ಹಂಸಬಾವಿ ಮಹಾಂತ ಮಹಾವಿದ್ಯಾಲಯದಲ್ಲಿ ಕೇಂದ್ರ ಬಜೆಟ್ ಚರ್ಚೆ
ಲೋಕದರ್ಶನ ವರದಿ
ರಾಣಿಬೆನ್ನೂರ 19: ಹಿರೇಕೆರೂರು ತಾಲೂಕಿನ ಹಂಸಬಾವಿ ಗ್ರಾಮದ ಮಹಾಂತಸ್ವಾಮಿ ಕಲಾ ವಿಜ್ಞಾನ, ವಾಣಿಜ್ಯ ಪದವಿ ಮಹಾ ವಿದ್ಯಾಲಯದಲ್ಲಿ ಇತ್ತೀಚಿಗೆ ಕೇಂದ್ರ ಸರ್ಕಾರ ಮಂಡಿಸಿದ ಮಹತ್ವಪೂರ್ಣ ಕೇಂದ್ರ ಬಜೆಟ್ ಕುರಿತಂತೆ ಉಪನ್ಯಾಸಕ ವರ್ಗದವರು ಸುರ್ಧೀಘ ಚರ್ಚೆ ನಡೆಸಿದರು.
ಸ್ಥಳೀಯ ಆರ್ಟಿಇಎಸ್ ಕಲಾ, ವಿಜ್ಞಾನ ವಾಣಿಜ್ಯ ಪದವಿ ಕಾಲೇಜಿನ ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸರಸ್ವತಿ ಹೆಚ್ ಬಮ್ಮನಾಳ ಇವರು ಮಂಡನೆಯಾದ ಬಜೆಟ್ ಸಾಧಕ ಬಾಧಕ ಮತ್ತು ದೇಶದ ಅಭಿವೃದ್ಧಿಗೆ ಪೂರಕ ಹೇಗೆ? ಎನ್ನುವ ಕುರಿತಂತೆ ವಿಶ್ಲೆಷಣಾತ್ಮಕವಾಗಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.
ಮಹಾ ವಿದ್ಯಾಲಯದ ಪ್ರಾಂಶುಪಾಲ ಎಸ್.ಎ.ತಿಪ್ಪೇಶ ಅವರು ಚರ್ಚಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಸಂತೋಷ್ ಸಿ ಸೇರಿದಂತೆ ಕಾಲೇಜಿನ ಎಲ್ಲಾ ವಿಭಾಗಗಳ ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು.