ಚಿಕ್ಕೋಡಿ

ಚಿದಾನಂದ ಬಸಪ್ರಭು ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ ; ರಾಜ್ಯಸಭೆ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿಕೆ: ಕಾರ್ಖಾನೆ ವಾರ್ಷಿಕ ಸಭೆ

ಚಿದಾನಂದ ಬಸಪ್ರಭು ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ ; ರಾಜ್ಯಸಭೆ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿಕೆ: ಕಾರ್ಖಾನೆ ವಾರ್ಷಿಕ ಸಭೆ

ಲೋಕದರ್ಶನ ವರದಿ 


ಚಿಕ್ಕೋಡಿ 01: ಬರುವ ಎರಡು ವರ್ಷದ ಅವದಿಯಲ್ಲಿ ಚಿಕ್ಕೋಡಿ ಚಿದಾನಂದ ಬಸಪ್ರಭು ಸಹಕಾರಿ ಸಕ್ಕರೆ  ಕಾರ್ಖಾನೆ 10 ಸಾವಿರದಿಂದ 20 ಸಾವಿರ ಟನ್ ಕಬ್ಬು ನುರಿಸುವ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತದೆ ಎಂದು ರಾಜ್ಯಸಭೆ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದರು. 

ಇಲ್ಲಿನ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಚಿಕ್ಕೋಡಿ ಇದರ 54ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಚಿಕ್ಕೋಡಿ ತಾಲೂಕಿನ ಎರಡು ಮತ್ತು ರಾಯಬಾಗ ತಾಲೂಕಿನಲ್ಲಿ ಒಂದು ಹೀಗೆ ಮೂರು ಏತ ನೀರಾವರಿ ಯೊಜನೆಗೆ ಮಂಜೂರಾತಿ ನೀಡಲಿದೆ. ಇದರಿಂದ ರೈತರು ಬೆಳೆದ ಕಬ್ಬು ಹೆಚ್ಚಿಗೆ ಬರುವುದರಿಂದ ಕಾರ್ಖಾನೆಯ ಕಬ್ಬು ನುರಿಸುವ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತದೆ ಎಂದರು. 

ಈಗಾಗಲೇ  ಇಥಿನಾಲ ಘಟಕದ ಕೆಲಸ ಪ್ರಗತಿಯಲ್ಲಿದೆ. ಮುಂದಿನ ವರ್ಷದಿಂದ  2 ಲಕ್ಷ ಲೀಟರ ಇಥಿನಾಲ್ ಉತ್ಪಾದನೆ ಮಾಡುವ ಗುರಿ ಇದೆ ಎಂದರು. ಸರಕಾರದ ದೋರಣೆಯಿಂದ ಸಕ್ಕರೆ ಉದ್ಯಮ ನೆಲ ಕಚ್ಚಿದೆ. ಇಡೀ ಜಗತ್ತಿನಲ್ಲಿ ಭಾರತ ಹೆಚ್ಚು ಸಕ್ಕರೆ ಉತ್ಪಾದನೆ ಮಾಡು  ದೇಶವಾಗಿದೆ. ಪೆಟ್ರೋಲ್‌ಗೆ ಇಥಿನಾಲ್ ಮಿಕ್ಸ ಮಾಡುವುದರಿಂದ ಸಕ್ಕರೆ ಉದ್ಯಮ ಬೆಳೆಯಲು ಅನುಕೂಲವಾಗಿದೆ ಎಂದರು. 

ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ. ಸಕ್ಕರೆ ಉಪ ಉತ್ಪಣಗಳು ಮಾಡಿದರೆ ಮಾತ್ರ ರೈತರಿಗೆ ಹೆಚ್ಚಿನ ದರ ಕೊಡಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಕೋಜನರೇಶನ್ ಅಳವಡಿಸಿದ್ದು ನಮ್ಮ ಸಹಕಾರಿ ಸಕ್ಕರೆ ಕಾರ್ಖಾನೆಗೆ ಶ್ರೇಯಸ್ಸು ಹೋಗುತ್ತದೆ. ಕೋರೆಯವರ ದೂರದೃಷ್ಟಿಯಿಂದ ಕಾರ್ಖಾನೆ ಸದ್ಯ 10 ಸಾವಿರ ಟನ್ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿದೆ. ರೈತರು ಹೆಚ್ಚಿಗೆ ಕಬ್ಬು ಕೊಟ್ಟರೇ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ ಎಂದರು. 

ಕಾರ್ಖಾನೆಯ ಸಂಚಾಲಕ ಅಮಿತ ಕೊರೆ ಮಾತನಾಡಿ. ಸಹಕಾರಿ ತಳಹದಿ ಮೇಲೆ ನಡೆಯುವ ಕಾರ್ಖಾನೆ ಉಳಿಸಿ ಬೆಳೆಸುವ ದೃಷ್ಠಿಯಿಂದ ರೈತರು ಹೆಚ್ಚು ಕಬ್ಬು ನೀಡಬೇಕು. ಈ ಹಿಂದೆ ಕಾರ್ಖಾನೆ ಸದಸ್ಯರು ರಸ್ತೆ ಅಪಘಾತದಲ್ಲಿ ಮೃತರಾದರೆ ಅವರಿಗೆ 1 ಲಕ್ಷ ರೂ ವಿಮೆ ಪರಿಹಾರ ನೀಡಲಾಗುತ್ತಿತ್ತು. ಅದನ್ನು 10 ಲಕ್ಷ ರೂಗೆ ಹೆಚ್ಚಿಗೆ ಮಾಡಲಾಗುತ್ತದೆ. ಕಾರ್ಖಾನೆಯಲ್ಲಿ ಸೋಲಾರ ಯುನಿಟ್ ಪ್ರಾರಂಭ ಮಾಡಿ ವಿದ್ಯುತ್ ಪಡೆಯಲಾಗಿದೆ. ರೈತರು ಸಹಕಾರ ಮಾಡುತ್ತಾ ಬಂದರೇ ಈ ಕಾರ್ಖಾನೆಯು ದೇಶದಲ್ಲಿ ನಂಬರ ಒನ್ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿ ರೂಪುಗೊಳ್ಳಲಿದೆ ಎಂದರು. 

ಅಧ್ಯಕ್ಷತೆಯನ್ನು ಕಾರ್ಖಾನೆ ಅಧ್ಯಕ್ಷ ಭರತೇಶ ಬನವಣೆ ವಹಿಸಿ ಮಾತನಾಡಿದ ಅವರು, ಕಾರ್ಖಾನೆಯ ರೈತ ಸದಸ್ಯರಿಗೆ ಒಂದು ಟನ್ ಕಬ್ಬಿಗೆ ಅರ್ಧ ಕೆಜಿ ಸಕ್ಕರೆ ನೀಡಲಾಗುತ್ತಿತ್ತು. ಆಡಳಿತ ಮಂಡಳಿ ಸದಸ್ಯರ ಜೊತೆ ಚರ್ಚೆ ನಡೆಸಿ ಪ್ರತಿ ಟನ್ ಕಬ್ಬಿಗೆ ಒಂದು ಕೆಜಿ ಸಕ್ಕರೆ ವಿತರಿಸುವ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದರು. 

ಇದೇ ಸಂದರ್ಭದಲ್ಲಿ ಕೃಷಿ ಪಂಡಿತ ರುದ್ರಕುಮಾರ ಹಾಲಪ್ಪನ್ನವರ  ಕೃಷಿ ಕುರಿತು ಬರೆದ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. 

ವೇದಿಕೆ ಮೇಲೆ ಸಂಚಾಲಕರಾದ ಸಂದೀಪ ಪಾಟೀಲ, ಚೇತನ ಪಾಟೀಲ, ಅಜೀತ ದೇಸಾಯಿ, ಬಾಳಗೌಡ ರೇಂದಾಳೆ, ಸುಭಾಷ ಕಾತ್ರಾಳೆ ಮುಂತಾದವರು ಇದ್ದರು.  

ಕಾರ್ಖಾನೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಕೋರೆ ಸ್ವಾಗತಿಸಿದರು. ಕಾರ್ಮಿಕ ಅಧಿಕಾರಿ ಎಸ್‌.ಎಲ್‌.ಹಕಾರೆ ನಿರೂಪಿಸಿದರು.  

============================================== 

ಇನ್ನೂ 25 ವರ್ಷ ಸಾರ್ವಜನಿಕ ಸೇವೆ ಮಾಡುತ್ತೇನೆ 

ನನಗೆ ಎಲ್ಲರ ಆಶಿರ್ವಾಧ ಇರುವುದರಿಂದ ನಾನು ಇನ್ನೂ 20 ವರ್ಷ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವ ಇಚ್ಚೆ ಇದೆ. ನನಗೆ ವಯಸ್ಸು ಆಗಿಲ್ಲ. ಯುವಕರಂತೆ ನಾಡಿನಾಧ್ಯಂತ ಸಂಚರಿಸಿ ಬಡವರಿಗೆ ಅನುಕೂಲವಾಗಲು ಮತ್ತು ಪ್ರತಿಯೊಬ್ಬರಿಗೆ ಆರೋಗ್ಯ ಸೇವೆ ಸಿಗಲು ಸಂಸ್ಥೆಯನ್ನು ಕಟ್ಟುತ್ತಿದ್ದೇನೆ. ಸದ್ಯ ನಾನು ನಿವೃತ್ತಿ ತೆಗೆದುಕೊಳ್ಳುವುದಿಲ್ಲ. 

                            ಡಾ,ಪ್ರಭಾಕರ ಕೋರೆ 

                             ಕೆಎಲ್‌ಇ ಕಾರಾ​‍್ಯಧ್ಯಕ್ಷರು 


ಸುದ್ದಿ ಓದಿ