ಶಾಂಪೇನ್ ಸಂಭ್ರಮ : ಕ್ಷಮಿಸಿ ಎಂದ ರಚಿತಾ
ಬೆಂಗಳೂರು, ನ. 13:‘ಏಕ್ ಲವ್ ಯಾ’ ಚಿತ್ರದ ವಿಡಿಯೋ ಸಾಂಗ್ ಬಿಡುಗಡೆ ವೇಳೆ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ಶಾಂಪೇನ್ ಬಾಟಲ್ ಓಪನ್ ಮಾಡಿ ಚಿಯರ್ಸ್ ಹೇಳಿ ಚಿಮ್ಮಿಸಲಾಯಿತು.
ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿದ ಕ್ಷಣದಲ್ಲೇ ಈ ಬಗೆಯ ಸಂಭ್ರಮ ನಡೆದಿರುವ ಕಾರಣ ‘ಇದೆಲ್ಲಾ ಬೇಕಿತ್ತಾ?’ ಕಾಟಾಚಾರಕ್ಕೆ ಆತ್ಮಕ್ಕೆ ಶಾಂತಿ ಕೋರಿದಂತೆ ಮಾಡಿ ಸಂಭ್ರಮಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ನಟಿ ರಚಿತಾ ರಾಮ್ ಟ್ವಿಟರ್ ಮೂಲಕ ಕ್ಷಮೆ ಯಾಚಿಸಿದ್ದಾರೆ.
“ಏಕ್ ಲವ್ ಯಾ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ಅಪ್ಪು ಭಾವಚಿತ್ರದ ಎದುರು ಶಾಂಪೇನ್ ಬಾಟಲ್ ಓಪನ್ ಮಾಡಿ ಹಾಡನ್ನು ಬಿಡುಗಡೆಗೊಳಿಸಿರುವ ಬಗ್ಗೆ ನಿಮಗೆಲ್ಲ ಅಸಮಾಧಾನವಾಗಿದೆ. ನಾನೂ ಕೂಡ ಚಿತ್ರತಂಡದ ಭಾಗವಾಗಿರುವ ಕಾರಣ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.