ನೈಸರ್ಗಿಕ ಅನಿಲ ಬೆಲೆ ಪಾರದರ್ಶಕವಾಗಿಸಲು ಪ್ರಮಾಣೀಕೃತ ಇ-ಬಿಡ್ಡಿಂಗ್ಗೆ ಕೇಂದ್ರ ಸಂಪುಟ ಅನುಮೋದನೆ
ನವದೆಹಲಿ, ಅಕ್ಟೋಬರ್ 7: ನೈಸರ್ಗಿಕ ಅನಿಲ ಬೆಲೆ ಯಾಂತ್ರಿಕ ವ್ಯವಸ್ಥೆಯನ್ನು ಪಾರದರ್ಶಕವಾಗಿಸಲು ಪ್ರಮಾಣೀಕೃತ ಇ-ಬಿಡ್ಡಿಂಗ್ ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ.
ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನಿ, ಫಾಸಿಲ್ ಇಂಧನಗಳ ಮೇಲಿನ ನಮ್ಮ ಅವಲಂಬನೆ ಕಡಿಮೆಯಾಗುತ್ತಿದೆ. ನೈಸರ್ಗಿಕ ಇಂಧನದ ದರದ ಯಾಂತ್ರಿಕ ವ್ಯವಸ್ಥೆಯನ್ನು ಪಾರದರ್ಶಕವಾಗಿಸಲು ಸಂಪುಟ ಇಂದು ಇ-ಬಿಡ್ಡಿಂಗ್ ಪ್ರಕ್ರಿಯೆಗೆ ಅನುಮೋದನೆ ನೀಡಿದೆ ಎಂದರು.
ಇ-ಬಿಡ್ಡಿಂಗ್ಗಾಗಿ ಪ್ರತ್ಯೇಕ ಮಾರ್ಗಸೂಚಿಗಳನ್ನು ರೂಪಿಸಲಾಗುವುದು. ಸರ್ಕಾರ ಜನರಿಗೆ ಕೈಗೆಟಕುವ ದರದಲ್ಲಿ ಇಂಧನ ಒದಗಿಸುವ ಉದ್ದೇಶ ಹೊಂದಿವೆ ಎಂದು ಹೇಳಿದರು.
ಇದಕ್ಕಾಗಿ ನಾವು ಸೌರಶಕ್ತಿ, ಜೈವಿಕ-ಇಂಧನ, ಜೈವಿಕ-ಅನಿಲ, ಕೃತಕ ಅನಿಲ ಮತ್ತು ಇತರ ಮೂಲಗಳಿಂದ ಇಂಧನ ಪಡೆಯಲು ಬಯಸುತ್ತೇವೆ ಎಂದರು.
ನಂತರ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್,
ಸೈಬರ್ ಸುರಕ್ಷತೆ ಮತ್ತು ಇತರ ಸಹಕಾರದ ಕುರಿತು ಜ್ಞಾನ ಮತ್ತು ತಂತ್ರಜ್ಞಾನ ವಿನಿಮಯಕ್ಕಾಗಿ ಜಪಾನ್ನೊಂದಿಗೆ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಹೇಳಿದರು.
ಪ್ರಾಣಿಗಳ ಜೀನೋಮ್ನ ಬಾರ್-ಕೋಡಿಂಗ್ ಕುರಿತು ಕೆನಡಾದೊಂದಿಗೆ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅವರು ಮಾಹಿತಿ ನೀಡಿದರು.