ಬೈಲಹೊಂಗಲ

ಚಿನ್ಮಯಜ್ಞಾನಿ ಚನ್ನ ಬಸವೇಶ್ವರ ಜಯಂತಿ ಆಚರಣೆ

ಚಿನ್ಮಯಜ್ಞಾನಿ ಚನ್ನ ಬಸವೇಶ್ವರ ಜಯಂತಿ ಆಚರಣೆ

ಲೋಕದರ್ಶನ ವರದಿ 


ಬೈಲಹೊಂಗಲ 28: ಸಮೀಪದ ಮಲ್ಲೂರ ಗ್ರಾಮದಲ್ಲಿ ಎಂಟನೇ ವರ್ಷದ ಚಿನ್ಮಯಜ್ಞಾನಿ ಚನ್ನ ಬಸವೇಶ್ವರ ಜಯಂತಿ, ವಚನ ಜ್ಞಾನಜ್ಯೋತಿ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರವಚನ, ಉಪನ್ಯಾಸ, ಸಾಂಸ್ಕೃತಿಕ ಮತ್ತು ಮಕ್ಕಳ ವಚನ ಗಾಯನ ನೃತ್ಯ ನಾಟಕ ಕಾರ್ಯಕ್ರಮಗಳು ಜರುಗಿದವು. 

   ನೇಗಿನಹಾಳ ಮಡಿವಾಳೇಶ್ವರ ಮಠದ ಬಸವಸಿದ್ದಲಿಂಗ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷೆ ಬೀಸಾಬಿ ಪಕೀರಸಾಬ ಸನದಿ ಅಧ್ಯಕ್ಷತೆ ವಹಿಸಿದ್ದರು.  

    ರಾಷ್ಟ್ರೀಯ ಬಸವ ಸೇನಾ ಅಧ್ಯಕ್ಷ ಶಂಕರ ಗುಡಸ, ಜಾಗತಿಕ ಲಿಂಗಾಯತ ಮಹಿಳಾ ಘಟಕ ತಾಲೂಕ ಅಧ್ಯಕ್ಷೆ ಪ್ರೇಮಾ ಅಂಗಡಿ, ರಾಷ್ಟ್ರೀಯ ಬಸವದಳ ಸಂಘಟಕ ಸುಧೀರ ವಾಲಿ ಭಾಗವಹಿಸಿದ್ದರು. 


ಸುದ್ದಿ ಓದಿ