ರಾಣೆಬೆನ್ನೂರ

ರಾಣೇಬೆನ್ನೂರಲ್ಲಿ ವರ್ತಕರ ಸಂಘದ ಅಮೃತ ಮಹೋತ್ಸವ ಸಮಾರಂಭ

ರಾಣೇಬೆನ್ನೂರಲ್ಲಿ ವರ್ತಕರ ಸಂಘದ ಅಮೃತ ಮಹೋತ್ಸವ ಸಮಾರಂಭ

ಲೋಕದರ್ಶನ ವರದಿ 

ರಾಣೇಬೆನ್ನೂರು 28:  ಸೃಷ್ಠಿಯ ದೃಷ್ಟಿಯಲ್ಲಿ ಹಣ್ಣು, ಸಸ್ಯ, ಕಾಡು, ಬೀಜ, ಗಿಡ, ಎಲೆ, ಎಲ್ಲವು ಮಣ್ಣಿನಿಂದಲೇ ಹುಟ್ಟು ಪಡೆದಿದೆ. ಅದರಿಂದಲೇ ಎಲ್ಲವು ಅರಳಿದೆ, ಅರಳಿದ ಹೂವು ಒಂದಿಲ್ಲ ಒಂದು ದಿವಸ ಬಾಡಲೇ ಬೇಕು. ಇದು  ಜಗದ ನಿಯಮ ದೇಹ ಮುನ್ಸಿಪಾಲಿಟಿ ಇದ್ದ ಹಾಗೆ ದೇಹದ ಇಂದ್ರೀಯಗಳು ಸಭೆಯ ಸದಸ್ಯರು ಇದ್ದಹಾಗೆ. ಸದಸ್ಯರು ಹೇಗೆ ಸರಿಯುತ್ತಾರೆಯೂ ಹಾಗೇಯೆ ದೇಹವು ಸರಿದು ಹೂಗುತ್ತದೆ. ಇದರ ಅರ್ಥವನ್ನು ಮಾಡಿಕೂಂಡು ಜೀವನ ಸಾಗಿಸಿದರೆ ಮಾತ್ರ ಬದುಕು ನಿರಂತರ ಅಮೃತಮಯವಾಗಲಿದೆ ಎಂದು ಕೊಪ್ಪಳ ಸಂಸ್ಥಾನ  ಗವಿಮಠದ ಮ.ನಿ.ಪ್ರ. ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು. 

ಅವರು ಶನಿವಾರ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಮುದಾಯ ಭವನದಲ್ಲಿ ನಡೆದ ವರ್ತಕರ ಸಂಘದ 75ನೇ ವರ್ಷದ  ಅಮೃತ ಮಹೋತ್ಸವ ಸಮಾರಂಭದ ದಿವು ಸಾನಿದ್ಯ ವಹಿಸಿ ಮಾತನಾಡಿದರು. ನಮ್ಮ ಪೂರ್ವಜ ಋಷಿ ಮುನಿಗಳು ಜ್ಞಾನಿಗಳು ಸಾದು, ಸಂತರು, ಪುಣ್ಯ ಪುರುಷರು, ಬಹು ಚಿಂತನೆಯಿಂದ ತಮ್ಮ ಜೀವನವನ್ನು ಧರ್ಮದ ನೆಲೆಗಟ್ಟಿನಲ್ಲಿ ಸಾಗಿಸಿ ಅವರು ಇಂದು ಇಲ್ಲದಿದ್ದರೂ ಸಹ ಜೀವನ ಮೌಲ್ಯಗಳನ್ನು ಮಾನವ ಕುಲಕ್ಕೆ ಮಾರ್ಮಿಕವಾಗಿ ತಿಳಿಸಿ ಬಿಟ್ಟುಹೂಗಿದ್ದಾರೆ. ಅವರ ಜೀವನ ಸಂದೇಶ ನಿತ್ಯದ ಬದುಕಿನಲ್ಲಿ ಅಳವಡಿಸಿಕೂಂಡರೆ ಜೀವನ ಸಾರ್ಥಕವಾಗುವುದು ಎಂದರು.  

      ಎಷ್ಟೇ ಕಿಮ್ಮತ್ತಿನ ವಸ್ತುಗಳು ತಂದಿಟ್ಟರೂ ಬೆಳಕು ಚಲ್ಲುವುದಿಲ್ಲ ಆದರೇ ಅದೇ ಮಣ್ಣಿನ ಪಣತೆಯಲ್ಲಿ ದೀಪ ಹಚ್ಚಿದರೆ ಬೆಳಕು ಪ್ರಜ್ವಲಿಸುತ್ತದೆ. ಈ ಸಹಜ ಸಾಮಾನ್ಯ ಜ್ಞಾನ ಸತ್ಯವನ್ನು ಅರಿಯದ ಮಾನವ ನಿತ್ಯವು ಬೇಕು ಬೇಕು ಬೇಕು ಎಂದು ತೂಳಲಾಡುತ್ತಾ ಜೀವನ ಅರ್ಥವನ್ನೇ ತಿಳಿಯದೇ ನಿತ್ಯವು ಸಂಕಷ್ಟ ಅನುಭವಿಸುತ್ತಿದ್ದಾನೆ. ಗಳಿಸಿದ್ದೆಲ್ಲವು ಸಮರ್ಥವಾಗಿ ಬಳಸದೆ, ಬಳಸುವ ಮಾರ್ಗ ತಿಳಿಯದೇ ಅರ್ಥ ರಹಿತ ಜೀವನದಲ್ಲಿ ಅಂತೀಮ ಕೃಷವಾಗಿ ಸಾಧನೆ ಇಲ್ಲದೇ, ಮುಕ್ತಿ ಕಾಣದೇ ಮಣ್ಣಲ್ಲಿ ಮಣ್ಣಾಗುತ್ತಿದ್ದಾನೆ. ಹಾಗಾದರೇ ಅವನ ಹುಟ್ಟು ಯಾವ ಸಾರ್ಥಕತೆ ಪಡೆಯುತ್ತಿದೆ ಎನ್ನುವುದನ್ನು ಸೂಕ್ಷ್ಮವಾಗಿ ತಿಳಿದುಕೂಂಡರೆ ಸಾಕು ಜೀವನ ಸಾರ್ಥಕ ಎಂದರು.  

ಸಾಣೇಹಳ್ಳಿ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದ ಶ್ರೀ  ಡಾಽಽ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ನಾಡು ಮತ್ತು ದೇಶದಲ್ಲಿ ಇಂದು ನಿತ್ಯವು ಬ್ರಷ್ಟಾಚಾರ, ಮತ್ತು ಮಾನವ ವಿಕೃತಿ ನಡೆಯುತ್ತಲಿದೆ.  ಇದರಿಂದ ಸಮಗ್ರ ಭಾರತೀಯ ಸಮಾಜದಲ್ಲಿನ ಸ್ವಾಸ್ತ್ಯ ಹದಗೆಡುತ್ತಲಿದೆ. ಇದು ನಮ್ಮ ಸಂಸ್ಕ್ರತಿ ಅಲ್ಲ ಇದೆಲ್ಲವು ಮನುಷ್ಯನ ಅತೀಯಾದ ಆಸೆ ದುರಾಸೆಯ ಫಲವಾಗಿದೆ. ಸ್ವಾಸ್ತ್ಯ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರೀಕರು ಪಣ ತೂಡಬೇಕಾಗಿದೆ ಎಂದರು.  

ನಮ್ಮ ನೋಟ, ವ್ಯವಹಾರ ಒಳ್ಳೆದಾಗಿದ್ದರೆ ಬದುಕು ನಿತ್ಯವು ಒಳ್ಳೇದಾಗಿಯೇ ಸಾಗುತ್ತದೆ.  ಸುಧಾರಣೆ ಸಮಾಜದ ಅಭಿವೃದ್ದಿ ಸಮಚಿಂತಕರಿಂದ ಆಗಬೇಕಾಗಿದೆ. ಮಠ, ಮಂದಿರ, ಸಮಘ, ಸಂಸ್ಥೆ, ಅಭಿವೃದ್ದಿ ಕಾಣಬೇಕಾದರೆ ಅಲ್ಲಿ ಬಕ ಪಕ್ಷಿಗಳಿರಬಾರದು ಅದರಿಂದ ಯಾವುದೇ ಅಭಿವೃದ್ದಿ ಸಾಧ್ಯವಾಗುವುದಿಲ್ಲ. ಸಮಾಜದ ಬದಲಾವಣೆಗೆ ಮೊದಲು ವ್ಯಕ್ತಿಗತ ಬದಲಾಗಬೇಕು ಎಂದ ಡಾಽಽ ಶಿವಾಚಾರ್ಯರು ಭಾರತದಲ್ಲಿ ಸಾದು, ಸಂತರು ಶರಣರು ತಮ್ಮ ಆತ್ಮೂದ್ದಾರದ ಚಿಂತನೆ ಮಾಡಿ ನಂತರ ಸಮಾಜದ ಚಿಂತನೆ ಮಾಡಿ ಸಮಾಜ ಸುದಾರಿಸಿದ್ದಾರೆ. ಅವರ ಜೀವನ ಮತ್ತು ಸಾಧನೆ ಅರಿತುಕೂಂಡು ಸಾಗಿದರೆ ಮಾನವ ಕುಲ ಸಂಪೂರ್ಣ ಉಜ್ವಲ ಭವಿಷ್ಯವನ್ನು ಕಂಡು ಇತರರಿಗೂ ಪ್ರಜ್ವಲ ಬೆಳಕು ನೀಡಲು ಸಾಧ್ಯವಾಗುವುದು ಎಂದರು.  

 ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿದ ಕೃಷಿ ಸಚಿನ ಬಿ.ಸಿ. ಪಾಟೀಲ ಅವರು ಕೃಷಿ ಮತ್ತು ಕೃಷಿಕರ ಜೀವನ ಜಿಲ್ಲೆಯ ರಾಣೇಬೆನ್ನೂರು ವರ್ತಕರಿಂದ ಬಹಳಷ್ಟು ಆರ್ಥಿಕ ಅಭಿವೃದ್ದಿ ಕಾಣಲು ಸಾಧ್ಯವಾಗಿದೆ. ವರ್ತಕರು ಮತ್ತು ರೈತರು ಎರಡು ಮುಖದ ಒಂದು ನಾಣ್ಯ, ಬಹುತೇಕ ರೈತರು ಈ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ತರುತ್ತಾರೆ. ಇಲ್ಲಿನ ವರ್ತಕರ ಬಗ್ಗೆ ತುಂಬಾ ಅಭಿಮಾನವನ್ನು ಇಟ್ಟುಕೂಂಡಿದ್ದಾರೆ. ಸಾಧನೆ ಬಹು ದೂಡ್ಡದು ಮತ್ತಷ್ಟು ಅಭಿವೃದ್ದಿಗೆ ಸಂಘಟನಾತ್ಮಕವಾಗಿ ಸೇವೆ ಸಲ್ಲಿಸಲು ಮುಂದಾಗಬೇಕು ಎಂದರು.  

ತಾವು ಮಠ ಮಂದಿರಗಳಿಗೆ ಹೂಗುವುದು ಬಹಳ ಕಡಿಮೆ ಆದರೇ ಕೊಪ್ಪಳದ ಮಠಕ್ಕೆ ಯಾವತ್ತಿಗೂ ತಪ್ಪಿಸುವುದಿಲ್ಲ ಕಾರಣ ಕೋವಿಡ್ ಸಂಧರ್ಭದಲ್ಲಿ ಶ್ರೀ ಮಠದ  ಗುರುಗಳು ಅಂದು ಅವರು ಸೋಂಕಿತರಿಗೆ ನೀಡಿದ ಸಹಾಯ, ಸರ್ಕಾರದ ಜೊತೆಗೆ ಕೊಟ್ಟ ಸಹಕಾರ ತಾವು ಎಂದಿಗೂ ಮರೆಯುವುದಿಲ್ಲ ಅದರಿಂದಲೇ ತಮ್ಮ ಕೊಪ್ಪಳದ  ಉಸ್ತುವಾರಿಕೆಗೆ ಘನತೆ, ಗೌರವ ದಕ್ಕಿದಂತಾಗಿದೆ. ಮಠಗಳು ಮಠದ ಸ್ವಾಮಿಜಿಗಳು ಹೇಗೆ ಇರಬೇಕು ಎನ್ನುವುದನ್ನು ಕೊಪ್ಪಳ ಮತ್ತು ಸಾಣೇಹಳ್ಳಿ ಶ್ರೀಗಳಿಂದ ಮಾರ್ಗದರ್ಶನ ಪಡೆಯಬೇಕಾಗಿದೆ. ಅಂತಹ ಸಮಾಜ ಚಿಂತಕರಿಂದ ಇತಿಹಾಸದ ಶರಣ ಪರಂಪರೆ ಪುನರುತ್ತಾನವಾಗಲು ಸಾಧ್ಯವಾಗಲಿದೆ ಎಂದು ತಮ್ಮ ಕೃತಜ್ಷತೆ ಸಲ್ಲಿಸಿದರು.  

ವರ್ತಕರ ಸಂಘದ ಅಧ್ಯಕ್ಷ ಸದಾಶಿವಪ್ಪ ಉಪ್ಪಿನ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಶ್ರೀ ಸ್ಮರಣ ಸಂಚಿಕೆಯ ಸಂಪಾದಕ ಸದಾಶಿವ ಹುಲ್ಲತ್ತಿ ಅವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಸಮಾರಂಭದಲ್ಲಿ ಮಾಜಿ ಸಚಿವ ಆರ್‌.ಶಂಕರ್, ಮಾಜಿ ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ಮಾಜಿ ಶಾಸಕ ಡಾಽಽ ಬಿ.ಜಿ ಪಾಟೀಲ, ಶಾಸಕ ಅರುಣಕುಮಾರ ಪೂಜಾರ, ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಮಾತನಾಡಿದರು. ವೇದಿಕೆಯಲ್ಲಿ ಕೃಷಿ ಸಮಿತಿಯ ಕಾರ್ಯದರ್ಶಿ ಆದಪ್ಪ, ಬಿ.ಡಿ. ಸವಣೂರ, ಜಟ್ಟೆಪ್ಪ ಕರೇಗೌಡ್ರ ಅಶೋಕ ಗಂಗನಗೌಡ್ರ ಎಂ.ವಿ. ಹೂಂಬರಡಿ, ಮಲ್ಲಿಕಾರ್ಜುನ ಅರಳಿ, ಬಿ.ಎಸ್‌. ಸಣ್ಣಗೌಡ್ರ, ವಿರೇಶ ಮೊಟಗಿ, ಹುಕಮಿಚಂದ ಜೈನ್, ಸಿ.ಆರ್‌. ಅಸುಂಡಿ, ಉಮೇಶ ಹೂನ್ನಾಳಿ ಸೇರಿದಂತೆ ಮತ್ತಿತರ ಗಣ್ಯರು ವರ್ತಕರು ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು. ರಜನಿ ಕರಿಗಾರ ಸಂಗಡಿಗರು ಪ್ರಾರ್ಥಿಸಿದರು, ಕಾರ್ಯದರ್ಶಿ ಬಿ.ಸಿ. ಗೌಡಶಿವಣ್ಣನವರ ಸ್ವಾಗತಿಸಿದರು.  ಸಮಿತಿಯ ಅಧ್ಯಕ್ಷ  ವ್ಹಿ.ಪಿ ಲಿಂಗನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.  ಜಿ.ಜಿ. ಹೊಟ್ಟಿಗೌಡ್ರ ಸಂದೇಶ ವಾಚಿಸಿದರು. ಜಿ.ಬಿ. ಮಾಸಣಗಿ, ಪ್ರಭುಲಿಂಗಪ್ಪ ಹಲಗೇರಿ ನಿರೂಪಿಸಿ ಉಪಾಧ್ಯಕ್ಷ ಪಾಂಡುರಂಗಪ್ಪ ಮಾಳೋದೆ ವಂದಿಸಿದರು. 


ಸುದ್ದಿ ಓದಿ