ಕಾರು- ರಿಕ್ಷಾ ಡಿಕ್ಕಿ; ರಿಕ್ಷಾ ಚಾಲಕ ಸಾವು
ಕಾರವಾರ 29 : ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ (ಕಾರವಾರ-ಗೋವಾ) ಕಾರು ಹಾಗೂ ರಿಕ್ಷಾ ನಡುವೆ ಸಂಜೆ 5 ರ ಸುಮಾರಿಗೆ ಅಪಘಾತ ಸಂಭವಿಸಿ, ರಿಕ್ಷಾ ಚಾಲಕ ಸಾವನ್ನಪ್ಪಿದ ಘಟನೆ ಕಾರವಾರ ಸನಿಹದ ಮಾಜಾಳಿ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದ ಪರಿಣಾಮವಾಗಿ ರಿಕ್ಷಾ ಚಾಲಕ ಪ್ರದೀಪ ಪೆಡ್ನಕರ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅತೀ ವೇಗದಲ್ಲಿದ್ದ ತಮಿಳುನಾಡು ನೋಂದಣಿಯ ಮಾರುತಿ ಬ್ರಿಜಾ ಕಾರ್ ನಿಯಂತ್ರಣ ತಪ್ಪಿ ಆಟೋ ರಿಕ್ಷಾಗೆ ಗುದ್ದಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡ ರಿಕ್ಷಾ ಚಾಲಕ ಸಾವನ್ನಪ್ಪಿದ್ದಾನೆ. ಚಿತ್ತಾಕುಲಾ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.