ವಿಶಿಷ್ಟ ರೀತಿಯಲ್ಲಿ ಮೊಹರಂ ಆಚರಣೆ
ಶಿಗ್ಗಾವಿ 30: ಪಟ್ಟಣದಲ್ಲಿಂದು ವಿಶಿಷ್ಟ ರೀತಿಯಲ್ಲಿ ಮೊಹರಂ ಆಚರಣೆ ಮಾಡಿದ ಮುಸಲ್ಮಾನ್ ಬಾಂಧವರು ಪಟ್ಟಣದ ಸವಣೂರು ರಸ್ತೆಯಿಂದ ಆನೆ ರೂಪಕ ಕುದುರೆ ಹಾಗೂ ಎತ್ತುಗಳ ಮೆರವಣಿಗೆಯೊಂದಿಗೆ ವಿವಿಧ ಬಡಾವಣೆ ಮೂಲಕ ಮೌಲಾಲಿ ಗುಡ್ಡದಲ್ಲಿರುವ ದರ್ಗಾಕೆ ಭೇಟಿ ಮಾಡಿ ಪೂಜೆ ಸಲ್ಲಿಸಿ ನೈವೇದ್ಯಕ್ಕೆ ತಂದ ರೊಟ್ಟಿ ಬುತ್ತಿಯನ್ನು ಮೊಗಲಲ್ಲಿ ಪರಿವಾರದವರಿಂದ ಭಕ್ತರಿಗೆ ನಂತರ ಊರಿನ ಪ್ರಮುಖ ರಸ್ತೆಗಳಲ್ಲಿ ಸಂಭ್ರಮದಿಂದ ಮೆರವಣಿಗೆ ಮಾಡುತ್ತಾ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಮಂಜುನಾಥ ಮಣ್ಣಣ್ಣವರನ್ನು ದರ್ಗಾದಲ್ಲಿ ಆತ್ಮೀಯವಾಗಿ ಮೆರವಣಿಗೆಗೆ ಸ್ವಾಗತಿಸಿಕೊಂಡರು ಮೊಗಲಲ್ಲಿ ಪರಿವಾರದವರು ಹಾಗೂ ನೂರಾರು ಮುಸಲ್ಮಾನ ಬಾಂಧವರು ಭಾಗವಹಿಸಿ ಮೊಹರಂ ಹಬ್ಬವನ್ನು ಸಂಭ್ರಮಿಸಿದರು.