ರಾಣೆಬೆನ್ನೂರ

ಗ್ರಾಮೀಣ ಸಂಸ್ಕೃತಿಯ ಅರಿವಿಗೆ ಶಿಬಿರಗಳು ಸಹಕಾರಿ: ಎಂ.ಎಚ್‌. ಪಾಟೀಲ್

ಗ್ರಾಮೀಣ ಸಂಸ್ಕೃತಿಯ ಅರಿವಿಗೆ ಶಿಬಿರಗಳು ಸಹಕಾರಿ: ಎಂ.ಎಚ್‌. ಪಾಟೀಲ್

ರಾಣೇಬೆನ್ನೂರು 26:  ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಅತ್ಯಂತ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್‌. ಪಾಟೀಲ ಹೇಳಿದರು.  

ತಾಲೂಕಿನ ಗಂಗಾಜಲ ತಾಂಡೆ  ಗೋವಿಂದ ಬಡಾವಣೆ ದತ್ತು ಗ್ರಾಮ 2024ನೇ ಸಾಲಿನ, ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪ್ರಾಥಮಿಕ ಶಿಕ್ಷಣದಲ್ಲಿ ಆಟ, ಪಾಠ,ನೋಟ ಇದರ ಜೊತೆಗೆ  ಪಠ್ಯತರ  ಚಟುವಟಿಕೆಯಾಗಿ, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು ಆದರೆ ಇಂದು ಬದಲಾದ ವಾತಾವರಣದಲ್ಲಿ ಅವೆಲ್ಲವೂ  ಸಂಸ್ಕೃತಿ, ಆಚಾರ, ವಿಚಾರ, ಮತ್ತು ಸಂಸ್ಕಾರವಿದೆ. ಗ್ರಾಮೀಣ ಬದುಕು, ಅರಿತುಕೊಳ್ಳಲು, ಭಾವೈಕ್ಯತೆ ಬೆಸೆಯಲು, ಮಾನಸಿಕ, ದೈಹಿಕ, ಬೌದ್ಧಿಕ ಬೆಳವಣಿಗೆಗೆ ಶಿಬಿರ ಮಾರ್ಗದರ್ಶನವಾಗಲಿದೆ ಎಂದರು.  

ಎನ್‌ಎಸ್‌ಎಸ್, ಜಿಲ್ಲಾ ಕೋಶ ಸಂಯೋಜನಾಧಿಕಾರಿ ಡಾ:ಸಿ.ಎಸ್ ಕುಮ್ಮೂರ ಅವರು, ಅತಿಥಿಗಳಾಗಿ ಪಾಲ್ಗೊಂಡು ಗ್ರಾಮ ಸಂಸ್ಕೃತಿಯನ್ನು, ತಿಳಿಯಲು, ಅವೈಕ್ಯತೆ ಬದುಕು ಸಾಗಿಸಲು, ವಿದ್ಯಾರ್ಥಿಗಳಿಗೆ ವ್ಯಕ್ತಿತ್ವವನ್ನು ನಿರೂಪಿಸಿಕೊಳ್ಳಲು ಶಿಭಿರಗಳು ತುಂಬಾ ಸಹಕಾರಿಯಾಗಲಿದೆ ಎಂದರು. ಕಾಲೇಜು ಪ್ರಾಚಾರ್ಯ, ಕೊಟ್ರೇಶ್ ಬಸಾಪುರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  

ರಾ.ತಾ.ಶಿ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ,, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಹಾವೇರಿ ವಿಶ್ವವಿದ್ಯಾಲಯ  ಓಖಖ ಕೋಶ, ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ, ರಾಹುತನ ಕಟ್ಟಿ ಗ್ರಾಮ ಪಂಚಾಯತ  ಸಂಯುಕ್ತವಾಗಿ ಶಿಬಿರವನ್ನು ಸಂಘಟಿಸಿತ್ತು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಸ ಸಾಹುಕಾರ್, ಅವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.  

ವೇದಿಕೆಯಲ್ಲಿ ಕಾರ್ಯಕ್ರಮಾಧಿಕಾರಿ ಅರುಣಕುಮಾರ್ ಕಲ್ಮಠ, ಸಹ ಶಿಬಿರಾಧಿಕಾರಿಗಳಾದ ಸುಧಾ ನ್ಯಾಮತಿ, ದೀಪಾ ಕೆ.ವಿ., ರಾಘವೇಂದ್ರ ಕಡ್ಲಿಮಠ, ಗಾಯಿತ್ರಿ ಕೆ.ಬಿ., ಸೇರಿದಂತೆ ಕಾಲೇಜಿನ ಇತರ ಉಪನ್ಯಾಸಕರು, ಎನ್‌ಎಸ್‌ಎಸ್ ಘಟಕದ, ಯೂಜನಾಧಿಕಾರಿಗಳು, ಉಪಸ್ಥಿತರಿದ್ದರು.  

ಶಿಬಿರಾರ್ಥಿ ಕವಿತಾ ಸಂಗಡಿಗರು ಪ್ರಾರ್ಥಿಸಿದರು. ಮಧುಮತಿ ಸಂಶಿ ಸ್ವಾಗತಿಸಿದರು. ಮಮತಾ ಹಲಗೇರಿ ನಿರೂಪಿಸಿ, ಸುಧಾ ಬಳಿಗಾರ ವಂದಿಸಿದರು. ನಂತರ ನಡೆದ ಶಿಬಿರಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋವಿಂದ ಬಡಾವಣೆ ನಾಗರಿಕರ, ಗಮನ ಸೆಳೆದವು. 


ಸುದ್ದಿ ಓದಿ