ಜು. 12 ರಂದು ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಅವರ ಜನ್ಮದಿನಾಚರಣೆ ಆಯೋಜನೆ
ಲೋಕದರ್ಶನ ವರದಿ
ಧಾರವಾಡ 10: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದಲ್ಲಿ ಬರುವ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್, ಧಾರವಾಡ, ವತಿಯಿಂದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಅವರ 146 ನೇ ಜನ್ಮದಿನಾಚರಣೆ ಅಂಗವಾಗಿ ಜುಲೈ 12, 2026 ರಂದು 10:30 ಗಂಟೆಗೆ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ವಿಶೇಷ ಉಪನ್ಯಾಸ ಮತ್ತು ಕರ್ನಾಟಕ ಏಕೀಕರಣ ಹೋರಾಟಗಾರರ ವ್ಯಕ್ತಿಚಿತ್ರ ಮಾಲೆಯಡಿ ಪ್ರಕಟಗೊಂಡ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಸದಸ್ಯರಾದ ಸಿ.ಯು. ಬೆಳ್ಳಕ್ಕಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡುವರು. ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹಿರಿಯ ಸಾಹಿತಿಗಳು ಅವರು ಆಲೂರ ವೆಂಕಟರಾವ ಅವರ ಪುತ್ಥಳಿಗೆ ಮಾಲಾರೆ್ಣ ಮಾಡಿ, ಕಾರ್ಯಕ್ರಮದ ಉದ್ಘಾಟನೆ ಹಾಗೂ ಡೆಪ್ಯೂಟಿ ಚೆನ್ನಬಸಪ್ಪ ಮತ್ತು ಆಲೂರ ವೆಂಕಟರಾವ (ಮರು ಮುದ್ರಣ) ಪುಸ್ತಕಗಳ ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾದ ಶಿವಪುತ್ರ್ಪ ಆರ್. ಆಶಿ ಅವರು ‘ಕರ್ನಾಟಕ ಏಕೀಕರಣದ ಇತಿಹಾಸ’ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಟ್ರಸ್ಟ್ನ ಅಧ್ಯಕ್ಷರಾದ ರಂಜಾನ್ ದರ್ಗಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಟ್ರಸ್ಟ್ನ ಸದಸ್ಯರಾದ ಡಾ. ದೀಪಕ ಆಲೂರ, ವಿಶ್ವನಾಥ ಕುಲಕರ್ಣಿ, ಪ್ರಕಾಶ ಎಸ್. ಉಡಿಕೇರಿ, ದ್ರೌಪದಿ ವಿಜಾಪುರ, ಬಸವರಾಜ ಸೂಳಿಭಾವಿ ಹಾಗೂ ಸುನಂದಾ ಕಡಮೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಆರತಿ ಪಾಟೀಲ ಮತ್ತು ಕಲ್ಪತರು ಮಹಿಳಾ ಸಂಘ ಧಾರವಾಡ ಇವರಿಂದ ವಿಶೇಷ ಸಂಗೀತ ಕಾರ್ಯಕ್ರಮ ಜರುಗುವುದು. ಆಲೂರ ವೆಂಕರಾವ ಅವರ ಅಭಿಮಾನಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಟ್ರಸ್ಟ್ನ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.