ಬಳ್ಳಾರಿ

ಜಿಲ್ಲಾ ಪಂಚಾಯತಿಯ ಸಂಪನ್ಮೂಲ ಕೇಂದ್ರದಲ್ಲಿ ಸಾಮರ್ಥ್ಯ ಅಭಿವೃದ್ಧಿ ತರಬೇತಿ

ಜಿಲ್ಲಾ ಪಂಚಾಯತಿಯ ಸಂಪನ್ಮೂಲ ಕೇಂದ್ರದಲ್ಲಿ ಸಾಮರ್ಥ್ಯ ಅಭಿವೃದ್ಧಿ ತರಬೇತಿ

ಬಳ್ಳಾರಿ: ಸೆ 14: ನಗರದ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಂಗಣದ ಹಿಂದುಗಡೆ ಸಂಪನ್ಮೂಲ ಕೇಂದ್ರದಲ್ಲಿ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.  

ಡಿ ಎಸ್ ದುರ್ಗಾಶಂಕರ್ ರವರು ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕೈಪಿಡಿಯನ್ನು ಶಿಬಿರಾರ್ಥಿಗಳಿಗೆ ವಿತರಣೆ ಮಾಡಿದರು. ನಂತರ ಈ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡುತ್ತಾ  ಪಂಚಾಯಿತಿಯ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳಾ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಸಾಮರ್ಥ್ಯ ಅಭಿವೃದ್ಧಿ  ಮೂರು ದಿನಗಳ ಕಾಲ  ತರಬೇತಿ ಕಾರ್ಯಕ್ರಮವನ್ನು ಇಂದಿನಿಂದ ಆರಂಭ ಮಾಡಲಾಯಿತು. 

ಒಂದು ತರಬೇತಿ ಶಿಬಿರದಲ್ಲಿ 30 ಶಿಬಿರಾರ್ಥಿಗಳು ಒಳಗೊಂಡಿರುತಾರೆ. ಮೊದಲನೆಯ ದಿನದಲ್ಲಿ ತರಬೇತಿ ಕೇಂದ್ರದಲ್ಲಿ ನೋಂದಣಿ ಮಾಡಿಸುವುದು. ಪರಿಚಯಾತ್ಮಕ ಚಟುವಟಿಕೆ ಪ್ರಾಸ್ತಾವಿಕ ನುಡಿಗಳು ಹಾಗೂ ತರಬೇತಿಗೆ ಚಾಲನೆ ಅನುಭವ ಹಂಚಿಕೆ ಮತ್ತು ವಿಡಿಯೋ ಪ್ರಸರಣ ಸಂವಾದ ಚರ್ಚೆ, ಮತ್ತು ವಿಷಯ ಮಂಡನೆ, ಆಟದ ಮೂಲಕ ಗುಂಪು ಚಟುವಟಿಕೆ ಮೂಲಕ ಪ್ರಕರಣ ಅಧ್ಯಯನ, ಶಿವರಾತಿಗಳ ಸಕ್ರಿಯ ಭಾಗವಹಿಸುವಿಕೆಯ ಕುರಿತು ಮಾಹಿತಿ ನೀಡುವುದು.  

ಟಿ ಅನಿಲ್ ಕುಮಾರ್ ಅವರು ಕಾರ್ಯಕ್ರಮದ ವಿವರಣೆಯ ಕುರಿತು ಮಾತನಾಡುತ್ತಾ  ಎರಡನೆಯ ದಿನದಂದು ಮಾದರಿ ಗ್ರಾಮ ಸಭೆ ಮೊದಲನೇ ದಿನದ ಅಧಿವೇಶನಗಳನ್ನು ಮೆಲುಕು ಹಾಕಿ  ಗ್ರಾಮ ಪಂಚಾಯತಿಯ ಆಡಳಿತ ಮೇಲ್ಚಾವಣಿ ಕಚೇರಿ ಕಾರ್ಯ ಮತ್ತು ಆಡಳಿತ ಕಡತ ನಿರ್ವಹಣೆ ಕುಂದು ಕೊರತೆಗಳ ನಿರ್ವಹಣೆ,ಗ್ರಾಮ ಪಂಚಾಯತಿಯ ಇತರ ದೈನಂದಿನ ಕೆಲಸಗಳು ಕಾಮಗಾರಿಗಳ ಸರ್ವೇಕ್ಷಣ  ಉಪಾಧ್ಯಕ್ಷರ ಹೊಣೆ ಮತ್ತು ಅವರ ಪಾತ್ರ ಬಗ್ಗೆ ಮಾಹಿತಿ ಒದಗಿಸುವುದು. ಹಾಗೂ ವಿಡಿಯೋ ಪ್ರಸರಣ ಮತ್ತು ಮಂಡನೆ,ಮಹಿಳಾ ಅವ್ಯಯಗಳು  ಮಕ್ಕಳ ಅವ್ಯಯಗಳು   ಕುರಿತು ಚರ್ಚೆ ಮಾಡುವುದು. 

ಗ್ರಾಮ ಪಂಚಾಯತಿ ಖಾತೆಗಳು ಸಿಬ್ಬಂದಿ ವೇತನ ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ಮೀಸಲಾದ ಖಾತೆಗಳು ಗ್ರಂಥಾಲಯ ಖಾತೆ ಇನ್ನು ಮುಂತಾದವುಗಳು ಒಳಗೊಂಡಿರುತ್ತವೆ.  

ಗ್ರಾಮ ಪಂಚಾಯಿತಿ ಪರಿಣಾಮಕಾರಿ ಆಡಳಿತದಲ್ಲಿ ಪೂರಕ ತಂತ್ರಾಂಶಗಳು ಮತ್ತು ವಿವಿಧ ತಂತ್ರಾಂಶಗಳ ಬಳಕೆಯಲ್ಲಿ ಅಧ್ಯಕ್ಷರುಗಳ ಪಾತ್ರ,ಡಂಗಲ್ ನೋಂದಣಿ ಉಪಯೋಗ ಮತ್ತು ಸಮರ್ಪಕ ಬಳಕೆ, ಬಯೋಮೆಟ್ರಿಕ್ ಬಳಕೆ,ಪಂಚತಂತ್ರ, ಇ್ಷಸುತ್ತು ಮಾಹಿತಿ ಹಾಗೂ ಬಾಪೂಜಿ ಸೇವಾ ಕೇಂದ್ರ, ಮಾಹಿತಿ ನೀಡಲಾಗುವುದು. 

ಮೂರನೇ ದಿನದಂದು  ಈ ಎರಡು ದಿನಗಳ ತರಬೇತಿಯಲ್ಲಿ ಸಂದೇಹಗಳಿಗೆ ತಜ್ಞರಿಂದ ಉತ್ತರ ಪಡೆಯುವುದು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಮಡಗಿನ ಬಸಪ್ಪ ರವರು ತರಬೇತಿಯ ಮುಖ್ಯ ಉದ್ದೇಶ ಸಭೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆ ,ಹಾಗೂ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗಿಯಾಗುವುದು, ನಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಮೀಸಲಾದ ಕಾರ್ಯಕ್ರಮವನ್ನು ಅನುದಾನ ಅನುಷ್ಠಾನ ಮೇಲ್ಚಾವಣಿ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವುದು ,ಹಾಗೂ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದು. ಆಡಳಿತದ ಪ್ರಕ್ರಿಯೆಯಲ್ಲಿ ಅವರ ಭಾಗವಹಿಸುವಿಕೆ ಹೆಚ್ಚಿಸುವುದು. ಯಾವುದೇ ಕಾರ್ಯಕ್ರಮದ ಅನುಷ್ಠಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರಪಿಸುವುದು ಪ್ರಮುಖವಾಗಿವೆ. 

ಹಿನ್ನೆಲೆಯಲ್ಲಿ ಉದ್ದೇಶಿಸಿತ ತರಬೇತಿಯು ಪರಿಶಿಷ್ಟ ಪಂಗಡ ಮತ್ತು ಪ್ರಸಿದ್ಧ ಜಾತಿ ಸಮುದಾಯದ ಗ್ರಾಮ ಪಂಚಾಯತ್ ಸದಸ್ಯರ ಪಾತ್ರ ಮತ್ತು ಜವಾಬ್ದಾರಿ ಹೆಚ್ಚಾಗಿರುವುದರಿಂದ ಅವರ ಸಾಮರ್ಥ್ಯವನ್ನು ಈ ತರಬೇತಿಯ ಮೂಲಕ ವೃದ್ಧಿಸಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುಲು ಅನುವು ಮಾಡಿಕೊಡುತ್ತದೆ.  

ಈ ಎಲ್ಲಾ ಆಯಾಮಗಳನ್ನು ಮನದಲ್ಲಿ ಇಟ್ಟು ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮವನ್ನು ಸಿದ್ಧಪಡಿಸಲಾಗಿದೆ ಎಂದು ಮಾತನಾಡಿದರು.ಈ ಸಂದರ್ಭದಲ್ಲಿ ಡಿ ಎಸ್ ದುರ್ಗಾಶಂಕರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಿಗಿನಬಸಪ್ಪ, ಪ್ರಾಜೆಕ್ಟ್‌ ಡೈರೆಕ್ಟರ್ ಪ್ರಮೋದ್ ಬಸವರಾಜ್ ಹಿರೇಮಠ, ಟಿ ಅನಿಲ್ ಕುಮಾರ್ ತಾಲೂಕ್ ಪಂಚಾಯತಿ ಎ ಡಿ ಮಹಮ್ಮದ್ ಗೌಸ್, ಶಂಷದ್ದು ಜಿಲ್ಲಾ ತರಬೇತಿ ಕೇಂದ್ರ, ಸಿಬ್ಬಂದಿಗಳು ಹಾಗೂ  ಶಿಬಿರಾರ್ಥಿಗಳು ಇತರರು ಭಾಗವಹಿಸಿದ್ದರು. 


ಸುದ್ದಿ ಓದಿ