ಬಳ್ಳಾರಿ

ದಲಿತ ಸೇನೆ ಘರ್ಜನೆ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ದಲಿತ ಸೇನೆ ಘರ್ಜನೆ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಬಳ್ಳಾರಿ 26: ನಗರದ ಅನಂತಪುರ ರಸ್ತೆಯ  ಬಿಡಿಡಿಎ ಸಭಾಂಗಣದಲ್ಲಿ ಭಾರತ ಸಂವಿಧಾನದ ಮುಂದಿನ ಸಾವಲುಗಳು ಮತ್ತು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

ಈ ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಬಿ ಅರ್  ಭಾಸ್ಕರ್ ಪ್ರಸಾದ್ ದಲಿತ ಹೋರಾಟಗಾರರು ಚಿಂತಕರು ಬೆಂಗಳೂರು, ಹಾಗೂ ಹರಿರಾಮ್ ಖ್ಯಾತ ವಕೀಲರು ಚಿಂತಕರು. ಬೆಂಗಳೂರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಸೇನೆಯ ರಾಜ್ಯಧ್ಯಕ್ಷ ಹನುಮಂತ ಜಿ ಯಳಸಂಗಿ ವಹಿಸಿದರು. ತರುವಾಯ ಕಾರ್ಯಕ್ರಮವನ್ನು ಜ್ಯೋತಿ ಮೂಡಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಹಾಗೂ ಸುಮಾರು 3000 ಜನಸಂಖ್ಯೆಯು ಜಿಲ್ಲೆಯ ಸುತ್ತಮುತ್ತ ಇರುವ ಗ್ರಾಮಾಂತರ ಹಾಗೂ ನಗರ ವತಿಯಿಂದ ಜನರು ಈ ಕಾರ್ಯಕ್ರಮದಲ್ಲಿ  ನರೆದಿದ್ದರು.  

ಅತಿಥಿಗಳಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಡಾ ಶ್ರೀನಿವಾಸ ಕೋಲಾರ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಾದ ಬೀದರ್ ಗುಲ್ಬರ್ಗ ಬೆಂಗಳೂರು ಕೋಲಾರ ವಿಜಾಪುರ ಬಾಗಲಕೋಟೆ ರಾಯಚೂರು ತುಮಕೂರು ಚಿತ್ರದುರ್ಗ ಜಿಲ್ಲಾಧ್ಯಕ್ಷರುಗಳು ಆಗಮಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿಜಯನಗರ ಜಿಲ್ಲೆಯ ಶಿವಶಂಕರ್  ನಡೆಸಿಕೊಟ್ರೆ ವಂದನಾರೆ​‍್ಣಯನ್ನು ಜಿಲ್ಲಾಧ್ಯಕ್ಷ ಕಟ್ಟೆ ಸ್ವಾಮಿ ನಡೆಸಿಕೊಟ್ಟರು. ನಂತರ ಜಿಲ್ಲಾ ಪದಾಧಿಕಾರಿಗಳ ಆಯ್ಕೆಯಾಗಿ ಜಿಲ್ಲಾಅಧ್ಯಕ್ಷರಾಗಿ ದಲಿತ  ಯುವನಾಯಕ ಕಟ್ಟೇಸ್ವಾಮಿ  ಆಯ್ಕೆ ಮಾಡಿ ಸನ್ಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ರತ್ನಯ್ಯ, ಉಪಾಧ್ಯಕ್ಷರಾಗಿ  ರಾಜು ಕುರುವಳ್ಳಿ,  ಮಾನಪ್ಪ ಕೊಳಗಲ್ಲು, ಕುಮಾರಸ್ವಾಮಿ ಸಂಡೂರು, ಜಿಲ್ಲಾ ಯುವ ಅಧ್ಯಕ್ಷರಾಗಿ ಕುಮಾರ್, ಕಾನೂನು ಸಲಹೆಗಾರರಾಗಿ ಪ್ರಹ್ಲಾದ್, ನಗರ ಅಧ್ಯಕ್ಷರಾಗಿ ತಾಯಣ್ಣ, ನಗರ ಯುವ ಅಧ್ಯಕ್ಷರಾಗಿ ಮುಂಡರಗಿ ಸಿದ್ದೇಶ್, ಶಿವು, ಸಂಘಟನಾ ಕಾರ್ಯದರ್ಶಿಯಾಗಿ ಮುರಳಿಕೃಷ್ಣ, ಸಹ ಸಂಘಟನಾ ಕಾರ್ಯದರ್ಶಿಯಾಗಿ ಮೇಘನಾಥ, ಶ್ರೀರಾಮ,  ವಿವಿಧ ತಾಲುಕು ಅಧ್ಯಕ್ಷರು ಇನ್ನೂ ಅನೇಕ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಡೂರು ತಾಲೂಕು ಅಧ್ಯಕ್ಷರಾಗಿ ರಾಜೇಶ್ ಹೆಗಡೆ ಆಯ್ಕೆಯಾದರು. ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಪದಾಧಿಕಾರಿಗಳು, ತಾಲೂಕು ಪದಾಧಿಕಾರಿಗಳು, ಹಾಗೂ ದಲಿತ ಮುಖಂಡರು, ಸದಸ್ಯರು ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ