ನರೇಗಾ ಯೋಜನೆ ಅಡಿಯಲ್ಲಿ ಉದ್ಯೋಗ ಖಾತ್ರಿ ನಡೆಗೆ ಅಭಿಯಾನ
ಇಂಡಿ 22: ಸ್ವಾವಲಂಬಿ ಜೀವನಕ್ಕೆ ನರೇಗಾ ನೆರವಾಗಲಿ.ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ 2025-2026 ನೇ ಸಾಲಿನ ಕಾರ್ಮಿಕ ಕ್ರಿಯಾ ಯೋಜನೆ ತಯಾರಿಸುವ ಪ್ರಯುಕ್ತ ಕಾಮಗಾರಿ ಅರ್ಜಿ ಸಲ್ಲಿಸಲು *ಕ್ಯೂ ಆರ್ ಕೋಡ್* ಅನ್ನು ನರೇಗಾ ಸಿಬ್ಬಂದಿಗಳು ಅವರು ತಾಲೂಕು ಪಂಚಾಯತ ಕಚೇರಿಯಲ್ಲಿ ಪ್ರದರ್ಶಿಸಿದರು.ನರೇಗಾ ಫಲಾನುಭವಿಗಳು ಹಾಗೂ ಸಾರ್ವಜನಿಕರು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅಡಿಯಲ್ಲಿ ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಕೃಷಿ ಹೊಂಡ, ಎರೆ ಹುಳು ಗೊಬ್ಬರ್ ತೊಟ್ಟಿ ನಿರ್ಮಾಣ, ಜಾನುವಾರು ಶೆಡ್ ನಿರ್ಮಾಣ, ತೋಟಗಾರಿಗೆ ಬೆಳೆಗಳ ಕಾಮಗಾರಿ ಬೇಡಿಕೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಇಂಡಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಸಂಜಯ ಕಡಗೇಕರ್ ಹೇಳಿದರು ತಾಲೂಕು ಪಂಚಾಯತಿ ಇಂಡಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತೆ ಸೂಚನಾ ಫಲಕ, ನರೇಗಾ ವಿಭಾಗದಲ್ಲಿ ಕ್ಯೂ ಆರ್ ಕೋಡ್ ಮಾಹಿತಿಯುಳ್ಳ ಬಿತ್ತಿಪತ್ರಗಳನ್ನು ಗೋಡೆಗಳಿಗೆ ಅಂಟಿಸಲಾಗಿದೆ. ಹಾಗೂ ಗ್ರಾಮ ಪಂಚಾಯಿತಿ ಸೂಚನಾ ಫಲಕಗಳಲ್ಲಿ ಅಂಟಿಸಲಾಗಿದೆ.
ಬಳಕೆ ಮಾಡುವುದರ ಬಗ್ಗೆ ಮಾಹಿತಿ ಹೇಳಲಾಗುತ್ತಿದೆ ಎಂದು ಹೇಳಿದರು ತಾಲೂಕ ಪಂಚಾಯತಗೆ ಬರುವ ಸಾರ್ವಜನಿಕರು ಕ್ಯೂ ಆರ್ ಕೊಡ್ ಅನ್ನು ಬಳಸಿಕೊಂಡು ವೈಯಕ್ತಿಕ ಕಾಮಗಾರಿ ಬೇಡಿಕೆಗಳನ್ನು ಸಲ್ಲಿಸುತ್ತಿರುವ ಛಾಯಾ ಚಿತ್ರಗಳು. ತಾಲೂಕ ಪಂಚಾಯತ ಇಂಡಿ ನರೇಗಾ ಸಿಬ್ಬಂದಿಗಳಾದ ತಾಂತ್ರಿಕ ಸಂಯೋಜಕರಾದ ಸಾಹಿಲ್ ದನಶೆಟ್ಟಿ, ಎಮ್ ಐ ಎಸ್ ಸಂಯೋಜಕರಾದ ಹನುಮಂತ ಮೇಟಿ, ಆಡಳಿತ ಸಹಾಯಕರಾದ ಪ್ರದೀಪ ಹಳ್ಳಿ, ಮಾಹಿತಿ, ಶಿಕ್ಷಣ ಹಾಗೂ ಸಂವಹನ ಸಂಯೋಜಕ ರಾಮಗೌಡ ಸರಬಡಗಿ ಮತ್ತು ತಾಲೂಕ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.