ಶಿಗ್ಗಾವ್

ಅಧಿಕಾರಿಗಳು ನಿಷ್ಕಾಳಜಿಯಿಂದ ಕಾಮಗಾರಿ: ಸಾರ್ವಜನಿಕರಿಗೆ ತೊಂದರೆ

ಅಧಿಕಾರಿಗಳು ನಿಷ್ಕಾಳಜಿಯಿಂದ ಕಾಮಗಾರಿ: ಸಾರ್ವಜನಿಕರಿಗೆ ತೊಂದರೆ

ಲೋಕದರ್ಶನ ವರದಿ

ಶಿಗ್ಗಾವಿ 03: ಪಟ್ಟಣದ ಹಳೆ ಬಸ್ಟ್ಯಾಂಡಿನಲ್ಲಿ ನಿಮರ್ಿಸಿರುವ ವಾಯುವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯ ವಾಣಿಜ್ಯ ಮಳಿಗೆಯನ್ನು ಇಲಾಖೆಯು ಮೂಲ ನಕ್ಷೆಯಂತೆ ನಿಮರ್ಾಣ ಮಾಡದೇ ಸರಕಾರಿ ಕಟ್ಟಡ ಎನ್ನುವ ಉದ್ದೇಶವಿಟ್ಟುಕೊಂಡು ಅಧಿಕಾರಿಗಳು ನಿಷ್ಕಾಳಜಿಯಿಂದ ಕಾಮಗಾರಿಯನ್ನು ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಿದ್ದಾರೆ ಎಂದು ಹೋಟೆಲ್ ಉದ್ಯಮಿ ರಮೇಶ ಬ್ರಹ್ಮಾವರ ಆಪಾದಿಸಿದ್ದಾರೆ.

ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಟ್ಟಡ ಕಾಮಗಾರಿ ನಡೆದಿದ್ದಾಗ ಆಗುತ್ತಿರುವ ಅತಿಕ್ರಮಣದ ತೊಂದರೆಗಳು ಮತ್ತು ಲೋಪದೋಷಗಳನ್ನು ಕುರಿತು ವಾ.ಕ.ರ.ಸಂ ಅಧಿಕಾರಿಗಳಿಗೆ ಸಾಕಷ್ಟು ಭಾರಿ ಅತಿಕ್ರಮಣ ಕುರಿತಂತೆ ತಕರಾರು ವ್ಯಕ್ತಪಡಿಸಿ ಅಜರ್ಿಗಳನ್ನು ಸಲ್ಲಿಸಿದ್ದರೂ ಅವರು ಸರಿಯಾಗಿ ಸ್ಪಂದಿಸದೇ 60 ವರ್ಷಗಳಿಂದ ಇದ್ದ ಚರಂಡಿಯನ್ನು ಮುಚ್ಚಿ, ಟಿ.ಸಿಯನ್ನು ಸಾರ್ವಜನಿಕರಿಗೆ ಪಾಯವಾಗುವ ರೀತಿ ನಿಮರ್ಾಣಕ್ಕೆ ಮುಂದಾಗಿದ್ದರು,  ಇದರಿಂದ ಸಾರ್ವಜನಿಕರಿಂದ ಬಹಳಷ್ಟು ಅಕ್ರೋಷ ವ್ಯಕ್ತವಾಗಿತ್ತು, ಎಲ್.ಡಿ ಮತ್ತು ಹೆಚ್.ಡಿ ಲೈನುಗಳನ್ನು ಒಂದೇ ಪೈಪಿನಲ್ಲಿ ಹೆಚ್ಚು ಆಳದಲ್ಲಿ ಎಳೆಯದೆ ಮೇಲೆಯೇ ಹಾಕಿದ್ದಾರೆ ಮತ್ತು ಕಟ್ಟಡದ ಮೇಲ್ಚಾವಣಿಯಿಂದ ಬೀಳುವ ನೀರು ಖಾಸಗಿಯವರಾದ ನಮ್ಮ ಅಂಗಳಕ್ಕೆ ಬೀಳುವಂತೆ ನಿಮರ್ಿಸಲಾಗಿದೆ ಎಂದು ಆಪಾದಿಸಿದರು.

ಸ್ಥಳಕ್ಕೆ ಬೇಟಿ ನೀಡಿದ ವಾ.ಕ.ರ.ಸಂಸ್ಥೆಯ ವಿದ್ಯುತ್ ತಾಂತ್ರಿಕ ಅಧಿಕಾರಿ ರಮೇಶ ದೂರಿನ ಮೇಲೆ ಕಾಮಗಾರಿಯನ್ನು ಪರಿಶೀಲಿಸಿ, ಮಾಧ್ಯಮದವರೊಂದಿಗೆ ಮಾತನಾಡಿ, ಈ ಕುರಿತು ಹಿರಿಯ ಅಧಿಕಾರಿಗಳ ಜೊತೆ ಸಂಪಕರ್ಿಸಿರಿ, ವಿದ್ಯುತ್ ಲೈನ್ ಸಂಪರ್ಕಗಳು ಮಾತ್ರ ನನ್ನ ವ್ಯಾಪ್ತಿಗೆ ಬರುತ್ತವೆ ಆ  ತಪ್ಪುಗಳನ್ನು ಶೀಘ್ರದಲ್ಲಿ ಸರಿಪಡಿಸುವುದಾಗಿ ತಿಳಿಸಿ, ಸಿವಿಲ್ ಕಟ್ಟಡದ ವಿಷಯಗಳಿಗೆ ಬೇರೆ ಅಧಿಕಾರಿಗಳಿದ್ದಾರೆ ಅವರನ್ನು ಸಂಪಕರ್ಿಸಿ ಎಂದು ತಿಳಿಸಿದರು 

ಸುದ್ದಿ ಓದಿ