ಕೇಂದ್ರ ಕಸಾಪ ಸ್ಪರ್ಧಾ ಅಭ್ಯರ್ಥಿ ಸಿ.ಕೆ. ರಾಮೇಗೌಡ ಪ್ರಚಾರ
ಲೋಕದರ್ಶನ ವರದಿ
ರಾಣೇಬೆನ್ನೂರು 09: ಶತಮಾನದ ಪರಂಪರೆ ಹೂಂದಿರುವ ಕನ್ನಡಿಗರ ಸ್ವಾಯತ್ಯ ಸಂಸ್ಥೆಯಾಗಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಸಮಗ್ರ ಕನ್ನಡಿಗರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಕೇಂದ್ರ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಸ್ಪರ್ಧಾ ಅಭ್ಯರ್ಥಿ ಸಿ.ಕೆ. ರಾಮೇಗೌಡ ಹೇಳಿದರು.
ಅವರು ರವಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಕಸಾಪ ಅಜೀವ ಸದಸ್ಯರ ಸಮಾಲೋಚನಾ ಸಭೆಯಲ್ಲಿ ಸದಸ್ಯರಲ್ಲಿ ಮತಯಾಚಿಸಿ ಮಾತನಾಡಿದರು. ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನವು ಕೇವಲ ಗೌರವಾನ್ವಿತ ಹುದ್ದೆಯಾಗಿದೆ, ಇದರಲ್ಲಿ ಯಾವುದೇ ಜಾತಿ, ಮತ, ಪಂಥ, ಭೇದ, ಭಾವ ನುಸುಳಬಾರದು. ಸದಸ್ಯರು ಇತ್ತಿಚೀನ ಕೇಲವು ವರ್ಷಗಳಲ್ಲಿ ಬಲವಾಗಿ ಆರೋಪಿಸುವಂತೆ ಕಸಾಪ ಚುನಾವಣೆಯು ಸಹ ರಾಜಕೀಯ ಚುನಾಚಣೆಯಂತೆ ನಡೆಯುತ್ತಿದೆ, ಎನ್ನುವ ಸಂಗತಿ ಅತ್ಯಂತ ವಿಷಾದಕರವಾಗಿದೆಎಂದರು.
ಕರ್ನಾಟಕ ಏಕೀಕರಣದ ಸಂಧರ್ಭದಲ್ಲಿ ಗೋಕಾಕ್ ಚಳುವಳಿ ನಡೆಯಿತು, ಆ ಸಮಯದಲ್ಲಿ ಡಾಽಽ ರಾಜಕುಮಾರ ಕನ್ನಡಿಗರ ಒಕ್ಕೂರಲ ಮೇರೆಗೆ ಪಾಲ್ಗೂಂಡು ಚಳುವಳಿಯ ಮೂಲಕ ಕನ್ನಡ ಕಟ್ಟುವ ಕೆಲಸಕ್ಕೆ ಮುಂದಾಗಿದ್ದರು ಅವರು ಯಾವುದೇ ರಾಜಕೀಯ ಪಕ್ಷದ ಜೂತೆ ಗುರುತಿಸಿಕೂಳ್ಳಲಿಲ್ಲ ಅವರ ಏಕೈಕ ಉದ್ದೇಶ ಕನ್ನಡ ಭಾಷೆ, ನೆಲ, ಜಲ, ಸಂರಕ್ಷಣೆಯ ಮುಖ್ಯ ಉದ್ದೇಶವಾಗಿತ್ತು ಅದರಲ್ಲಿ ಅವರು ಯಶಸ್ವಿಯು ಸಹ ಕಂಡರು ಎಂದ ಅವರು ನಾಡು ನುಡಿಗೆ ಧಕ್ಕೆಯಾದರೆ, ಸಮನ್ವಯಕ್ಕೂ ಸೈ ಸಂಘರ್ಷಕ್ಕೂ ಸೈ ಅಂತಹ ಪವಿತ್ರ ಕಾರ್ಯದಲ್ಲಿ ಪ್ರತಿಯೋಬ್ಬರು ಕೈ ಜೋಡಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಮಾಜಿ ತಾಲೂಕಾ ಅದ್ಯಕ್ಷ ಶಿವಾನಂದ ಸಂಗಾಪುರ, ಎಂ.ಎಂ. ಪಾಟೀಲ, ಜಯಣ್ಣ ಕರಡೇರ, ಮಲ್ಲಿಕಾರ್ಜುನ ಹಲಗೆರಿ, ರಾಜಣ್ಣ ಮೋಟಗಿ, ಬಸವರಾಜು ಸಣಗೋಣಿ,ಶಂಕರ್ ಹೂಗಾರ, ಸೇರಿದಂತೆ ಮತ್ತಿತರ ಗಣ್ಯರು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಅಜೀವ ಸದಸ್ಯರಾದ ಉಪಸ್ಥಿತರಿದ್ದರು.