ಜಂಬಗಿಯಲ್ಲಿ ಹನುಮಾನ್ ಜಯಂತಿ: ಕುಸ್ತಿ ಪ್ರೇಮಿಗಳ ಮನತಣಿಸಿದ ಪಂದ್ಯಾಟ

ಸಂಬರಗಿ 24: ಜಂಬಗಿ ಗ್ರಾಮದ ಹೊರವಲಯ ಮಾಳಿನಗರದಲ್ಲಿ ಹನುಮಾನ್ ಜಯಂತಿ ನಿಮಿತವಾಗಿ ಫಿಲಂಸ್ಟಾರ್ ಹೀರೋಯಿನ್ ಅಲಕಾ ಕುಬಲ್ ಮುಂಬೈದಿಂದ ಜಂಬಗಿ ಗ್ರಾಮಕ್ಕೆ ಆಗಮಿಸಿ ಹನುಮಾನ್ ದೇವರ ದರ್ಶನ ಪಡೆದ  ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು. ಪ್ರತಿ ವರ್ಷ ಹನುಮ ಜಯಂತಿ ವಿಜೃಂಭಣೆಯಿಂದ ನಡೆಯಲಿ ಎಂದು ಹಾರೈಸಿ ಹನುಮಾನ ದೇವಸ್ಥಾನ ಸಮಿತಿ ಅಧ್ಯಕ್ಷ ಮಾಣಿಕ್ ಸೂರ್ಯವಂಶಿ ಕುಟುಂಬ ಸಮೇತರಾಗಿ ಅವರನ್ನು ಸತ್ಕರಿಸಲಾಯಿತು. 

ರಾಹುಲ್  ಸೂರ್ಯವಂಶಿ ತೇಜಸ್ ಸೂರ್ಯವಂಶಿ ಕಮಿಟಿ ಎಲ್ಲ ಸದಸ್ಯರು ಉಪಸ್ಥಿತರಿದ್ದರು. 

ಹನುಮ ಜಯಂತಿಯಂದು ಅಂತರಾಷ್ಟ್ರೀಯ ಮಟ್ಟದ ಕುಸ್ತಿಪಟು ದೇವ ಥಾಪಾ ನೇಪಾಳ ಕಠ್ಮಂಡು ಮತ್ತು ಕುಸ್ತಿಪಟು ನವೀನಕುಮಾರ್ ಹಿಮಾಚಲ ಪ್ರದೇಶ ಇವರ ಮಧ್ಯೆ ಕುಸ್ತಿ ಜರುಗಿ ಕೆಲವೇ ಕ್ಷಣಗಳಲ್ಲಿ ಕಠ್ಮಂಡುವಿನ ಕುಸ್ತಿಪಟು ದೇವಾ ವಿಜೇತರಾಗುವ ಮೂಲಕ ಮೂರು ಲಕ್ಷ ಬಹುಮಾನ ಗೆದ್ದರು. ಕುಸ್ತಿಗೆ ಹನುಮಾನ್ ದೇವಸ್ತಾನ ಸಮಿತಿಯಿಂದ ಮೂರು ಲಕ್ಷ ಬಹುಮಾನ ನೀಡಲಾಯಿತು. ಗೋಟ್ಯಾ ಜಾಧವ್ ಇಚಲಕರಂಜಿ ಮತ್ತು ಆಕಾಶ್ ಇಂಡಿ ನಡುವಿನ ಹೋರಾಟದಲ್ಲಿ ಜಾಧವ್ ಬಿರುಗಾಳಿಯಂತೆ ಎರಗಿ ಬೆಳ್ಳಿ ಗದೆಯನ್ನು ಗೆದ್ದರು. 

ಸಾನಿಕಾ ಪಾಟೀಲ ಬೆಳಗಾಂವ ಹಾಗೂ ನಿಕಿತಾ ನಾಯ್ಕ ಮುರಗುಂಡಿ ಅವರ ಕುಸ್ತಿ ಅಭಿಮಾನಿಗಳ ಆಕರ್ಷಣೆಯಾಯಿತು. ಐದು ಗಂಟೆಗಳ ಕಾಲ ಕುಸ್ತಿ ಸ್ಪರ್ಧೆಯನ್ನು ಪ್ರೇಕ್ಷಕರು ಶಾಂತವಾಗಿ ಉತ್ಸಾಹದಿಂದ ವೀಕ್ಷಿಸಿದರು. ಈ ಬಾರಿ ಮಹಾರಾಷ್ಟ್ರ ಚಾಂಪಿಯನ್  ಶಿವ ಸರಡಾ  ಹಾಗೂ ಪವನ್ ಬೆಳಗಾವಿ ಇವರ ನಡುವೆ ಗೆಲುವಿಗೆ ಹಣಾಹಣಿ ನಡೆಯಿತು 39 ಪೈಲ್ವಾನ್‌ಗಳ ಕುಸ್ತಿಗಳು ನಡೆದು ಕುಸ್ತಿ ಪ್ರೇಮಿಗಳ ಮನತಣಿಸಿದರು.