ಶಿಗ್ಗಾವ್

ಬಡ ಮಕ್ಕಳಿಗೆ ಹಾಲು ವಿತರಣೆ ಮಾಡುವುದುರ ಮೂಲಕ ಬಸವ ಪಂಚಮಿ ಆಚರಣೆ

ಬಡ ಮಕ್ಕಳಿಗೆ ಹಾಲು ವಿತರಣೆ ಮಾಡುವುದುರ ಮೂಲಕ ಬಸವ ಪಂಚಮಿ ಆಚರಣೆ

ಲೋಕದರ್ಶನ ವರದಿ

ಶಿಗ್ಗಾವಿ 22:  ಹಬ್ಬಗಳು ಮತ್ತು ಆಚರಣೆಗಳು ಮನುಷ್ಯನ ಪ್ರಗತಿಗೆ ಪೂರಕವಾಗಿ ನಡೆಯಬೇಕೆ ಹೊರತು ಮೌಡ್ಯತೆಯಿಂದ ಕೂಡಿಬಾರದು ಆಚರಣೆಯ ಹೆಸರಿನಲ್ಲಿ ಹಾಲು ತುಪ್ಪವನ್ನು ಹಾಳು ಮಾಡದೆ ಹಸಿದವರಿಗೆ ಅಗತ್ಯ ಇರುವವರಿಗೆ ನೀಡಿದರೆ ಹಬ್ಬಕ್ಕೆ ನಿಜವಾದಅರ್ಥ ಬರುತ್ತದೆ ಎಂದು ಮಾನವ ಬಂಧುತ್ವ ವೇದಿಕೆ ಹಾವೇರಿಜಿಲ್ಲಾ ಸಂಚಾಲಕ ಪ್ರಕಾಶ ಹಾದಿಮನಿ ಹೇಳಿದರು.

ತಾಲೂಕಿನ ಕೃಷಿ ನಗರ ಗ್ರಾಮದಲ್ಲಿ ಮಾನವ ಬಂಧುತ್ವ ವೇದಿಕೆ ಸಂಚಾಲನಾ ಸಮಿತಿ ವತಿಯಿಂದ  ಬಸವ ಪಂಚಮಿ ಆಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಬಡ ಮಕ್ಕಳಿಗೆ ಹಾಲು ಹಣ್ಣು ವಿತರಣಾ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಮಾನವ ಬಂಧುತ್ವ ವೇದಿಕೆಯಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಲಾಗುತ್ತಿದೆ.  ಈ ದಿನದಂದು ನಾಡಿನಾಧ್ಯಾಂತ ಲಕ್ಷಾಂತರ ಲೀಟರ್ ಹಾಲು, ತುಪ್ಪ, ಹಣ್ಣನ್ನು ಹುತ್ತ, ನಾಗರ ಕಲ್ಲುಗಳ ಮೇಲೆ ಸುರಿಯುತ್ತಾರೆ. ಹಾವು ಹಾಲು ಕುಡಿಯುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾದರೂ ಜನರು ಮೌಢ್ಯ ಅನುಸರಿಸುತ್ತಿದ್ದಾರೆ ಮನುಷ್ಯನಲ್ಲಿ ದೈವ ಭಕ್ತಿ ಮತ್ತು ನಂಬಿಕೆ ಇರಬೇಕು ಸತ್ಯಆದರೆಅದು ಮೌಡ್ಯತೆಯಿಂದ ಕೂಡಿರಬಾರದು ಅದಕ್ಕಾಗಿಯೆ ಇಂತಹ ಕಂದಾಚಾರ ಹೋಗಲಾಡಿಸಲು ಶಿಕ್ಷಣದಿಂದ ಸಾಧ್ಯಎಂದು ತಿಳಿಸಿದರು.

ತಾಲೂಕ ಸಂಚಾಲಕ ವಿಶಾಲ ಮರಾಠೆ ಮಾತನಾಡಿ ಇಂದು ರಾಜ್ಯಾದ್ಯಂತ ಅನೇಕ ಬಡ ಮಕ್ಕಳು ಅಪೌಷ್ಠಿಕತೆಯಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಹಾಲು ಮತ್ತು ಹಣ್ಣು ಉತ್ತಮವಾದ ಪೌಷ್ಠಿಕ ಆಹಾರವಾಗಿದೆ ಇಂತಹ ಆಹಾರಗಳನ್ನು ಹಬ್ಬದ ಹೆಸರಿನಲ್ಲಿ ಮಣ್ಣಿನಲ್ಲಿ ವ್ಯರ್ಥ ಮಾಡದೆ ಮಕ್ಕಳಿಗೆ ನೀಡಿದರೆ ಹಬ್ಬ ಸಾರ್ಥಕವಾಗುತ್ತದೆ ಎಂದರು.

ಜಾನಪದ ಕಲಾವಿದ ಶರೀಫ ಮಾಕಪ್ಪನವರ ಅವರು ಮಾತನಾಡಿಇಂದು ನಾಡಿನಾದ್ಯಂತ ಸಂಮ್ರಮದಿಂದ ಬಸವ ಪಂಚಮಿಯನ್ನು ಮಕ್ಕಳಿಗೆ ಹಾಲು ಹಣ್ಣು ವಿತರಣೆ ಮಾಡುವುದುತುಂಬಾ ಸಂತೋಷದ ವಿಚಾರಜೊತೆಗೆ ಮಾನವ ಬಂಧುತ್ವ ವೇದಿಕೆಯು ಮೌಢ್ಯ ಆಚರಣೆ ಕುರಿತು ಯುವಕರಲ್ಲಿ ಅರಿವನ್ನು ಹಾಗೂ ಮೌಢ್ಯದಿಂದ ಜ್ಞಾನದ ಕಡೆಗೆ ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೊಯ್ಯುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ತಾಲೂಕ ಸಂಚಾಲನಾ ಸಮಿತಿಯ ಸದಸ್ಯರಾದ ಸುನೀಲ ಬಂಡಿವಡ್ಡರ, ಮನೋಜ ಹಾದಿಮನಿ, ಗ್ರಾಮದ ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ ಗ್ರಾಂ.ಪಂ. ಸಿಬ್ಬಂದಿಚಂದ್ರು ಬಡಿಗೇರ ಹಾಗೂ ಗ್ರಾಮಸ್ಥರು ಮಕ್ಕಳು ಹಾಜರಿದ್ದರು. 

ಸುದ್ದಿ ಓದಿ