ರಕ್ತ ಹರಿಸಿ ತಂದ ಸ್ವಾತಂತ್ರ್ಯ ಉಳಿಸಿ-ಬೆಳೆಸಲು ಕೈ ಜೋಡಿಸಿ: ಸೂಲಿಬೆಲೆ ಚಕ್ರವರ್ತಿ
ರಾಣೇಬೆನ್ನೂರು 26: ನಾಡಿನ ಖ್ಯಾತ ವಾಗ್ಮಿ ಸೂಲಿಬೆಲೆ ಚಕ್ರವರ್ತಿ ಯವರು ‘ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ’ ಕುರಿತು ವಿಶೇಷ ಉಪ ನ್ಯಾಸ ನೀಡಿ, ಜಗತ್ತಿನ ಯಾವುದೇ ರಾಷ್ಟ್ರದ ಮೇಲೆ ನಡೆಯದಷ್ಟು ಆಕ್ರಮಣ ನಮ್ಮ ದೇಶದ ಮೇಲೆ ನಡೆದಿದ್ದರೂ ಸಹ ಆಕ್ರಮಣ ನಡೆಸಿದಂತ ರಾಷ್ಟ್ರಗಳು ನಾಶ ಗೊಂಡಿವೆ. ಭಾರತಮಾತಾ ಮಾತ್ರ ಇಂದಿಗೂ ಜಗತ್ತಿನ ಪ್ರಬಲಶಕ್ತಿ ರಾಷ್ಟ್ರವಾಗಿ ನಿಂತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮುಸ್ಲಿಂ ರಾಜರುಗಳು ಈ ದೇಶದ ನಾಗರಿಕರ ಮೇಲೆ ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯ, ಅತ್ಯಾ ಚಾರ, ಸಾಮೂಹಿಕ ಕೊಲೆ ನಡೆಸಿ ದ್ದರೂ ಈ ದೇಶದ ಜನರು ಎದೆ ಕೊಟ್ಟು ಎಲ್ಲವನ್ನೂ ಸಹಿಸಿ ಕೊಂಡು ತಮ್ಮ ಪ್ರಾಣವನ್ನು ಬಲಿ ದಾನ ಮಾಡಿ ಹಿಂದೂ ಧರ್ಮ ಹಾಗೂ ಸಂಸ್ಕೃತಿಯನ್ನು ಉಳಿಸಿ ಕೊಂಡು ಬಂದಿದ್ದರಿಂದ ಭಾರತ ಇಂದು ಸ್ಥಿರವಾಗಿ ನಿಲ್ಲಲು ಸಾಧ್ಯ ವಾಗಿದೆ ಎಂದು ಹೇಳಿದರು.
ಮುಂದುವರೆದ ಅವರು, ವ್ಯಾಪಾರಕ್ಕೆಂದು ಬಂದ ಬ್ರಿಟೀಷರು 100 ವರ್ಷದಲ್ಲಿ ರಾಜರ ಮಧ್ಯ ಇರುವ ಒಳ ಜಗಳ ಉಪಯೋಗಿಸಿಕೊಂಡು ಸಾಮ್ರಾಜ್ಯವನ್ನೇ ಕಟ್ಟಿ ಮೆರೆದರೂ ಸಹ ಈ ದಏಶದ ಜನ ತಮ್ಮ ಸ್ವಾಭಿಮಾನ ಬಿಟ್ಟು ಕೊಡದೆ ದೇಶವನ್ನು ಸ್ವಾತಂತ್ರ್ಯಗೊಳಿಸಲು ರಕ್ತವನ್ನು ಬಸಿದು ತಂದು ಕೊಟ್ಟಿದ್ದಾರೆ. ಈ ಸ್ವಾತಂತ್ರ್ಯ ಸುಮ್ಮನೆ ನಮಗೆ ಬರಲಿಲ್ಲ. ವಿದೇಶದಿಂದ ಬಂದ ಗಾಂಧೀಜಿ ತುಂಡು ಬಟ್ಟೆ ಉಟ್ಟುಕೊಂಡು ಉಪವಾಸ ಮಾಡಿ ಹೋರಾಟದ ನೇತೃತ್ವ ವಹಿಸಿದ್ದರು.
ಗುರುತೇಜ್ ಬಹ ದ್ದೂರ್ ಸಿಖ್ಖರ ಗುರುವನ್ನು ಮತಾಂತರ ಮಾಡಲು ಮುಸ್ಲಿಂ ರಾಜರಿಗೆ ಸಾಧ್ಯವಾಗಿರಲಿಲ್ಲ. ಗುರುಗೋವಿಂದಸಿಂಗರ ಪುಟ್ಟ ಮಕ್ಕಳನ್ನು ಜೀವಂತ ಸಮಾಧಿ ಮಾಡಿದರೂ ಅವರು ಮತಾಂ ತರವಾಗಲಿಲ್ಲ. ಮುಸ್ಲಿಂ ರಾಜರು ನಡೆಸಿದಷ್ಟು ಕ್ರೌರ್ಯವನ್ನು ಜಗತಿ ್ತನಲ್ಲಿ ಯಾರೂ ನಡೆಸಿಲ್ಲ. ಬ್ರಿಟೀ ಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ವಾಸು ದೇವ ಪಡಕೆ, ವೀರ ಸಾವರ್ಕರ್, ಮದನ್‌ಲಾಲ್ ದಿಂಗ್ರಾ, ಭಗತ್ ಸಿಂಗ್, ಕರ್ತಾರಸಿಂಗ್, ಸುಭಾಷ ಚಂದ್ರ ಬೋಸ್(4ನೇ ಪುಟಕ್ಕೆ) ಮುಂತಾದ ವೀರ ಯೋಧರು ತಮ್ಮ ಪ್ರಾಣವನ್ನು ಬಲಿ ಕೊಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಸುಭಾಷಚಂದ್ರರ ಶಿಷ್ಯ ರಾಜಾಮಣಿ ಮುಂದೆ ಸರಸ್ವತಿಯಾಗಿ ಈ ದೇಶದ ಪ್ರಥಮ ಗೂಡಾಚಾರಿಣಿಯಾಗಿ ನಡೆಸಿದ ಕಾರ್ಯವನ್ನು ಈ ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂತಹ ಮಹಾನ್ ವ್ಯಕ್ತಿಗಳ ತ್ಯಾಗ ಬಲಿದಾನದಿಂದ ಹಾಗೂ ರಕ್ತವನ್ನು ಹರಿಸಿ ನಮಗೆ ಸ್ವಾತಂತ್ರ್ಯ ತಂದಿದ್ದಾರೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕಾರ್ಯಕ್ಕೆ ತಾವೆಲ್ಲರೂ ಕೈ ಜೋಡಿಸಬೇಕೆಂದು ಕೋರಿದರು.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಪ್ರಧಾನಿ ನರೇಂದ್ರ ಮೋದೀಜಿಯವರು ವರ್ಷವೀಡೀ ಆಚರಿಸಲು ಕರೆ ನೀಡಿದ್ದಾರೆ. ರೈತರ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಿ ಭ್ರಷ್ಟಾಚಾರ ತಡೆದಿದ್ದಾರೆ. 370ನೇ ವಿಧಿ ರದ್ದು ಮಾಡಿ ಭಾರತದ ಮುಕುಟ ಕಾಶ್ಮೀರವನ್ನಾಗಿಸಿದ್ದಾರೆ. ಚೀನಾದ ಆಕ್ರಮಣವನ್ನು ಸಮರ್ಥವಾಗಿ ಮೆಟ್ಟಿ ನಿಂತಿದ್ದಾರೆ. ಪಾಕಿಸ್ತಾನದ ಕುತಂತ್ರ ನಡೆಯದಂತೆ ಮಾಡಿ ಯಾವುದೇ ಭಯೋತ್ಪಾದಕ ದೇಶದಲ್ಲಿ ಜೀವಂತವಾಗಿ ಉಳಿಯಲು ಸಾಧ್ಯವಿಲ್ಲ ಎಂಬಂತೆ ಮಾಡಿದ್ದಾರೆ. ಇಂತಹ ಪ್ರಧಾನಿಯವರನ್ನು ಪಡೆದಿದ್ದು ನಮ್ಮೆಲ್ಲರ ಭಾಗ್ಯವೆಂದು ಹೇಳಿ ದೇಶದ ಏಕತೆಗೆ ಭಾರತ ಮಾತೆ ಜಗತ್ತಿಗೆ ಮಾತೆಯನ್ನಾಗಿಸಲು ಸರ್ವರೂ ಶ್ರಮಿಸೋಣವೆಂದು ಹೇಳಿದರು. ಸಭೆಯ ಸಾನಿಧ್ಯವನ್ನು ಪ್ರಕಾಶಾನಂದಜಿ ಮಹಾರಾಜ್ ವಹಿಸಿದ್ದರು. ಶಾಸಕ ಅರುಣಕುಮಾರ ಪೂಜಾರ, ಪತ್ನಿ ಮಂಗಳಗೌರಿ ಪೂಜಾರ ಅವರನ್ನು ಪೂಜ್ಯರು, ಅತಿಥಿಗಳು ಸನ್ಮಾನಿಸಿ ಗೌರವಿಸಿದರು.