ಅತ್ಯುತ್ತಮ ಸೇವೆ ಸಲ್ಲಿಸಿ ಬ್ಯಾಡಗಿಯಿಂದ ರಾಣೆಬೆನ್ನೂರಿಗೆ ವರ್ಗಾವಣೆಗೊಂಡ ಚವಡಾಳ
ಬ್ಯಾಡಗಿ. 28 : ಪಟ್ಟಣದ ಎಲ್‌ಐಸಿ ಜೀವವಿಮಾ ನಿಗಮದ ಶಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ಶಾರದಾ ನರೇಂದ್ರನಾಥ್ ಚವಡಾಳ್ ಅವರು ಪಾಲಿಸಿ ದಾರರಿಗೆ ಮತ್ತು ಪ್ರತಿನಿಧಿಗಳಿಗೆ ಅಭಿವೃದ್ಧಿ ಅಧಿಕಾರಿಗಳಿಗೆ ಉಪಶಾಖೆಗೆ ಅತ್ಯುತ್ತಮವಾಗಿ ಹಾಗೂ ಪಾರದರ್ಶಕವಾಗಿ ಸೇವೆ ಸಲ್ಲಿಸಿದ್ದು ಸದಾ ಸ್ಮರಿಸಲಾಗುವುದು ಎಂದು ರಾಣೆಬೆನ್ನೂರು ಶಾಖೆಯ ವೈವಸ್ಥಾಪಕರಾದ ಡಾ. ರಾಜೇಶ್ ಗಾಂವಕರ ಅಭಿವ್ಯಕ್ತ ಪಡಿಸಿದರು.
ಪಟ್ಟಣದ ಎಲ್‌ಐಸಿ ಜೀವ ವಿಮಾ ನಿಗಮ ಶಾಖೆಯಲ್ಲಿ ಶಾರದಾ ಚವಡಾಳ್ ಅವರು ರಾಣೆಬೆನ್ನೂರು ಶಾಖೆಗೆ ವರ್ಗಾವಣೆಗೊಂಡ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇದೇ ವೇಳೆ ಪಶುವೈದ್ಯಾಧಿಕಾರಿ ನರೇಂದ್ರನಾಥ ಚೌವಡಾಳ ಅವರು ಮಾತನಾಡಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಶಾರದಾ ಅವರಿಗೆ ಪ್ರತಿಯೊಬ್ಬ ವಿಮಾ ಪ್ರತಿನಿಧಿಗಳಾಗಲಿ ಮತ್ತು ಶಾಖಾಧಿಕಾರಿ ಗಳು ಅವರಿಗೆ ಸಹಕರಿಸಿ ಪ್ರತಿಯೊಂದು ವಿಷಯದಲ್ಲಿ ಉತ್ತಮ ಸೇವೆ ಸಲ್ಲಿಸಿಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.ಬ್ಯಾಡಗಿ ಉಪಶಾಖೆ ವೈವಸ್ಥಾಪಕ ಗೋಪಾಲಕೃಷ್ಣ ಆಚಾರಿ ಮಾತನಾಡಿದರು.ಪ್ರತಿನಿಧಿಗಳ ಸಂಘದ ಅಧ್ಯಕ್ಷ ನಾಗರಾಜ ಗುತ್ತಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್ ಬಿ ದೊಡ್ಡಮನಿ. ಎ.ಎಂ ಖಾಜಿ. ಎಸ್ ಎಸ್ ಜೋಶಿ ನೀಲಪ್ಪ ಕೊಳೇರ. ವಿಜಯ ಬಾಬು ಹಡಪದ. ಸಿಬ್ಬಂದಿ ಗೀರೀಶ್ ಕಾಯಕದ. ಜೀವ ವಿಮಾ ಸಲಹೆಗಾರ ಚಂದ್ರಶೇಖರ್ ಹುದ್ದಾರ.ಕಾರ್ಯದರ್ಶಿ ಮಹಾಂತೇಶ್ ಎಲಿ.ಗುಡ್ಡಪ್ಪ ಯತ್ನಳ್ಳಿ.ವೀರೆಶ ಗಜ್ಜರಿ ನಾಗರಾಜ ಶಿಗಿಹಳ್ಳಿ.ಮೃತುಂಜಯ ರಾಮಗುಂಡೆನಹಳ್ಳಿ.ಮಾಲತೇಶ ಕಮ್ಮಾರ.ಸೋಮಣ್ಣ ಆನ್ವೇರಿ.ಶಿವಪ್ಪ ವಡ್ಡರ.ಗಣೇಶ ಸೊಮನಕಟ್ಟಿ.ಗಣೇಶ ಘಾಳಪೂಜಿ.ವೀಣಾ ಹುದ್ದಾರ.ಅಶ್ವಿನಿ ದೊಡ್ಮನಿ.ನಾಗಮ್ಮಾ ಸೂರಣಗಿ. ಅನೇಕರು ಉಪಸ್ಥಿತರಿದ್ದರು.