ಹೊಸಪೇಟೆ

ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಜಯಂತಿ ಆಚರಣೆ

ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ  ಜಯಂತಿ ಆಚರಣೆ

ವಿಜಯನಗರ(ಹೊಸಪೇಟೆ) 16: ಹೊಸಪೇಟೆಯ ತಾಲ್ಲೂಕು ಕಚೇರಿಯ ಆವರದಲ್ಲಿ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಾಗೂ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತಿಯನ್ನು ಕೊವಿಡ್‌-19 ಮೂರನೇ ಅಲೆಯ ಹಿನ್ನೆಲೆ ಸ್ವಾತಂತ್ರ್ಯೋತ್ಸವನ್ನು  ಸರಳವಾಗಿ ಆಚರಿಸಲಾಯಿತು. 

ತಹಶೀಲ್ದಾರರಾದ ಹೆಚ್‌.ವಿಶ್ವನಾಥ್ ಅವರು ತಾಲ್ಲೂಕು ಕಚೇರಿಯ ಆವರಣದಲ್ಲಿ ಧ್ವಜಾರೋಹಣ ನೇರವೇರಿಸಿದರು. ನಂತರ ಅವರು ಮಾತನಾಡಿ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಶುಭಾಶಯಗಳನ್ನು ಸಲ್ಲಿಸಿದರು, ನಂತರ ಹುತ್ಮಾತರಾದ ವೀರ ಯೋಧರನ್ನು ಸ್ಮರಿಸಿದರು. 

ನಂತರ ಹೊಸಪೇಟೆಯ ತಾಲ್ಲೂಕು ಕಚೇರಿಯ ವತಿಯಿಂದ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಅವರ ಜಯಂತಿಯನ್ನು ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಭಾನುವಾರದಂದು ಸರಳವಾಗಿ ಆಚರಿಸಲಾಯಿತು. 

ಈ ಸಂದರ್ಭದಲ್ಲಿ ತಹಶೀಲ್ದಾರರಾದ ಹೆಚ್‌.ವಿಶ್ವನಾಥ್ ಅವರು ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು,  ನಂತರ ತಹಶೀಲ್ದಾರರಾದ ಹೆಚ್‌.ವಿಶ್ವನಾಥ್ ಅವರು ಎಲ್ಲರಿಗೂ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಅವರ ಜಯಂತಿಯ ಶುಭಾಷಯಗಳನ್ನು ಕೋರಿದರು. ಕೋವಿಡ್ ಹಿನ್ನೆಲೆಯಲ್ಲಿ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದರು. 

ಈ ಸಂದರ್ಭದಲ್ಲಿ ಗ್ರೇಡ್‌-2 ತಹಶೀಲ್ದಾರರಾದ ಮೇಘನಾ, ಶಿರಸ್ತೆದಾರರಾದ ಶ್ರೀಧರ್,ರಮೇಶ, ಮಂಜುನಾಥ್ ಮತ್ತು ತಾಲ್ಲೂಕು ಕಚೇರಿಯ ಸಿಬ್ಬಂದಿಗಳು ಭಾಗವಹಿಸಿದ್ದರು. 

ಸುದ್ದಿ ಓದಿ