ಬಾದಾಮಿ

ಚಾಲುಕ್ಯ ಸೇವಾ ರತ್ನ ಪ್ರಶಸ್ತಿ- ಬಾದಾಮಿ ಜಾನಪದ ಸಂಭ್ರಮ ಕಾರ್ಯಕ್ರಮ

ಚಾಲುಕ್ಯ ಸೇವಾ ರತ್ನ ಪ್ರಶಸ್ತಿ- ಬಾದಾಮಿ ಜಾನಪದ ಸಂಭ್ರಮ ಕಾರ್ಯಕ್ರಮ

ಬಾದಾಮಿ 31:  ಚಾಲುಕ್ಯರ ಆಳ್ವಿಕೆಯು ದಕ್ಷಿಣ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮತ್ತು ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಯುಗವನ್ನು ಗುರುತಿಸುತ್ತದೆ. ಬಾದಾಮಿ- ಬಾದಾಮಿ ಚಾಲುಕ್ಯರ ಆರೋಹಣದೊಂದಿಗೆ ದಕ್ಷಿಣ ಭಾರತದ ರಾಜಕೀಯ ವಾತಾವರಣವು ಸಣ್ಣ ಸಾಮ್ರಾಜ್ಯಗಳಿಂದ ದೊಡ್ಡ ಸಾಮ್ರಾಜ್ಯಗಳಿಗೆ ಸ್ಥಳಾಂತರಗೊಂಡಿತು. ದಕ್ಷಿಣ ಭಾರತ ಮೂಲದ ಸಾಮ್ರಾಜ್ಯವು ಕಾವೇರಿ ಮತ್ತು ನರ್ಮದಾ ನದಿಗಳ ನಡುವಿನ ಸಂಪೂರ್ಣ ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು ಮತ್ತು ಏಕೀಕರಿಸಿತು. ಈ ಸಾಮ್ರಾಜ್ಯದ ಉದಯವು ಸಮರ್ಥ ಆಡಳಿತ, ಸಾಗರೋತ್ತರ ವ್ಯಾಪಾರ ಮತ್ತು ವಾಣಿಜ್ಯದ ಜನ್ಮವನ್ನು ಕಂಡಿತು ಮತ್ತು ಚಾಲುಕ್ಯ ವಾಸ್ತುಶಿಲ್ಪ ಎಂಬ ಹೊಸ ಶೈಲಿಯ ವಾಸ್ತುಶಿಲ್ಪದ ಅಭಿವೃದ್ಧಿಯನ್ನು ಕಂಡಿತು. 9 ನೇ ಶತಮಾನದ ರಾಷ್ಟ್ರಕೂಟ ಆಸ್ಥಾನದಲ್ಲಿ ರಾಜಮನೆತನದ ಬೆಂಬಲವನ್ನು ಅನುಭವಿಸಿದ ಕನ್ನಡ ಸಾಹಿತ್ಯವು ಜೈನ ಮತ್ತು ವೀರಶೈವ ಸಂಪ್ರದಾಯಗಳಲ್ಲಿ ಪಶ್ಚಿಮ ಚಾಲುಕ್ಯರಿಂದ ಉತ್ಸಾಹಭರಿತ ಪ್ರೋತ್ಸಾಹವನ್ನು ಕಂಡುಕೊಂಡಿತು. 11 ನೇ ಶತಮಾನವು ಪೂರ್ವ ಚಾಲುಕ್ಯರ ಅಡಿಯಲ್ಲಿ ತೆಲುಗು ಸಾಹಿತ್ಯದ ಪ್ರೋತ್ಸಾಹವನ್ನು ಕಂಡಿತು ಎಂದು ಲೇಖಕ ಮತ್ತು ಪತ್ರಕರ್ತರಾದ ಸಿ. ವೈ.ಮೆಣಸಿನಕಾಯಿ  ಹೇಳಿದರು.        

ಹಗರಿಬೊಮ್ಮನಹಳ್ಳಿಯ ಸುಜ್ಞಾನ ವಿದ್ಯಾ ಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ, ಸಾಧಕರ ಶ್ರೀ ಮಾತಾ ಪ್ರಕಾಶನ ಕಡಲಬಾಳ ಇವರಿಂದ ಚಾಲುಕ್ಯ ಸೇವಾ ರತ್ನ ಪ್ರಶಸ್ತಿ ಹಾಗೂ ಬಾದಾಮಿ ಜಾನಪದ ಸಂಭ್ರಮ ಕಾರ್ಯಕ್ರಮ ಭಾನುವಾರ ಕನ್ನಡ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಾದಾಮಿಯಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ಆಯೋಜನೆಯಲ್ಲಿ ವಿಜಯನಗರ ಜಿಲ್ಲೆಯ ಡಾ.ನಾಗರಾಜ್ ತಂಬ್ರಳ್ಳಿ ಅವರ ಪರಿಶ್ರಮ ಶ್ಲಾಘನೀಯ ಎಂದರು.       

ಬಾದಾಮಿಯ ರವಿ ಹ ತಿರುಕಣ್ಣನವರ ಸಾಹಿತಿಗಳುರಚಿಸಿದ ರವಿ ರಚಿಸಿದ ಸಾಕ್ಷಿ ಇಲ್ಲಿದ ಸಾವು ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿ,  ಸನಾತನ ಕಾಲದಿಂದಲೂ ಸೂರ್ಯ  ಉದ್ಯೋಗದಿಂದ ರಾತ್ರಿವರೆಗೆ ಗ್ರಾಮೀಣ ಪ್ರದೇಶದಲ್ಲಿ ಜಾನಪದ ಸಾಹಿತ್ಯ ಉಗಮವಾಗುತ್ತಿದ್ದು . ಈಗ ತಂತ್ರಜ್ಞಾನ ಬೆಳೆದಿದೆ ಇದು ಕ್ಷೀಣಿಸುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು.ನಮ್ಮ ಪೂರ್ವಜರು ಬೆಳಿಗ್ಗೆ ಎದ್ದು ಮನೆಯಲ್ಲಿ ಕಸ ಗುಡಿಸುವುದು ಮನೆ ಅಂಗಳದಲ್ಲಿ ಸಾಗಣೆ ಸಾರಿಸಿ ರಂಗೋಲಿ ಹಾಕಿ, ತಮ್ಮ ಪತಿಯು ಗೋವುಗಳನ್ನು ಎಚ್ಚರಿಸಿ ಹಾಲು ಕುಡಿಯುವುದು, ಮಕ್ಕಳ ಆರೈಕೆಯಲ್ಲಿ ಹಾಡುಗಳು ಹೊಲ ಗದ್ದೆಗಳಲ್ಲಿ ದುಡಿಯುವ ಸಂಧರ್ಭದಲ್ಲಿ  ಪಸಲು ಬಂದಮೇಲೆ ರಾಗಿ,ಜೋಳ, ಹೆಸರು ಇತ್ಯಾದಿ ಹಸನ ಮಾಡುವಾಗ ಜಾನಪದ ಒಬ್ಬರ ಬಾಯಿಯಿಂದ ಇನ್ನೂ ಬ್ಬರು ಬಾಯಿಂದ ಹಾಡುಗಳು ಕೇಳಿದರೆ  ಮನಸ್ಸಿಗೆ ನೆಮ್ಮದಿ ತರುತ್ತದೆ. ಆದರೆ ಇಂದಿನ ಸಾಹಿತಿಗಳು ತಮ್ಮ ಮನಸ್ಸಿಗೆ ಬಂದಂತೆ ಸುರಿಯುವುದನ್ನು ಬಿಟ್ಟು. ಗ್ರಾಮೀಣ ಪ್ರದೇಶದಲ್ಲಿ ಜಾನಪದ ಹಾಡುಗಳನ್ನು ಸಂಗ್ರಹಿಸಿ ಅದನ್ನು ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿ ಎಂದರು.ಕಲೆ, ಸಾಹಿತ್ಯ, ಸಂಗೀತ, ನೃತ್ಯ ರಂಗಭೂಮಿ, ಜಾನಪದ ಕಲೆಗಳು ನಮ್ಮ ಪರಂಪರೆಯನ್ನು ಬಿಂಬಿಸುವ ಮೂಲಕ ಜನ ಮನ್ನಣೆ ಪಡೆದಿದೆ  ಎಂದು ಹುಬ್ಬಳ್ಳಿಯ ಶ್ರೀ ಗುರು ಆಧ್ಯಾತ್ಮ ಆಶ್ರಮದ ಡಾ.ಅವಧೂತ ಮಹರ್ಷಿ ಸಿದ್ಧಾರ್ಥ ಸ್ವಾಮಿಜಿಗಳು ಹೇಳಿದರು.    ಒಂದು ಕಲೆ ಅನಾವರಣಕ್ಕೆ ಗುರುವಿನ ಮಾರ್ಗದರ್ಶನದಿಂದ ಮಾತ್ರ ಸಾಧ್ಯ.ಗುರುವಿಗೆ ಗೌರವದಿಂದ ಪೂಜಿಸುವ ಮೂಲಕ ಎಂತಹಾ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.ಡಾ.ವೀರಯ್ಯ ಸ್ವಾಮಿಗಳು ಬಾದಾಮಿ ಶ್ರೀ ಸಿದ್ಧರಾಮ ಶಿವ ಯೋಗಿಶ್ವರ ಮಠ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ನಾಡಿನಲ್ಲಿಡೆ ಇಂದ ಆಗಮಿಸಿದ ಸಾಧಕರಿಗೆ ಚಾಲುಕ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ಲಾಘನೀಯ.  

ಈ ಪ್ರಶಸ್ತಿಯನ್ನು ಪಡೆದ ನೀವುಗಳು ನಿಮ್ಮ ಊರಿನಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜಿಸಿ ಕಲೆ ಸಾಹಿತ್ಯ ಸಂಗೀತ ನೃತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಗಳನ್ನು ಮಾಡಿ ಎಂದು  ಆಶೀರ್ವಚನ ನೀಡಿದರು.ಡಾ. ನಾಗರಾಜ ತಂಬ್ರಳ್ಳಿ ಅಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ ಹಗರಿಬೊಮ್ಮನಹಳ್ಳಿ, ಹೋರಕೇರಿ ಅಧ್ಯಕ್ಷರು ಕ.ಸ ಪ.ಬಾದಾಮಿ, ಹಿರೇಮಠ್ ಅಧ್ಯಕ್ಷರು ಅಶ್ವಿನಿ ಪ್ರಕಾಶನ ಗದಗ, ಕಾವ್ಯಂಜಲಿ ಹೊಸಪೇಟೆ, ಜ್ಯೋತಿ ಬಾದಾಮಿ, ಚಿನ್ನು ಕೊಪ್ಪಳ, ಅನುಸೂಯ,ಗೊಂವಿದಪ್ಪ,ಕೊಡದಪ್ಪ ನಗರ ಸಭೆ ಅಧ್ಯಕ್ಷರು,ಇತರರು ವೇದಿಕೆಯಲ್ಲಿದ್ದರು.ಜನಮನ ಸೆಳೆದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಜೂನಿಯರ್ ರವಿಚಂದ್ರನ್ (ಚಿನ್ನು ಕೊಪ್ಪಳ) ಸಿಂಧು ಹಗರಿಬೊಮ್ಮನಹಳ್ಳಿ , ಕೆ ಆರ್ ಅನುಶ್ರೀ ಮಾಲವಿ ಭರತನಾಟ್ಯ,  ಮಲ್ಲಿಕಾರ್ಜುನ ಗೌಡ ಕುಲಕರ್ಣಿ ಗಂಗಾವತಿ, ಕೊಪ್ಪಳ ಕಲಾ ತಂಡಗಳ  ಸುಗಮ ಸಂಗೀತ, ಜಾನಪದ,ಶ್ರೀ ಮಾರುತೇಶ್ವರ ಭಜನಾ ಮಂಡಳಿ ನಾಗರಾಳ ತಾಂಡಾ ಭಜನೆ , ಭಕ್ತಿ ಗೀತೆಗಳ ಕಾರ್ಯಕ್ರಮ ಪ್ರದರ್ಶನ ನೀಡಿದರು. ಕಲಾವಿದವಿಠಲ್ ಹೆಚ್,ಅಪ್ಪು ರಾಯಚೂರು ಕಾರ್ಯಕ್ರಮ ನಿರೂಪಿಸಿದರು.ಕು ಪವಿತ್ರ ಸ್ವಾಗತಿಸಿದರು. 


ಸುದ್ದಿ ಓದಿ