ರಾಣೆಬೆನ್ನೂರ

ಆರ್‌ಟಿಇಎಸ್ ಕಾಲೇಜಿನಲ್ಲಿ ಮಹಾತ್ಮಾ ಗಾಂಧೀಜಿ ಜಯಂತ್ಯೋತ್ಸವ

ಆರ್‌ಟಿಇಎಸ್ ಕಾಲೇಜಿನಲ್ಲಿ ಮಹಾತ್ಮಾ ಗಾಂಧೀಜಿ ಜಯಂತ್ಯೋತ್ಸವ

ಲೋಕದರ್ಶನ ವರದಿ 

ರಾಣೇಬೆನ್ನೂರು 05: ನಗರ ಹೂರ ವಲಯದ ಆರ್‌.ಟಿ.ಇ.ಎಸ್ ಕಾಲೇಜು ಸಾವುಕಾರ ಸಭಾಭವನದಲ್ಲಿ ಶನಿವಾರ ಎನ್‌.ಎಸ್‌.ಎಸ್ ಐ.ಕ್ಯೂ.ಇ.ಎಸ್ ಸಹಯೋಗದಲ್ಲಿ ಲಾಲ್ ಬಹದ್ದೂರ ಶಾಸ್ರ್ತಿಜೀ ಮತ್ತು ಮಹಾತ್ಮಾ ಗಾಂಧಿಜೀ ಅವರ ದಿನಾಚರಣೆ ಕಾರ್ಯಕ್ರಮವು ಸರಳವಾಗಿ ನೆರೆವೆರಿಸಲಾಯಿತು.  


ಕಾಲೇಜು ಪ್ರಾಚಾರ್ಯ ಎಫ್‌.ಹೆಚ್‌.ಮಾಚೇನಹಳ್ಳಿ ಅವರು ದೇಶ ಕಂಡ ಮಹಾನುಭಾವರು ಕುರಿತು ವಿಶೇಷ ಉಪನ್ಯಾಸ ನೀಡಿದರು, ಸಂಸ್ಥೆಯ ಅಧ್ಯಕ್ಷ ಶುಭಾಸ್ ಸಾವುಕಾರ ಅವರು ಕಾಲೇಜು ಆವರಣದಲ್ಲಿ ರೋಟರಿ ಸೇವಾ ಸಂಸ್ಥೆಯ ಸಹಯೋಗದಲ್ಲಿ ವಿವಿಧ ಪ್ರಭೇದಗಳ ಸಸಿಗಳನ್ನು ನೆಡುವುದರ ಮೂಲಕ ಗಾಂಧೀ ಜಯಂತಿಗೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸಂಯೋಜಕ ಡಾ. ಮಧುಕುಮಾರ .ಆರ್  ರಾಷ್ಟ್ರೀಯ ಸೇವಾ ಯೋಜನಾಧಿಕಾರಿ, ಡಾ. ಸರಸ್ವತಿ ಹೆಚ್‌.ಬಮ್ಮನಾಳ, ಸಹ ಪ್ರಾದ್ಯಾಪಕ ಆರ್‌.ಡಿ.ನಾಯಕ ಸೇರಿದಂತೆ ಉಪನ್ಯಾಸಕರು, ಎನ್‌.ಸಿ.ಸಿ., ಎನ್‌.ಎಸ್,ಎಸ್ ವಿಧ್ಯಾರ್ಥಿಗಳು ಉಪನ್ಯಾಸಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ