ರಾಷ್ಟ್ರೀಯ

ಅಶೋಕ್ ಗಸ್ತಿ ನಿಧನ; ಮುಖ್ಯಮಂತ್ರಿ ಕಂಬನಿ

ಅಶೋಕ್ ಗಸ್ತಿ ನಿಧನ; ಮುಖ್ಯಮಂತ್ರಿ ಕಂಬನಿ

ಬೆಂಗಳೂರು, ಸೆ.18: ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿಯವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ಸಂಸತ್ ಸದಸ್ಯರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ  ಅಶೋಕ್ ಗಸ್ತಿಯವರು ನಿಧನರಾದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ಅವರ ಅಕಾಲಿಕ ನಿಧನದ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ. ಓಂ ಶಾಂತಿ ಎಂದು ಮುಖ್ಯಮಂತ್ರಿ ಟ್ವಿಟ್ ಮಾಡಿದ್ದಾರೆ.

ಸುದ್ದಿ ಓದಿ