ಏನೇ ಸಮಸ್ಯೆಗಳು ಕಂಡು ಬಂದಲ್ಲಿ 112ಗೆ ಕರೆ ಮಾಡಿ:ಲೋಕೇಶ್ವರ
ಮುಂಡಗೋಡ:ಅಪರಾಧ ತಡೆ ಮಾಸಾಚಾರಣೆ ಅಂಗವಾಗಿ ಇಲ್ಲಿನ ಪೋಲಿಸರು ಶುಕ್ರವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಲೇಜ್ ವಿದ್ಯಾರ್ಥಿಗಳ ಜಾಥಾ ನಡೆಸುವ ಮೂಲಕ ಕಾನೂನು ಅರಿವು ಮೂಡಿಸಿದರು.
ಎಎಸ್ಐ ಲೋಕೇಶ್ವರ ಮೆಸ್ತಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಅಪ್ರಾಪ್ತರು 18 ವರ್ಷ ಪೂರ್ಣಗೊಳ್ಳುವವರೆಗೆ ವಾಹನ ಚಲಾಯಿಸಬಾರದು. ಬೈಕ್ಗಳಲ್ಲಿ ಮೂವರು ಕುಳಿತು ಓಡಾಡಬಾರದು. ಸಾರ್ವಜನಿಕವಾಗಿ ಅಥವಾ ಏನೇ ಸಮಸ್ಯೆಗಳು ಕಂಡು ಬಂದಲ್ಲಿ ತಕ್ಷಣ 112ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ವಿದ್ಯಾರ್ಥಿಗಳು ಮುಂಜಾಗ್ರತೆ ವಹಿಸಬೇಕು ಎಂದು ಮಾಹಿತಿ ನೀಡಿ ರಸ್ತೆ ಸುರಕ್ಷತಾ ನಿಯಮಗಳನ್ನು ತಿಳಿಸಿ ಹೇಳಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಅನ್ವರ್ಖಾನ್, ಅರುಣಕುಮಾರ ಬಾಗೇವಾಡಿ ಹಾಗೂ ಕಾಲೇಜ್ ಉಪನ್ಯಾಸಕರು ಉಪಸ್ಥಿತರಿದ್ದರು.