ಹೊಸಪೇಟೆ

ಪ್ರವಾದಿ ಮಹ್ಮದ್ ಪೈಗಂಬರವರ ಜನ್ಮ ದಿನ ಸಡಗರ ಸಂಭ್ರಮದಿಂದ ಆಚರಣೆ: ಇಮಾಮ್

ಪ್ರವಾದಿ ಮಹ್ಮದ್ ಪೈಗಂಬರವರ ಜನ್ಮ ದಿನ ಸಡಗರ ಸಂಭ್ರಮದಿಂದ ಆಚರಣೆ: ಇಮಾಮ್

ಹೊಸಪೇಟೆ 16: ನಗರದಲ್ಲಿ  ಸೋಮವಾರ ಮುಸ್ಲಿಂ ಬಾಂಧವರು ಪ್ರವಾದಿ ಮಹ್ಮದ್ ಪೈಗಂಬರವರ ಜನ್ಮ ದಿನವಾದ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು. 

ನಗರದ ಈದ್ಗಾ ಮೈದಾನದಿಂದ  ಗಾಂಧಿ ವೃತ್ತದವರೆಗೆ ಮೆರವಣೆಗೆ ಸಾಗಿತು, ಬಳಿಕ ಮೀರಾಲಾಂ ಟಾಕೀಸ್ ಬಳಿ ಧಾರ್ಮಿಕ ಸಭೆಯನ್ನು ಏರಿ​‍್ಡಸಲಾಗಿತ್ತು. ಈ ಮೆರವಣೆಗೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು. 

ಈ ಒಂದು ಸಂದರ್ಭದಲ್ಲಿ  ಈದ್ ಮಿಲಾದ್ ಹಬ್ಬದ  ಹಾಗೂ ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ ಪ್ರಯುಕ್ತ ಮಾತನಾಡಿದ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಅಂಜುಮನ್  ಖಿದ್ಮತೆ  ಇಸ್ಲಾಂ ಕಮಿಟಿಯ ಅಧ್ಯಕ್ಷರಾದ ಹೆಚ್‌.ಎನ್ ಮಹಮ್ಮದ್ ಇಮಾಮ್ ನಿಯಾಜಿರವರು ಇಂದು ಮುಸ್ಲಿಂ ಬಾಂಧವರು ವಿಶ್ವಾದಾದ್ಯಂತ ಈದ್‌-ಈ-ಮಿಲಾದ್‌-ಉನ್‌-ನಬಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಈ ದಿನವು ಮುಸ್ಲಿಂ ಸಮುದಾಯದವರಿಗೆ ಮಹತ್ವಪೂರ್ಣ ದಿನವಾಗಿದೆ. ಈ ದಿನ ಇಸ್ಲಾಂನ ಕೊನೆಯ ಪ್ರವಾದಿ ಹಜರತ್ ಮುಹಮ್ಮದ್ ಜನಿಸಿದರು. ಮತ್ತು ಜನಿಸಿದ ಅದೇ ದಿನದಂದು ಅವರು ಮರಣವನ್ನು ಹೊಂದಿದ್ದರು. ಈದ್‌-ಈ-ಮಿಲಾದ್‌-ಉನ್‌-ನಬಿ ಹಬ್ಬವನ್ನು ಈದ್‌-ಈ-ಮಿಲಾದ್ ಅಥವಾ ಮೌಲಿದ್ ಎಂದೂ ಕರೆಯುತ್ತಾರೆ. ಈ ದಿನ ಮುಹಮ್ಮದ್ ಜನ್ಮದಿನದ ವಿಶೇಷ ಸಂದರ್ಭದಲ್ಲಿ ಮೆರವಣಿಗೆಗಳನ್ನು ಕೈಗೊಳ್ಳಲಾಗುತ್ತದೆ. 

ಅದೇ ರೀತಿ ಈ ನಮ್ಮ ಹೊಸಪೇಟೆಯಲ್ಲಿ  ಈದ್ ಮಿಲಾದ್ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಮೆರವಣಿಗೆ ನಡೆಸಿದ ನನ್ನ ಎಲ್ಲಾ ಮುಸ್ಲಿಂ ಬಾಂಧವರಿಗೂ ಹಾಗೂ ಈ ಒಂದು ಸಂಭ್ರಮದ ಮೆರೆವಣಿಗೆ ಯನ್ನು  ಯಶಸ್ವಿಗೊಳಿಸಲು  ಸಹಕರಿಸಿದ ಎಲ್ಲಾ ಆರಕ್ಷಕ ಸಿಬ್ಬಂದಿಗಳಿಗೂ ಹಾಗೂ ಪತ್ರಿಕಾ ಮಾಧ್ಯಮ ದವರಿಗೂ ಅನಂತ ಅನಂತ ಧನ್ಯವಾದಗಳು ತಿಳಿಸಿದರು. 

ಧಾರ್ಮಿಕ ಸಭೆಯಲ್ಲಿ ವಕ್ಫ್‌ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ದಾದಾಪೀರ್ ಭಾವ್, ಹಾಗು ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷರಾದ ಎಮ್ ಫಿರೋಜ್ ಖಾನ್ ಕಾರ್ಯದರ್ಶಿಗಳಾದ ಎಮ್‌.ಡಿ.ಅಬೂಬಕ್ಕರ್ ಖಾಜಾಂಚಿಗಳಾದ ಜಿ.ಅನ್ಸರ್ ಭಾಷ ಸಹಕಾರ್ಯದರ್ಶಿಗಳಾದ ಡಾ.ಎಮ್‌.ಡಿ. ದುರ್ವೇಶ್ ಮೈನುದ್ದಿನ್ ಹಾಗು ಸದ್ಯಸರುಗಳಾದ  ಕೋತ್ವಾಲ್ ಮೊಹಮ್ಮದ್ ಮೋಸಿನ್ ಅಡ್ವಕೇಟ್ ಸದ್ದಾಮ್ ಮತ್ತು ಎಲ್ ಗುಲಾಮ್ ರಸೂಲ್, ಬಡಾವಲಿ ಹಾಗು ಸಮಾಜದ ಹಿರಿಯ ಮುಖಂಡರುಗಳು ಯುವಕರು, ಪುಟ್ಟ ಪುಟ್ಟ ಮಕ್ಕಳು ಭಾಗವಹಿಸಿದ್ದರು. 


ಸುದ್ದಿ ಓದಿ