ಶಿಗ್ಗಾವ್

ಶಿರಾ ಕ್ಷೇತ್ರದಲ್ಲಿ ಜಯಭೇರಿ: ಕಾರ್ಯಕರ್ತರ ವಿಜಯೋತ್ಸವ

ಶಿರಾ ಕ್ಷೇತ್ರದಲ್ಲಿ ಜಯಭೇರಿ: ಕಾರ್ಯಕರ್ತರ ವಿಜಯೋತ್ಸವ

ಶಿಗ್ಗಾವಿ 12: ಭಾರತೀಯ ಜನತಾ ಪಕ್ಷ ಕರ್ನಾಟಕದ  ಬೆಂಗಳೂರ ರಾಜರಾಜೇಶ್ವರಿ ಹಾಗೂ ಶಿರಾ ಕ್ಷೇತ್ರದ ಉಪ ಚುನಾವಣೆ ಹಾಗೂ ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಆಭೂತಪೂರ್ವ ಜಯಗಳಿಸಿದರ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷ ಶಿಗ್ಗಾವಿ ಮಂಡಲದ ಕಾರ್ಯಕರ್ತರು ಪಟ್ಟಣದ ಸವಣೂರ ವೃತ್ತದಲ್ಲಿ ಪಟಾಕಿ ಸುಡುವುದರ ಮೂಲಕ ಸಿಹಿಯನ್ನು ಹಂಚಿ ವಿಜಯೋತ್ಸವವನ್ನು ಆಚರಿಸಿದರು.

ಭಾಜಪ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ವಿಶ್ವದ ಜನ ಮೆಚ್ಚಿದ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿಜೀಯ ಅಭಿವೃದ್ದಿಪರ ಕೆಲಸಕಾರ್ಯಗಳು ಹಾಗೂ ಕಡುಬಡವರು ಮತ್ತು ದಿನದಲಿತರ ಮೇಲೆ ದೂರದೃಷ್ಟಿಯುಳ್ಳ ಅಭಿವೃದ್ದಿಪರ ಯೋಜನೆಗಳ ಮೇಲೆ ಬೆಳಕು ಚೆಲ್ಲುವುದರ ಮೂಲಕ ಭಾರತ ದೇಶವನ್ನು ವಿಶ್ವದಲ್ಲಿ ಮಾದರಿ ದೇಶವನ್ನಾಗಿ ಮಾಡಬೇಕೆಂಬ ಪ್ರಯತ್ನಕ್ಕೆ ಭಾರತ ದೇಶದ 130 ಕೋಟಿ ಜನ ನರೇಂದ್ರ ಮೋದಿಜೀಯವರಿಗೆ ಎಲ್ಲ ತರಹದ ಸಹಕಾರವನ್ನು ನೀಡುತ್ತಿದ್ದಾರೆ ಎಂದರು.

ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ ಮಾತನಾಡಿ ಭಾರತ ದೇಶದಲ್ಲಿ ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯವನ್ನು ಮಾಡಲು ನಮ್ಮ ನೆಚ್ಚಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಕೋವಿಡ್ ಹಾಗೂ ನೆರೆಹಾವಳಿ ಸುಸಂದರ್ಭದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಕರ್ನಾಟಕದ 6 ಕೋಟಿ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು.

ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರವು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಬಡವರ ಪಾಲಿಗೆ ಆಶಾಕಿರಣ ಸರಕಾರವಾಗಿವೆ ಎಂದರು.

ಈ ಸಂದರ್ಭದಲ್ಲಿ ಯುವ ಮುಖಂಡರ ನರಹರಿ.ವಾ.ಕಟ್ಟಿ , ಪುರಸಭೆ ಸದಸ್ಯ ರಮೇಶ ವನಹಳ್ಳಿ, ಆನಂದ ಸುಭೇದಾರ, ಭಾ.ಜ.ಪ ಯುವ ಮುಖಂಡ ಪ್ರತೀಕ ಕೊಳೇಕರ, ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ, ಕಾಶೀನಾಥ ಕಳ್ಳಿಮನಿ, ಮಧು ಜಂಗಲಿ, ಎಸ್.ಸಿ.ಮೋರ್ಚಾ ತಾಲೂಕಾಧ್ಯಕ್ಷ ಹನುಮಂತಪ್ಪ ಮಾದರ, ಡಾ.ಮಲ್ಲೇಶಪ್ಪ ಹರಿಜನ, ನಿಂಗಪ್ಪ ಹರಿಜನ, ಷಣ್ಮುಖಪ್ಪ ಕಂಟೆಪ್ಪನವರ, ಶಶೀಧರ ಹೊನ್ನಣ್ಣವರ, ಬಸನಗೌಡ ಪಾಟೀಲ, ಮಲ್ಲಿಕಾರ್ಜುನ ಹಡಪದ, ಸಂತೋಷ ದೊಡ್ಡಮನಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.


ಸುದ್ದಿ ಓದಿ