ಶಿಗ್ಗಾವ್

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪ್ರವಾಸದ ವಿವರ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪ್ರವಾಸದ ವಿವರ


ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪ್ರವಾಸದ ವಿವರ 

 ಶಿಗ್ಗಾವಿ 03 :ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಯಾಸೀರಖಾನ್ ಪಠಾಣ ಅವರ ಪರ 4 ಮತ್ತು 5 ರಂದು ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು,ಆ.6 ಮತ್ತು 7 ರಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕ್ಷೇತ್ರದ ವಿವಿಧಡೆ ಮತಯಾಚಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ತಿಳಿಸಿದರು. 

      ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,4 ರಂದು ಬೆಳಿಗ್ಗೆ 10ಕ್ಕೆ ಹುಲಗೂರ ಜಿಪಂ.ವ್ಯಾಪ್ತಿಯಲ್ಲಿ ಬರುವ ಹುಲಗೂರ, ಶಿಶುವಿನಹಾಳ, ಅತ್ತಿಗೇರಿ, ಬಸನಾಳ, ಕ್ಯಾಲಕೊಂಡ ಮಧ್ಯಾಹ್ನ 3ಕ್ಕೆ  ಸವಣೂರ ತಾಲೂಕು ಹುರಳಿಕೊಪ್ಪಿ ಜಿಪಂ.ವ್ಯಾಪ್ತಿಯ ಹುರಳಿಕೊಪ್ಪಿ, ಕುರಬರಮಲ್ಲೂರ, ತೊಂಡೂರ, ತೆಗ್ಗಿಹಳ್ಳಿ, ಸಂಜೆ 6ಕ್ಕೆ ಬಂಕಾಪುರ ಪಟ್ಟಣದಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.  

    ಆ.5 ರಂದು ಬೆಳಿಗ್ಗೆ 10ಕ್ಕೆ ಚಂದಾಪುರ, ಹುನಗುಂದ, ಕೋಣನಕೇರಿ, ಮಧ್ಯಾಹ್ನ 3ಕ್ಕೆ ಹಿರೇಬೆಂಡಿಗೇರಿ, ಬನ್ನೂರ, ಕಬನೂರ, ಎನ್‌.ಎಂ.ತಡಸ, ಹಿರೇಮಣಕಟ್ಟಿ, ಹಿರೇಬೆಂಡಿಗೇರಿ,, ಸಂಜೆ 6ಕ್ಕೆ ಚಿಲ್ಲೂರಬಡ್ನಿ, ತಳ್ಳಳ್ಳಿ, ಬೇವಿನಹಳ್ಳಿ, ಅಲ್ಲಿಪುರ, ಮಂತ್ರೋಡಿ ನಡೆಯವ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

    ಆ.6 ರಂದು ಬೆಳಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಹೋತನಹಳ್ಳಿ, ಹಳೇಬಂಕಾಪುರ, ಮಧ್ಯಾಹ್ನ 3ಕ್ಕೆ ದುಂಡಶಿ, ಹೊಸೂರ, ಮಡ್ಲಿ, ವನಹಳ್ಳಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಸಂಜೆ 6ಕ್ಕೆ ತಡಸ ಗ್ರಾಮದಲ್ಲಿ ಏರಿ​‍್ಡಸಿದ ರಾ​‍್ಯಲಿಯಲ್ಲಿ ಭಾಗವಹಿಸುವರು. ಆ.7 ರಂದು ಬೆಳಿಗ್ಗೆ 10ಕ್ಕೆ ಅಂದಲಗಿ, ಕೋಣನಕೇರಿ, ಮಧ್ಯಾಹ್ನ 3ಕ್ಕೆ ತವರಮೆಳ್ಳಳ್ಳಿ, ಸಂಜೆ 6ಕ್ಕೆ ಶಿಗ್ಗಾವಿ ಪಟ್ಟಣದಲ್ಲಿ ನಡೆಯವ ರಾ​‍್ಯಲಿಯಲ್ಲಿ ಭಾಗವಹಿಸಿ ಮತಯಾಚಿಸುವರು. 

ಬಾಕ್ಸ್‌ ಸುದ್ದಿ : 

ಪ್ರಚಾರಕ್ಕೆ 31 ಜನ ಸ್ಟಾರ್ ಪ್ರಚಾರಕರು, 28 ಸಚಿವರು ಸೇರಿದಂತೆ ಶಾಸಕರು, ಮಾಜಿ ಶಾಸಕರು ಆಗಮಿಸಲಿದ್ದು, ಪ್ರತಿಯೊಂದು ಜಿಪಂ.ವ್ಯಾಪ್ತಿಗೆ ಒರ್ವ ಸಚಿವರ ನೇತೃತ್ವದಲ್ಲಿ ಇಬ್ಬರು ಶಾಸಕರನ್ನು ನಿಯೋಜಿಸಲಾಗಿದೆ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಬೇಕು ಎಂದು ಸಂಜೀವಕುಮಾರ ನೀರಲಗಿ ಮನವಿ ಮಾಡಿದರು. ಪ್ರ.ಕಾರ್ಯದರ್ಶಿ ಮೋಹನ ಅಸುಂಡಿ, ಶಂಕರ ಮೆಹರವಾಡ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ