ಬಳ್ಳಾರಿ

ರೂಪನಗುಡಿಯಲ್ಲಿ “ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ” ನಿಮಿತ್ತ ಜಾಥಾ

ರೂಪನಗುಡಿಯಲ್ಲಿ “ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ” ನಿಮಿತ್ತ ಜಾಥಾ

ಬಳ್ಳಾರಿ 19: ರಾಜ್ಯಾದಾದ್ಯಂತ ಜು.17 ರಿಂದ ಆ.02 ರವರೆಗೆ ನಡೆಯುವ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಕ್ರಮದಡಿ ರೂಪನಗುಡಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರದಿಂದ ಬುಧವಾರದಂದು ಜಾಥಾ ನಡೆಯಿತು. 

ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ ವರ್ಣೇಕರ್ ಅವರು ಜಾಥಾಗೆ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು ಎರಡು ವಾರಕ್ಕೂ ಹೆಚ್ಚು ದಿನ ಕೆಮ್ಮು ಇರುವವರು ಹಾಗೂ ಕ್ಷಯ ರೋಗದಿದಂದ ಗುಣಮುಖರಾದವರು ಸಹ ಮತ್ತೊಮ್ಮೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕಫ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಆಯುಷ್ ವೈದ್ಯಾಧಿಕಾರಿ ಡಾ.ನಾರಾಯಣಬಾಬು, ವೈದ್ಯಾಧಿಕಾರಿ ಪ್ರಜ್ವಲ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು. 

ಜಾಥಾವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು. 

ಸುದ್ದಿ ಓದಿ