ಚಂಪಾ ಒಂದು ವ್ಯಕ್ತಿಯಲ್ಲ ಅದೊಂದು ದೈತ್ಯ ಶಕ್ತಿ
ಶಿಗ್ಗಾವಿ 11: ಚಂಪಾ ಒಂದು ವ್ಯಕ್ತಿಯಲ್ಲ ಅದೊಂದು ದೈತ್ಯ ಶಕ್ತಿ, ಬಂಡಾಯದ ಗಟ್ಟಿ ಧ್ವನಿ, ನವ್ಯ ಪ್ರಗತೀಶೀಲ ಬಂಡಾಯ ಎಲ್ಲ ಪ್ರಕಾರಗಳಲ್ಲೂ ತನ್ನ ಮೈಚಾಚಿ ಬೆಳೆದು ನಿಂತ ಬೃಹತ ಆಲದಮರವದು ಎಂದು ರಂಬಾಪುರಿ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್. ವ್ಹಿ. ಕುಲಕರ್ಣಿ ಹೇಳಿದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಪಟ್ಟಣದ ಚನ್ನಪ್ಪ ಕುನ್ನೂರ ಪದವಿ ಪೂರ್ವ ಕಾಲೇಜಿನಲ್ಲಿ ಏರಿ್ಡಸಿದ ಚಂಪಾ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಚಂಪಾ ಅವರಿಗೆ ನುಡಿ-ನಮನ ಸಲ್ಲಿಸಿ ಮಾತನಾಡಿದರು. ಚಂಪಾ ಅವರೇ ಹೇಳಿದ ಆದಿಕವಿ ಪಂಪ ಅಂತ್ಯಕವಿ ಚಂಪಾ ಎಂಬ ಮಾತಿನಂತೆ ಚಂಪಾ ಅವರನ್ನು ಕಳೆದುಕೊಂಡ ಕನ್ನಡನಾಡು ಬಡವವಾಗಿದೆ. ಕನ್ನಡಕ್ಕೆ ಆತಂಕ ಕಾಡುತ್ತಿದೆ. ಆದರೆ ಕನ್ನಡ ಕನ್ನಡ ಬರಿ್ರ ನಮ್ಮ ಸಂಗಡ ಎಂಬ ಮಂತ್ರವಾಕ್ಯ ನಮ್ಮಲ್ಲಿ ಚೈತನ್ಯ ತುಂಬಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ತಾಲೂಕಾ ಕ.ಸಾ.ಪ. ಅಧ್ಯಕ್ಷ ಎಸ್. ಎನ್. ಮುಗಳಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಡಾ. ನಾಗರಾಜ ದ್ಯಾಮನಕೊಪ್ಪ, ಎಂ. ಆರ್. ಚೂರಿ, ಕ.ಸಾ.ಪ. ಕಾರ್ಯದರ್ಶಿ ಎಸ್. ಕೆ. ಹೂಗಾರ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಪ್ರಕಾಶ ಹಾದಿಮನಿ, ಶಂಕರಗೌಡ ಪಾಟೀಲ, ಆರ್. ಎಂ. ಬೂಸನಗೌಡ್ರ, ಕೆ. ಬಸಣ್ಣ, ಡಾ. ಕೆ. ಎಸ್. ಬರದೇಲಿ, ಎಸ್. ವ್ಹಿ. ಬಳಿಗಾರ, ಮುಂತಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಎಂ. ಎಸ್. ಕುರಂದವಾಡ, ಬಿ. ವೈ. ಉಪ್ಪಾರ, ಪಿ. ಎನ್. ಬಾರಕೇರ, ಸಿ. ಎಚ್. ಸೋಮನಕಟ್ಟಿ, ಎಸ್. ಎಫ್. ಅಕ್ಕಿ, ಕೆ. ಸಿ. ಹೂಗಾರ ಮುಂತಾದವರು ಇದ್ದರು. ಶಿಕ್ಷಕ ಬಿ. ಬಿ. ಸವಡಿ ಸ್ವಾಗತಿಸಿ ನಿರೂಪಿಸಿದರು.