ರಾಷ್ಟ್ರೀಯ

ಮಹಾರಾಷ್ಟ್ರ: ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೆ ಕೊರೋನಾ ಸೋಂಕು

ಮಹಾರಾಷ್ಟ್ರ: ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೆ ಕೊರೋನಾ ಸೋಂಕು

 ನಾಗಪುರ, ಅ 24 : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಕೋವಿಡ್ -19 ಪರೀಕ್ಷೆಯ ಫಲಿತಾಂಶ ಧನಾತ್ಮಕವಾಗಿದ್ದು, ಪ್ರತ್ಯೇಕವಾಗಿರುವುದಾಗಿ ದೇವೇಂದ್ರ ಫಡ್ನವೀಸ್ ಶನಿವಾರ ಹೇಳಿದ್ದಾರೆ.ವೈದ್ಯರ ಸಲಹೆಯಂತೆ ಔಷಧಿ ಸೇವಿಸುತ್ತಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.ಫಡ್ನವೀಸ್ ಅವರು ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಮತದಾನ ಅಭಿಯಾನದ ಉಸ್ತುವಾರಿ ವಹಿಸಿಕೊಂಡಿದ್ದಾರೆ. "ನಾನು ಸ್ವಲ್ಪ ಸಮಯದವರೆಗೆ ಈ ಕೆಲಸ ನಿಲ್ಲಿಸಿ ವಿರಾಮ ತೆಗೆದುಕೊಳ್ಳಬೇಕೆಂದು ದೇವರು ಬಯಸಿದ್ದಾನೆ”  ಎಂದು ಹೇಳಿದ್ದಾರೆ.

"ಲಾಕ್ ಡೌನ್ ನಂತರ ನಾನು ಪ್ರತಿದಿನವೂ ಕೆಲಸ ಮಾಡುತ್ತಿದ್ದೇನೆ ಆದರೆ ಈಗ ನಾನು ಸ್ವಲ್ಪ ಸಮಯದವರೆಗೆ ನಿಲ್ಲಿಸಿ ವಿರಾಮ ತೆಗೆದುಕೊಳ್ಳಬೇಕೆಂದು ದೇವರು ಬಯಸುತ್ತಾನೆ ಎಂದು ತೋರುತ್ತದೆ. ಕೋವಿಡ್ -19 ಸೋಂಕು ಪರೀಕ್ಷಾ ಫಲಿತಾಂಶ ಧನಾತ್ಮಕವಾಗಿದ್ದು ಕ್ವಾರಂಟೈನ್ ನಲ್ಲಿದ್ದೇನೆ. ವೈದ್ಯರ ಸಲಹೆಯಂತೆ ಎಲ್ಲಾ ಔಷಧಿ ಮತ್ತು ಚಿಕಿತ್ಸೆಯನ್ನು ತೆಗೆದುಕೊಳ್ಳಲಾಗುವುದು ”ಎಂದು ಅವರು ಬರೆದಿದ್ದಾರೆ.ಅಲ್ಲದೆ, ಇತ್ತೀಚೆಗೆ ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರು ಕೊರೋನಾ ಸೋಂಕು ಪರೀಕ್ಷೆಗೆ ಒಳಗಾಗುವಂತೆ ದೇವೇಂದ್ರ ಫಡ್ನವೀಸ್ ವಿನಂತಿಸಿಕೊಂಡಿದ್ದಾರೆ. 

  

ಸುದ್ದಿ ಓದಿ