ಚಿಕ್ಕೋಡಿ

ಸಿ.ಎಸ್‌.ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳ ಕ್ರೀಡಾ ಕಣಜದಲ್ಲಿ ಚಿನ್ನದ ಚುಕ್ಕಾಣಿ

ಸಿ.ಎಸ್‌.ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳ ಕ್ರೀಡಾ ಕಣಜದಲ್ಲಿ ಚಿನ್ನದ ಚುಕ್ಕಾಣಿ

ಚಿಕ್ಕೋಡಿ, 11 : ಇಲ್ಸಿಲಿನ ಸಿ.ಎಲ್‌.ಇ ಸಂಸ್ಥೆಯ ಸಿ.ಎಸ್‌.ಎಸ್ ಪ್ರೌಢಶಾಲೆ, ಚಿಕ್ಕೋಡಿಯ ವಿದ್ಯಾರ್ಥಿಗಳು ಶಾಲಾ ಮತ್ತು ಶಿಕ್ಷಣ ಇಲಾಖೆ ಆಯೋಜಿಸಿದ್ದ 2025ರ ಜುಡೋ ಹಾಗೂ ಕುಸ್ತಿ ಕ್ರೀಡಾ ಸ್ಪರ್ಧೆಗಳಲ್ಲಿ ಶಾಲೆಯ 10 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಅದರಲ್ಲಿ ಇಬ್ಬರು ರಾಷ್ಟ್ರಮಟ್ಟದ ಸ್ಪರ್ಧೆಗೆ ಅವಕಾಶ ಪಡೆದಿದ್ದಾರೆ. 

ಜುಡೋ ವಿಭಾಗದಲ್ಲಿ: ಕು. ತೃಪ್ತಿ ಭಾ. ಪಾಟೀಲ (-70 ಕೆ.ಜಿ) ಮತ್ತು ಕು. ವಿನೋದ ಬಿ. ಪಾಟೀಲ (-73 ಕೆ.ಜಿ) ಇವರು ಪ್ರಥಮ ಸ್ಥಾನ ಪಡೆದು ಬಂಗಾರದ ಪದಕಗಳೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗಂಗವ್ವಾ ರೇ. ಡಂಗೇರ ಅವರು ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನ ಪಡೆದು, ಪ್ರತೀಕ್ಷಾ ಅ. ನಾಯಿಕ ಅವರು ಕಂಚಿನ ಪದಕದೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಕುಸ್ತಿ ಸ್ಪರ್ಧೆಯಲ್ಲಿ ಕೂಡ ತೃಪ್ತಿ ಭಾ. ಪಾಟೀಲ ಅವರು ಕಂಚಿನ ಪದಕದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.  

ಈ ಅತ್ಯುನ್ನತ ಸಾಧನೆಯ ಹಿನ್ನೆಲೆಯಲ್ಲಿ ಸಿ.ಎಲ್‌.ಇ ಸಂಸ್ಥೆಯ ಕಾರ್ಯದರ್ಶಿ ಜಗದೀಶ ಕವಟಗಿಮಠ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಎಸ್‌.ಆಯ್‌. ಬಿಸ್ಕೋಪ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಎಂ.ಐ. ಪೂಜಾರಿ ತರಬೇತಿ ನೀಡಿದ್ದಾರೆ ಎಂದು ಶಾಲೆಯ ಮುಖ್ಯಾಧ್ಯಾಪಕ ಎಸ್‌.ಕೆ. ಕೋಟ್ರೆ ತಿಳಿಸಿದ್ದಾರೆ. 


ಸುದ್ದಿ ಓದಿ