ರಾಣೆಬೆನ್ನೂರ

ರೈಲ್ವೆ ಅಂಡರ್ ಬ್ರಿಡ್ಜ ಸ್ಥಳಕ್ಕೆ ಮುಖ್ಯ ಇಂಜಿನಿಯರ್ ಭೇಟಿ

ರೈಲ್ವೆ ಅಂಡರ್ ಬ್ರಿಡ್ಜ ಸ್ಥಳಕ್ಕೆ ಮುಖ್ಯ ಇಂಜಿನಿಯರ್ ಭೇಟಿ

ಲೋಕದರ್ಶನ ವರದಿ 

ರಾಣೀಬೆನ್ನೂರ 19:  ಸದಾ ಒಂದಿಲ್ಲೊಂದು ಅವಘಡ ಸಂಭವಿಸಿ ಸುದ್ದಿಯಲ್ಲಿರುವ ರೈಲ್ವೆ ಅಂಡರ್ ಬ್ರಿಡ್ಜ ಸ್ಥಳಕ್ಕೆ ಹುಬ್ಬಳ್ಳಿಯ ಮುಖ್ಯ ಇಂಜಿನಿಯರ್ ವಿಜಯಕುಮಾರ ಮೋರೆಯವರು ಭೇಟಿ ನೀಡಿ ಅಂಡರ್ ಬ್ರಿಡ್ಜ ಸ್ಥಳದ ಖುದ್ದು ವೀಕ್ಷಣೆ ನಡೆಸಿದರು.  

ಮುಖ್ಯ ಇಂಜಿನಿಯರ್‌ರವರಿಗೆ ರೈಲ್ವೆ ಹೋರಾಟ ಸಮಿತಿಯವರು ರೈಲ್ವೆ ಅಂಡರ್ ಬ್ರಿಡ್ಜ ನಿರ್ಮಾಣವಾದಾಗಿನಿಂದ ಅನೇಕ ಅಪಘಾತಗಳು ಸಂಬವಿಸಿದ್ದು ನೀರು ನಿಲ್ಲುವುದರಿಂದ ವಾಹನ ಚಲಿಸುವುದು ದುಃಸ್ತರವಾಗುತ್ತದೆ. ಅಲ್ಲದೇ ಕೆಎಸ್‌ಆರ್ 

ಟಿಸಿ ಬಸ್ಸೊಂದು ಮುಳುಗಿ ಭಾರಿ ಅನಾಹುತವಾಗುತ್ತಿತ್ತು. ಸ್ವಲ್ಪದರಲ್ಲಿ ಅನಾಹುತ ತಪ್ಪಿದೆ. ಆದ್ದರಿಂದ ರೈಲ್ವೆ ಹಳಿಗೆ ಮೇಲ್ಸೇತುವೆ ನಿರ್ಮಿಸಿ ಜನರಿಗೆ ಉಪಕಾರ ಮಾಡಬೇಕೆಂದು ಹೋರಾಟಗಾರರಾದ ಜಗದೀಶ ಕೆರೂಡಿ, ರವೀಂದ್ರಗೌಡ ಪಾಟೀಲ, ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ, ಮಾಜಿ ಸದಸ್ಯ ಉಮೇಶ ಹೊನ್ನಾಳಿ, ಗಣ್ಯ ವರ್ತಕ ಜಿ.ಜಿ.ಹೊಟ್ಟಿಗೌಡ್ರ ಮುಂತಾದವರು ಮನವಿ ಸಲ್ಲಿಸಿದರು.  

ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯ ಇಂಜಿನಿಯರ್ ರವರು ಮೇಲ್ಸೇತುವೆ ನಿರ್ಮಿಸಲು ರೈಲ್ವೆ ಇಲಾಖೆಯ ಗಮನಕ್ಕೆ ತರಲಾಗುವುದು ಎಂದರು. 


ಸುದ್ದಿ ಓದಿ