ಪವಿತ್ರವಾದ ರಂಜಾನ್ ಹಬ್ಬ ಸಡಗರ ಸಂಭ್ರ್ರಮದಿಂದ ಆಚರಣೆ
ಹೊಸಪೇಟೆ 04: ನಗರದಲ್ಲಿ ಪವಿತ್ರವಾದ ರಂಜಾನ್ ಹಬ್ಬವು ದಿ. 03ರಂದು ಬಹಳ ಸಡಗರ ಸಂಭ್ರ್ರಮದಿಂದ ಆಚರಣೆ ಮಾಡಿದ್ದು, ವಿವಿಧ ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಮುಸ್ಲಿಂ ಬಾಂಧವರು ಅಂಬೇಡ್ಕರ್ ಸರ್ಕಲ್ ಹತ್ತಿರದ ಈದ್ಗಾ ಮೈದಾನದಲ್ಲಿ ಸೇರಿ ಪ್ರಾರ್ಥನೆಯನ್ನು ಸಲ್ಲಿಸಿದರು. ನಂತರ ಪರಸ್ಪರ ಅಲಂಗಿಸುವ ಮೂಲಕ ಹಬ್ಬದ ಶುಭಾಶಗಳನ್ನು ತಿಳಿಸುತ್ತಿದ್ದರು.
ಈದ್ಗಾ ಮೈದಾನದಲ್ಲಿ ಪ್ರಾರ್ಥನೆಯ ಸಂದರ್ಭದಲ್ಲಿ ಹಬ್ಬವನ್ನು ಉದ್ದೇಶಿ ಮಾತಾನಾಡಿದ ಮುಸ್ಲಿಂ ಸಮಾಜದ ಮುಖಂಡ ಎಚ್.ಎನ್. ಮಹಮ್ಮದ ಇಮಾಮ್ ನಿಯಾಜಿರವರು ಎಲ್ಲಾ ಮುಸ್ಲಿಂ ಬಾಂಧವರು 30 ದಿನಗಳ ಉಪವಾಸವನ್ನು ಪೂರೈಸಿದ ನಂತರ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾ ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ಮಾಡಬಾರದು ಎಂದು ಪ್ರತೀಜ್ಞೆಯನ್ನು ಮಾಡುತ್ತಾ ಈ ಒಂದು ರಂಜಾನ್ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆಯನ್ನು ಭಗವಂತನಿಗೆ ಸಲ್ಲಿಸಿರುತ್ತೇವೆ, ಕಳೆದ ಎರಡು ವರ್ಷಗಳಿಂದ ಕೋವಿಡ್ ಸಂಕಷ್ಟದಿಂದ ಅಪಾರ ಪ್ರಮಾಣದಲ್ಲಿ ಸಾವು ನೋವುಗಳಿಂದ ನೊಂದಿರುವ ಜನರಿಗೆ ಆ ಭಗವಂತನು ದುಖಃವನ್ನು ಭರಿಸುವ ಶಕ್ತಿಯನ್ನು ನೀಡಲಿ. ಹಾಗು ಈ ವರ್ಷದ ರಂಜಾನ್ ಹಬ್ಬವು ನಮ್ಮ ಕ್ಷೇತ್ರದ ಸಮಸ್ತ ಜನತೆ ಹಾಗೂ ದೇಶದ ಪ್ರತಿಯೊಬ್ಬರಿಗೂ ಸುಃಖ ಶಾಂತಿ, ನೆಮ್ಮದಿ ಸೌಹಾರ್ದತೆ, ನೀಡಿ ಪ್ರೀತಿ ಪ್ರೇಮ ವಾತ್ಸಲ್ಯದಿಂದ ಸಮೃದ್ದಿಗೊಂಡು ಉತ್ತಮ ಆರೋಗ್ಯ ನೀಡಲಿ ಆ ಭಗವಂತನಲ್ಲಿ ಪ್ರಾರ್ಥಿಸುತ್ತಾ ಸಮಸ್ತ ನಾಡಿನ ಜನತೆಗೆ ರಂಜಾನ್ (ಈದ್ ಉಲ್ ಫಿತರ್) ಹಬ್ಬದ ಹಾಗೂ ಸಮಾನತೆಯ ಹರಿಕಾರ, ಮಹಾ ಮಾನವತಾವಾದಿ, ವಿಶ್ವಗುರು, ವರ್ಣ, ವರ್ಗ, ಮೇಲು, ಕೀಳು, ಬೇಧಗಳನ್ನು ತೊಲಗಿಸಿ, ಸಮಸಮಾಜವನ್ನು ನಿರ್ಮಿಸಿದ ಸಾಮಾಜಿಕ ತಜ್ಞ, ಭಕ್ತಿ ಬಂಡಾರಿ, ಜಗಜ್ಯೋತಿ ಬಸವಣ್ಣನವರ ಜಯಂತಿಯ ಹಾರ್ಧಿಕ ಶುಭಾಶಯಗಳು ತಿಳಿಸಿದರು.
ಈದ್ಗಾ ಮೈದಾನಕ್ಕೆ ಗುಜ್ಜಲ ನಾಗರಾಜ್, ವಿನಯ್ ಶೆಟ್ಟರ್, ಗಿಂಜಿ ಮಂಜುನಾಥ್, ಸಿದ್ದನ ಗೌಡ, ನಿಂಬಗಲ್ ರಾಮಕೃಷ್ಣ, ಪಾಂಡು, ಜಲೀಲ್, ಕಟಿಗಿ ಸಾದಿಕ್, ಆಗಮಿಸಿ ಸಮಸ್ತ ಮುಸ್ಲಿಂ ಬಾಂದವರಿಗೆ ಹಬ್ಬದ ಶುಭಾಶಗಳನ್ನು ಕೋರಿದರು.
ಈದ್ಗಾ ಮೈದಾನದಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾದ ಖದೀರ್ ಸಾಬ್, ಅನ್ಸರ್ ಬಾಷಾ, ಸೈಯ್ಯದ್ ಅಬ್ದುಲ್ ವಾಹೀದ್ ಜಾಕೀರ್, ಬಡಾವಲಿ, ನಾಸಿರ್, ಜಫರುಲ್ಲಾ ಖಾನ್, ಗೌಸ್, ಅಬುಲ್ ಶೇಠ್, ಖಲಂದರ್, ಹಾಗು ಸಾವಿರಾರು ಮುಸ್ಲಿಂ ಭಾಂದವರು ಭಾಗವಹಿಸಿದರು.