ಸಮಾಜದಲ್ಲಿ ಸಮಾನತೆಗೆ ಪ್ರತಿಯೊಬ್ಬರೂ ಸೇವಾಮುಖಿಯಾಗಬೇಕು: ಡಾ. ಲಕ್ಷ್ಮಣ
ರಾಣಿಬೆನ್ನೂರ 17: ಸಮಾಜದಲ್ಲಿ ಸಮಾನತೆ ಕಾಣಬೇಕಾದರೇ, ಪ್ರತಿಯೊಬ್ಬರೂ ತಮ್ಮ ದುಡಿಮೆಯ ಕೆಲವು ಭಾಗ ಸಮಾಜ ಸೇವೆಗಾಗಿ ಮೀಸಲಿಡುವುದರ ಮೂಲಕ ಆತ್ಮ ತೃಪ್ತಿ ಕಂಡುಕೊಳ್ಳಲು ಮುಂದಾಗಬೇಕಾದ ಇಂದಿನ ಬಹು ಅಗತ್ಯವಾಗಿದೆ ಎಂದು ರೋಟರಿ ಸಂಸ್ಥೆಯ 2021-22ನೇ ಸಾಲಿನ ನೂತನ ಅಧ್ಯಕ್ಷ ಡಾ. ಲಕ್ಷ್ಮಣ್ ಕೆ. ಚಳಗೇರಿ ಹೇಳಿದರು
ಅವರು ಶುಕ್ರವಾರ ನಗರ ಹೊರವಲಯದ ಠ್ಯಾಗೂರ್ ಶಿಕ್ಷಣ ಸಂಸ್ಥೆಯ ರೋಟರಿ ಕಾಲೇಜು ಸಭಾಭವನದಲ್ಲಿ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ರೋಟರಿ ಅಂತರಾಷ್ಟ್ರೀಯ ಸಂಸ್ಥೆಯು ತನ್ನದೇ ಆದ ವಿಶೇಷ ಸೇವಾ ಯೋಜನೆಗಳಲ್ಲಿ ಜನಪರ ಕಾರ್ಯಗಳನ್ನು ಮಾಡುತ್ತಾ ಜನರ ಧ್ವನಿಯಾಗಿ ತನ್ನ ಪಾಲಿನ ಕರ್ತವ್ಯ ನೆರವೇರಿಸುತ್ತಲಿದೆ. ಸಂಸ್ಥೆಗೆ ತನ್ನದೇ ಆದ ಬಹುದೊಡ್ಡ ಇತಿಹಾಸವಿದೆ ಸೇವಾ ಪರತೆಯೇ ಮುಖ್ಯ ಗುರಿಯಾಗಿರಿಸಿಕೊಂಡಿರುವ ರೋಟರಿ ರಾಜ್ಯ, ಜಿಲ್ಲೆ ಮತ್ತು ತಾಲೂಕಿನಲ್ಲಿ ಅತ್ಯಂತ ಪರಿಣಾಮಕಾರಿಗೆ ತನ್ನ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದ ಅವರು ಭವಿಷ್ಯದ ದಿನಗಳಲ್ಲಿ ಈ ಭಾಗದ ವಿಶೇಷತೆಯ ಬಗ್ಗೆ ಅರಿತುಕೊಂಡು ಅದರ ಬಗ್ಗೆ ಮತ್ತಷ್ಟು ಕ್ರೀಯಾ ಯೋಜನೆಗಳನ್ನು ರೂಪಿಸುವ ಮೂಲಕ ಹೊಸ-ಹೊಸ ಯೋಜನೆಗಳನ್ನು ಜಾರಿಗೆ ತರುವ ಸಂಕಲ್ಪ ತಮ್ಮದಾಗಿದ್ದು ಇದಕ್ಕೆ ನಾಗರೀಕರ ಮತ್ತು ಸದಸ್ಯರು ಸಹಕಾರ ನೀಡಬೇಕೆಂದು ಕೋರಿದರು.
ಜಿಲ್ಲಾ ಸಹಾಯಕ ಮಾಜಿ ರಾಜ್ಯಪಾಲ ರೋಟರಿ ಪ್ರಕಾಶ್ ಗುಪ್ತಾ ಅವರು ಡಾಽಽ ಲಕ್ಷ್ಮಣ್ ಚಳಗೇರಿ ಅವರ ತಂಡದವರಿಗೆ ಪ್ರಮಾಣವಚನ ಭೋದಿಸಿದರು. ಮತ್ತು ಇನ್ನರ್ವೀಲ್ ಹಿರಿಯ ಸದಸ್ಯೆ ಜಯಾ ಶ್ರೀನಿವಾಸ ಅವರು ನೂತನ ಅಧ್ಯಕ್ಷೆ ಪೂಜಾ ವಿರೂಪಣ್ಣನವರ ತಂಡದವರಿಗೆ ಪ್ರಮಾಣವಚನ ಬೋಧಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ಡಾ.ಎಚ್.ಎಸ್.ಬೆಳವಿಗಿ, ಇನ್ನರ್ವೀಲ್ ಕಾರ್ಯದರ್ಶಿ ಸುಷ್ಮಾ ನಾಡಿಗೇರ, ಮಾಜಿ ಸಹಾಯಕ ರಾಜ್ಯಪಾಲ ಈಶ್ವರಗೌಡ ಪಾಟೀಲ, ಸಹಕಾರ್ಯದರ್ಶಿ ಡಾಽಽ ರವೀಂದ್ರ ಮುಡದ್ಯಾವಣ್ಣನವರ, ಜೇರ್ಮನ್ ಡಾ. ಬಿ.ಎಸ್.ಕೇಲಗಾರ, ಕಾರ್ಯದರ್ಶಿ ಕೆ.ಬಿ.ಶ್ರೀನಿವಾಸ ಸೇರಿದಂತೆ ಅನೇಕ ಸದಸ್ಯರು ಪಾಲ್ಗೊಂಡಿದ್ದರು.
ಸುಷ್ಮಾ ನಾಡಗೇರ ಪ್ರಾರ್ಥಿಸಿದರು, ಮಾಜಿ ಅಧ್ಯಕ್ಷ ರೋ. ಜಗದೀಶ ಕಲ್ಯಾಣಿ ಸ್ವಾಗತಿಸಿ, ಬಿ.ಜೆ.ಹಿರೇಮಠ, ಇಂದ್ರಾ ಹಿರೇಮಠ ನಿರೂಪಿಸಿ, ಕಾರ್ಯದರ್ಶಿ ಎಚ್.ಎಸ್.ಬೆಳವಿಗಿ ವಂದಿಸಿದರು.