ರಾಣೇಬೆನ್ನೂರು ತಹಶೀಲ್ದಾರ ಕಚೇರಿಯಲ್ಲಿ ಸಂತ ಸೇವಾಲಾಲ ಜಯಂತಿ ಆಚರಣೆ
ಲೋಕದರ್ಶನ ವರದಿ
ರಾಣಿಬೆನ್ನೂರ 17: ಬಂಜಾರ ಸಮುದಾಯದ ಕುಲದೈವ ಗುರು ಸಂತ ಸೇವಾಲಾಲರ ಆಶೀರ್ವಾದದಿಂದ ಇಂದು ಸಮುದಾಯ ಸಾಮಾಜಿಕ, ಸಾಂಸ್ಕೃತಿಕ ಓಧ್ಯೋಗಿಕ ಮತ್ತು ಆರ್ಥಿಕ ಪ್ರಗತಿಯತ್ತ ಸಾಗುವಂತಾಗಿದೆ. ಸಂತ ಸೇವಾ ಲಾಲರು ಸಮುದಾಯಕ್ಕೆ ಸದಾ ಆಶೀರ್ವಾದ ಕುರುಣಿಸುತ್ತಿದ್ದಾರೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ರಾಮಣ್ಣ ನಾಯಕ ಹೇಳಿದರು.
ಅವರು ಇಲ್ಲಿನ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ನಡೆದ ಸಂತ ಶ್ರೇಷ್ಠ ಭಗವಾನ್ ಸೇವಾಲಾಲರ 283ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು, ಉಪ ತಹಶೀಲ್ದಾರ ಎಂ.ಎನ್.ಹಾದಿಮನಿ ಅವರು ಸಂತ ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆಇಬಿ ಟಿ.ಕೆ.ಲಮಾಣಿ, ಹೊಭಾ ನಾಯಕ, ಹಿರೇಶ ಲಮಾಣಿ, ವೆಂಕಪ್ಪ ಲಮಾಣಿ, ನಿಂಗಪ್ಪ ಲಮಾಣಿ, ನಾಗರಾಜ ಚವಾಣ, ರಾಮಪ್ಪ ಬಿ ಲಮಾಣಿ, ತಹಶೀಲ್ದಾರ ಕಚೇರಿ ಸಿಬ್ಬಂದಿ ಶೋಭಾ ಡವಳಗಿ, ಸುಧಾ ಅಜ್ಜಪ್ಪನವರ, ಶೋಭಾ ಆರೇರ, ವೀಣಾ ಕಲ್ಲಮ್ಮನವರ, ವೀಣಾ ಚಪ್ಪಲಗೇರಿ ಸೇರಿದಂತೆ ಮತ್ತಿತರ ಗಣ್ಯರು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.