ಎಲ್ಲರಿಗೂ ಉಚಿತ ಕೊರೋನ ಲಸಿಕೆ - ಸಚಿವ ಡಾ ಹರ್ಷ ವರ್ಧನ್
ನವದೆಹಲಿ, ಜ 2 :ಕೇವಲ ದೆಹಲಿ ಮಾತ್ರವಲ್ಲದೇ ದೇಶದ ಎಲ್ಲ ಜನತೆಗೆ ಕೊರೋನ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷ ವರ್ಧನ್ ತಿಳಿಸಿದ್ದಾರೆ. ಕೊರೋನಾ ಲಸಿಕೆ ಕುರಿತು ಪರಿಶೀಲಿಸಲು ಸರ್ಕಾರ ಶನಿವಾರ ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಡ್ರೈ ರನ್ ನ್ನು ಆರಂಭಿಸಿದ್ದು, ಇಂದು ಸಚಿವರು ದೆಹಲಿಯ ಜಿಟಿಬಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಸುದ್ದಿಗಾರರು ಲಸಿಕೆಯನ್ನು ಉಚಿತವಾಗಿ ನೀಡುವ ಬಗ್ಗೆ ಪಶ್ನಿಸಿದಾಗ, ಸಚಿವರು ಕೇವಲ ದೆಹಲಿಯಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಲಸಿಕೆಯನ್ನು ಜನತೆಗೆ ಉಚಿತವಾಗಿ ನೀಡಲಾಗುವುದು ಎಂದೂ ಕೇಂದ್ರ ಸಚಿವರು ಸ್ಪಷ್ಟ ಭರವಸೆ ನೀಡಿದ್ದಾರೆ.