ಸಿರುಗುಪ್ಪ

ಸಾಮರಸ್ಯ ಭಾವೈಕ್ಯತೆಗೆ ಧಕ್ಕೆ ಬಾರದಂತೆ ಗಣೇಶೋತ್ಸವ ಆಚರಿಸಿ: ಎಸ್‌ಪಿ ಸೈದುಲು ಅದಾವತ್ತ್‌

ಸಾಮರಸ್ಯ ಭಾವೈಕ್ಯತೆಗೆ ಧಕ್ಕೆ ಬಾರದಂತೆ ಗಣೇಶೋತ್ಸವ ಆಚರಿಸಿ: ಎಸ್‌ಪಿ ಸೈದುಲು ಅದಾವತ್ತ್‌

ಲೋಕದರ್ಶನ ವರದಿ 

ಸಿರುಗುಪ್ಪ 27: ಹಬ್ಬಗಳು ಸೌಹಾರ್ದತೆಯ ಸಂಕೇತವಾಗಿದ್ದು ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು ಸಾಮರಸ್ಯ ಮತ್ತು ಭಾವೈಕ್ಯತೆಗೆ ಧಕ್ಕೆಬಾರದಂತೆ ಸರ್ವರೂ ಗಣೇಶ ಹಬ್ಬ ಆಚರಿಸುವಲ್ಲಿ ಜಾಗೃತಿ ತೋರಬೇಕು ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅದವತ್ ಹೇಳಿದರು.  


ಸಿರುಗುಪ್ಪ ನಗರದ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಗಣೇಶ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ನೆಮ್ಮದಿಗಾಗಿ ಸರ್ಕಾರ ನಿಯಮಗಳನ್ನು ರೂಪಿಸಿದ್ದು ಅವುಗಳನ್ನು ಎಲ್ಲರೂ ಪಾಲನೆ ಮಾಡಬೇಕು ಗಣೇಶನನ್ನು ಪ್ರತಿಷ್ಠಾಪಿಸುವ ಆಯೋಜಕರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು ಮೈಕ್ ಪೆಂಡಾಲ್ ಹಾಕಲು ಪರವಾನಗಿ ಪಡೆಯಬೇಕು ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗೆ 6ಗಂಟೆವರೆಗೆ ಲೌಡ್ ಸ್ಪೀಕರ್ ಬಳಸಬಾರದು ಪಿಒಪಿ ಗಣಪತಿ ಪ್ರತಿಷ್ಠಾಪಿಸದೆ ಪರಿಸರ ಪೂರಕ ಮಣ್ಣಿನ ಗಣಪತಿಗಳನ್ನು ಪ್ರತಿಷ್ಠಾಪಿಸಬೇಕು ಡಿಜೆ ಸಿಸ್ಟಮ್ ಬಳಸಬಾರದು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬಾರದಂತೆ ಸರ್ವರೂ ಒಟ್ಟಾಗಿ ಸೇರಿ ಹಬ್ಬ ಆಚರಿಸಬೇಕು ಮನರಂಜನೆ ಕಾರ್ಯಕ್ರಮ ಹಾಗೂ ಗಣೇಶ ವಿಸರ್ಜನಾ ಮೆರವಣಿಗೆ ಮಾರ್ಗದ ಬಗ್ಗೆ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.  


ಡಿಎಸ್ ಪಿ ಸತ್ಯನಾರಾಯಣ ರಾವ್, ತಹಸೀಲ್ದಾರ್ ಎನ್ ಆರ್ ಮಂಜುನಾಥಸ್ವಾಮಿ, ಸಿಪಿಐ ಯಶವಂತ ಬಿಸನಳ್ಳಿ,ಪಿಎಸ್‌ಐ ಕೆ. ರಂಗಯ್ಯ, ಅಪರಾಧ ವಿಭಾಗದ ಪಿಎಸ್ ಐ ಗಂಗಾಧರ, ಜೆಸ್ಕಾಂ ಎಇಇ ನವೀನ್ ಕುಮಾರ್, ನಗರಸಭೆ ಎಇಇ ಗಂಗಾಧರ, ಮುಸ್ಲಿಂ ಮುಖಂಡ ಡಾ. ಅಲಿ ಸಾಬ್,ಆದಿಲ್ ಸಾಬ್, ಮೋದಿನ್ ಸಾಬ್, ನೂರುದ್ದೀನ್, ಶೆಕ್ಷಾವಲಿ, ಪ್ರಮುಖರಾದ ಎಸ್ ಮಲ್ಲಿಕಾರ್ಜುನ, ರಾಮನಗೌಡ, ವೀರೇಶ, ವಿನಯ್ ಮಿತ್ರ,  ಹೇಮನಗೌಡ, ಚೆನ್ನಬಸವ, ಕಂಬಳಿ ಮಲ್ಲಿಕಾರ್ಜುನ, ಎ ಜೆ ಮಂಜುನಾಥ ಸಿಬ್ಬಂದಿ ವರ್ಗದವರು ಗಣೇಶ ಪ್ರತಿಷ್ಠಾಪಿಸುವ ಆಯೋಜಕರು ಪದಾಧಿಕಾರಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ