ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ
ಲೋಕದರ್ಶನ ವರದಿ
ಗುರ್ಲಾಪೂರ 09: ಸ್ಥಳಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ರವಿವಾರ ರಂದು ಆಚರಿಸಲಾಯಿತು.
ಶಿವಾನಂದ ಹಿರೇಮಠ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ರೇಣುಕಾಚಾರ್ಯರ ತತ್ವಗಳು, ಆಚಾರ ವಿಚಾರ, ಮನುಕುಲಕ್ಕೆ ದಾರಿ ದೀಪವಾಗಿವೆ. ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರವಾದದ್ದು. ಮಾನವಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಅನ್ನುವ ನುಡಿಯಂತೆ ದೇಶದುದ್ದಕೂ ಸಂಚರಿಸಿ ಧರ್ಮಪ್ರಚಾರ ಮಾಡಿದರು ಎಂದು ಹೇಳಿದರು.
ಶಿವರುದ್ರಯ್ಯ ಹಿರೇಮಠ ಮಾತನಾಡಿ ರೇಣುಕಾಚಾರ್ಯರು ಕೊಲ್ಲಿಪಾಕಿ ಸೋಮೇಶ್ವರ ಲಿಂಗದಲ್ಲಿ ಉದ್ಭವವಾಗಿ ವೀರಶೈವ ಧರ್ಮ ಸ್ಥಾಪಿಸಿ ಧರ್ಮ ಪ್ರಚಾರಕ್ಕೆ ದೇಶದ ನಾನಾ ಭಾಗಗಳಲ್ಲಿ ಸಂಚರಿಸಿ ಮಾನವಿಯ ಮೌಲ್ಯಗಳನ್ನು ಬೋಧಿಸಿದರು ಎಂದು ಹೇಳಿದರು.
ಈರಯ್ಯ ಹಿರೇಮಠ ಡಾ. ಪಿ. ಎಮ್ ಹಿರೇಮಠ, ಗುರು ಜಡಿ, ನಾಗಯ್ಯಾ ಜಡಿ, ಮಹಾಲಿಂಗಯ್ಯಾ ಜಡಿ, ಮಹಾದೇವ ಮುಕ್ಕುಂದ ಮಹಾದೇವ ಜಕಾತಿ, ಚಿದಾನಂದ ಹಿರೇಮಠ ಹನಮಂತ ಮುಗಳಖೋಡ ಪಾರ್ವತಿ ಗಾಣಿಗೇರ, ದಾಕ್ಷಾಯಿನಿ ಮುಗಳಖೋಡ, ವಿಮಲಾ ಹಿರೇಮಠ, ಗಣೇಶ ಹಿರೇಮಠ, ಪಾರವ್ವ ಜಡಿ, ಜಂಗಮ ಸಮಾಜದ ಬಂಧುಗಳು, ಗ್ರಾಮಸ್ಥರು ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು. ಪರುತ ಹಿರೇಮಠ ಸ್ವಾಗತಿಸಿ ನಿರೂಪಿಸಿದರು. ಗಣೇಶ ಹಿರೇಮಠ ವಂದಿಸಿದರು.