ಬೈಲಹೊಂಗಲ

ಮಡಿವಾಳ ಮಾಚಿದೇವರ ಜಯಂತಿ ಆಚರಣೆ

ಮಡಿವಾಳ ಮಾಚಿದೇವರ ಜಯಂತಿ ಆಚರಣೆ

ಬೈಲಹೊಂಗಲ 02: ಶಿವಶರಣ ಮಡಿವಾಳ ಮಾಚಿದೇವರ ಜಯಂತಿ ಉತ್ಸವವನ್ನು ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಸೋಮವಾರ ಕೋವಿಡ್ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ತಹಶೀಲ್ದಾರ ಕಾರ್ಯಾಲಯದಲ್ಲಿ ಉಪತಹಶೀಲ್ದಾರ ಮಂಜುನಾಥ ತೋರಗಲ್ಲ ಅವರು ಮಾಚಿದೇಚರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಪತ್ರಿಬಸವ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಮಾಚಿದೇವರ ದೇವಸ್ಥಾನದಲ್ಲಿ ಮಾಚಿದೇವರ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು.

ಉಪತಹಶೀಲ್ದಾರ ಮಂಜುನಾಥ ತೋರಗಲ್ಲ ಹಾಗೂ ಪುರಸಭೆ ಸದಸ್ಯ ಗುರು ಮೆಟಗುಡ್ಡ ಅವರನ್ನು ಸನ್ಮಾನಿಸಲಾಯಿತು. ಇಲ್ಲಿನ ಸಾರಿಗೆ ಘಟಕದಲ್ಲೂ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು.

ಮಡಿವಾಳರ ಸಂಘದ ಅಧ್ಯಕ್ಷ ಶಿವಾನಂದ ಮಡಿವಾಳರ, ಕಾಶೀನಾಥ ಮಡಿವಾಳರ, ಶ್ರೀಕಾಂತ ಸಂಪಗಾಂವಿ, ಶ್ರೀಶೈಲ ಮಡಿವಾಳರ, ವಿಜಯ ಮಡಿವಾಳರ, ಶಶಿಧರ ದೇವನಾಳ, ಬಾಳೇಶ ಮಡಿವಾಳರ, ಸುರೇಶ ತೋರಗಲ್ಲ, ಮುತ್ತು ಮಡಿವಾಳರ, ಗದಿಗೆಪ್ಪ ಮಡಿವಾಳರ, ಉಮೇಶ ಮಡಿವಾಳರ ಸೇರಿದಂತೆ ಮಡಿವಾಳ ಸಮಾಜದ ಬಾಂಧವರು ಉಪಸ್ಥಿತರಿದ್ದರು.

ಸುದ್ದಿ ಓದಿ