ರಾಷ್ಟ್ರೀಯ

ಮಹಾನಗರಗಳಲ್ಲಿ ವಾಣಿಜ್ಯ ಬಳಕೆ ಎಲ್ ಪಿಜಿ ಸಿಲಿಂಡರ್ ದರ ಏರಿಕೆ

ಮಹಾನಗರಗಳಲ್ಲಿ ವಾಣಿಜ್ಯ  ಬಳಕೆ ಎಲ್ ಪಿಜಿ ಸಿಲಿಂಡರ್ ದರ ಏರಿಕೆ

ನವದೆಹಲಿ, ಜ 1:  ದೇಶದ ಮಹಾನಗರಗಳಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಗಳ ದರಗಳು 16.50 ರೂ ನಿಂದ 22.50 ರೂವರೆಗೆ ಏರಿಕೆಯಾಗುವುದರೊಂದಿಗೆ ಹೊಸ ವರ್ಷದ ಮೊದಲ ದಿನವೇ ಗ್ರಾಹಕರ ಮೇಲೆ ಬರೆ ಬಿದ್ದಿದೆ.  ಆದರೆ, ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ದರಗಳಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಪ್ರಮುಖ ತೈಲ ಮಾರುಕಟ್ಟೆ ಕಂಪನಿಯಾದ ಭಾರತೀಯ ತೈಲ ನಿಗಮದ ಪ್ರಕಟಣೆಯಂತೆ  ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ದರ 17 ರೂ.ಹೆಚ್ಚಳವಾಗಿ 1,349 ರೂ.  ಕೋಲ್ಕತ್ತಾದಲ್ಲಿ ಸಿಲಿಂಡರ್ ದರ 22.50 ರೂ.ಹೆಚ್ಚಳವಾಗಿ 1,487 ರೂ ನಷ್ಟಿದೆ.ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ ದರ 17 ರೂ. ಹೆಚ್ಚಳವಾಗಿ 1,297.50 ರೂ., ಚೆನ್ನೈನಲ್ಲಿ ಸಿಲಿಂಡರ್ ದರ 16.50 ರೂ.ಹೆಚ್ಚಳವಾಗಿ 1,463.50 ರೂ.ಗೆ ಏರಿಕೆಯಾಗಿದೆ. ಒಂದು ವರ್ಷದಲ್ಲಿ ಗೃಹಬಳಕೆಯ 14.2 ಕೆಜಿಯ 12 ಸಿಲಿಂಡರ್‌ಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. 12 ಸಿಲಿಂಡರ್ ಗೂ ಮೀರಿದರೆ  ಗ್ರಾಹಕರು ಮಾರುಕಟ್ಟೆ ದರ  ಪಾವತಿಸಬೇಕಾಗುತ್ತದೆ. 


ಸುದ್ದಿ ಓದಿ