ಬೈಲಹೊಂಗಲ

ದುರ್ಗಾಪರಮೇಶ್ವರಿ ದೇವಸ್ಥಾನದ ದಿನದರ್ಶಿಕೆ ಬಿಡುಗಡೆ

ದುರ್ಗಾಪರಮೇಶ್ವರಿ ದೇವಸ್ಥಾನದ ದಿನದರ್ಶಿಕೆ ಬಿಡುಗಡೆ

ಬೈಲಹೊಂಗಲ 13: 2021ನೇ ಸಾಲಿನ ಹೊಸ ವರುಷದ ಬದುಕು ಸರ್ವರ ಬಾಳಿನಲ್ಲಿ ಹೊಸತನ ಮೂಡಿಸಿ ಸರ್ವ ಮಂಗಳವನ್ನುಂಟು ಮಾಡಲಿ. ತಾಯಿ ದುರ್ಗಾಪರಮೇಶ್ವರಿ ದೇವಿಯು ನಾಡಿನಾದ್ಯಂತ ಸಮೃದ್ಧಿ, ಸಂತೋಷ , ಆರೋಗ್ಯಭಾಗ್ಯ ಉಂಟು ಮಾಡಲಿ ಎಂದು ಗೌರಿ ಗದ್ದೆ  ಅವದೂತ ಆಶ್ರಮದ ವಿನಯ ಗುರೂಜಿ ಹೇಳಿದರು.

ಪಟ್ಟಣದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ದಿನದರ್ಶಿಕೆ ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡಿ, ಪರಿಸರ ಮೇಲೆ ಮಾನವ ಮಾಡಿದ ಹೇಯ ಕೃತ್ಯದಿಂದ ಕಳೆದ ವರುಷ  ಸಾಕಷ್ಟು  ಸಾವು, ನೋವು, ಆರ್ಥಿಕ ತೊಂದರೆ ಅನುಭವಿಸಬೇಕಾಯಿತು. ಇನ್ನಾದರೂ ಪ್ರತಿಯೊಬ್ಬರ ಸಸಿ ನೆಟ್ಟು ಘೋಷಿಸಬೇಕು. ಸಮೃದ್ಧ ಪರಿಸರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು. ಜಗನ್ಮಾತೆ ಶ್ರೀದುರ್ಗೆಯ ಹೆಸರಿನಲ್ಲಿ ಡಾ.ಮಹಾಂತಯ್ಯಶಾಸ್ತ್ರೀಗಳು ಮುದ್ರಿಸಿರುವ ದಿನದರ್ಶಿಕೆ ಚನ್ನಾಗಿ ಮೂಡಿ ಬಂದಿದ್ದು. ಮುಂದಿನ ದಿನಮಾನಗಳಲ್ಲಿ ಸಾಮಾಜಿಕ, ಧಾರ್ಮಿಕ ಕಾರ್ಯಗಳು ಹೆಚ್ಚೆಚ್ಚು ನಡೆಯಲಿ ಎಂದು ಹಾರೈಸಿದರು.  

ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಧರ್ಮದರ್ಶಿ ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ, ಸಿದ್ಧರಾಮ ಲಿಂಗಶೆಟ್ಟಿ, ಅಡಿವೆಪ್ಪ ಕಾಜಗಾರ, ಬಸವರಾಜ ಕಟ್ಟಿಮನಿ, ಭಕ್ತರು ಇದ್ದರು.

ಸುದ್ದಿ ಓದಿ