ಟಿಪ್ಪುಸುಲ್ತಾನ ಜಯಂತಿ ಆಚರಣೆ
ಶಿಗ್ಗಾವಿ 12: ಪಟ್ಟಣದ ಕರ್ನಾಟಕ ರಾಜ್ಯ ಕಾರ್ಮಿಕರ ವಿಕಾಸ ವೇದಿಕೆ ಶಿಗ್ಗಾವಿ ಇವರ ವತಿಯಿಂದ ಶಹೀದ ಹಜರತ ಟಿಪ್ಪುಸುಲ್ತಾನರವರ 271ನೇ ಜಯಂತಿಯನ್ನು ಟಿಪ್ಪು ಸುಲ್ತಾನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ವಿಜಂಭ್ರಣೆಯಿಂದ ಆಚರಿಸಿದರು.
ಸಂದರ್ಭದಲ್ಲಿ ಗೌರವಾಧ್ಯಕ್ಷ ಜಿಲಾನಿ ಜಂಗ್ಲಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಇಮಾಮಹುಸೇನ ಆದಂಭಾಯಿ, ತಾಲೂಕ ಕಾರ್ಯಾಧ್ಯಕ್ಷ ವೇಂಕಟೇಶ ಬಂಡಿವಡ್ಡರ, ನೌಷಾದ ಆಹ್ಮದ ಖಲೀಫನವರ, ವಾಹೀದ ಬಡಿಗೇರ, ಆರೀಫ್ ಹುಲಗೂರ, ಅಬ್ದುಲ್ ಸತ್ತಾರ ಮಿಶ್ರಿಕೋಟಿ, ಆಪ್ಸಾಕ ಆದಂಬಾಯಿ, ಸಾಹಲ್ ಸೌದಾಗರ, ಹಜ್ಜುಲಾಲ ಬಿಸ್ತಿ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು.