ ಇಲಾಖೆಗಳನ್ನು ತಂದು ಜಿಲ್ಲೆಯಾಗಲು ಎಲ್ಲ ರೀತಿಯ ಪುಯತ್ನ ಮಾಡುತ್ತೇನೆ ಎಂದರು. 

ಕಳೆದ ಎರಡು ವರ್ಷದಿಂದ ಮೂರು ವರ್ಷವಾದರೂ ಚಿಕ್ಕೋಡಿ ನಗರಕ್ಕೆ ಅನುದಾನ ಬಂದಿಲ್ಲ, ಹೀಗಾಗಿ ಚಿಕ್ಕೋಡಿ ನಗರದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಚಿಕ್ಕೋಡಿ ನಗರಕ್ಕೆ ಏನೇನುಬೇಕೆಂಬುದು ಪುರಸಭೆ ಎಲ್ಲ ಸದಸ್ಯರು ಕೂಡಿಕೊಂಡು ಚರ್ಚೆ ಮಾಡಿ ಹೇಳಿದರೇ ಆ ರೀತಿ ಅನುದಾನ ಖರ್ಚು ಮಾಡಲಾಗುತ್ತದೆ ಎಂದರು. 

ದಿ.ದೇವರಾಜ ಅರಸು ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಗೆ ಜಾಗ ಇದ್ದರೂ ಕಟ್ಟಡ ಕೊರತೆಯಾಗಿತ್ತು. ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿದಾಗ ಸರ್ಕಾರ 1.17 ಕೋಟಿ ರೂ ಅನುದಾನ ಮಂಜೂರು ಮಾಡಿಸಿದೆ. ಮೊದಲ ಕಂತಾಗಿ 50 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ. ಬರುವ ಎಂಟು ತಿಂಗಳ ಅವಧಿಯೊಳಗೆ ಕಚೇರಿ ಕಟ್ಟಡ ಕಾಮಗಾರಿ ಮುಕ್ತಾಯವಾಗಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು. 

ಚರಮೂರ್ತಿಮಠದ ಸಂಪಾದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಚಿಕ್ಕೋಡಿ ನಗರ ವೇಗವಾಗಿ ಬೆಳೆಯುತ್ತಿರುವ ನಗರವಾಗುತ್ತಿದೆ. ಈಗಾಗಲೇ ಶೈಕ್ಷಣಿಕ ಜಿಲ್ಲೆ ಸ್ಥಾನ ಹೊಂದಿರುವ ಚಿಕ್ಕೋಡಿಯನ್ನು ಆಡಳಿತಾತ್ಮಕ ಜಿಲ್ಲೆಯನ್ನಾಗಿ ಘೋಷಣೆ ಮಾಡುವುದು ಬಾಕಿ ಇದೆ. ಶಾಸಕ ಗಣೇಶ ಹುಕ್ಕೇರಿ ಹೆಚ್ಚಿನ ಮುತುವರ್ಜಿವಹಿಸಿ ಜಿಲ್ಲೆ ಘೋಷಣೆ ಮಾಡಬೇಕು ಎಂದರು. 

ವೇದಿಕೆ ಮೇಲೆ ಪುರಸಭೆ ಮಾಜಿ ಅಧ್ಯಕ್ಷ ರಾಮಾ ಮಾನೆ, ನರೇಂದ್ರ ನೇರ್ಲಿಕರ, ಪುರಸಭೆ ಸದಸ್ಯರಾದ ಸಾಭೀರ ಜಮಾದಾರ, ಗುಲಾಬ ಬಾಗವನಾ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌.ನಸಲಾಪೂರೆ, ಮುದ್ದಸರ ಜಮಾದಾರ, ಉದ್ಯಮಿ ರವಿ ಹಂಪನ್ನವರ, ಅನಿಲ ಮಾನೆ, ಪೀರೀಜ ಕಲಾವಂತ ಮುಂತಾದವರು ಇದ್ದರು. 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಎಸ್‌.ಪಿ.ಸೌಧಗಾರ ಸ್ವಾಗತಿಸಿ ವಂದಿಸಿದರು. 


ಸುದ್ದಿ ಓದಿ