ಕ್ಲೀಷ್ಟ ಪರಿಸ್ಥಿತಿಯಲ್ಲಿ 20ಕೆರೆಗೆ 206ಕೋ ರೂ. ನೀಡಿದ ಮುಖ್ಯಮಂತ್ರಿ
ರಾಣಿಬೆನ್ನೂರ 19: ತಾ:ನ 20 ಕೆರೆಗಳ ಅಭಿವೃದ್ಧಿಗೆ ಅಂದಾ ಜು 206 ಕೋಟಿ ರೂ.ಮೊತ್ತದ ಯೋಜನೆಗೆ ರಾಜ್ಯ ಸರ್ಕಾರದ ಸಚಿವ ಸಂಪುಟವು ಆಡಳಿತಾ ತ್ಮಕ ಅನುಮೋದನೆ ನೀಡಿದೆ. ಇದರಿಂ ದಾಗಿ 2 ದಶಕಗಳ ಕಾಲದ ಕೆರೆಗಳ ಅಭಿವೃದ್ಧಿಯ ಕನಸು ನನಸಾಗಿದೆ ಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಶುಕ್ರವಾರ ಇಲ್ಲಿನ ಶಾಸಕರ ಜನಸಂಪರ್ಕ ಕಚೇರಿ ಯ ಸಭಾಂಗಣದಲ್ಲಿ ಏರಿ್ಡ ಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಅನೇಕ ವರ್ಷಗಳಿಂದ ನೀರಿನ ಭವಣೆ ಎದುರುಸುತ್ತಿದ್ದ ಕೆರೆಗಳ ಅಕ್ಕಪಕ್ಕದ ಗ್ರಾಮಗಳಿಗೆ ಇದರಿಂದ ಅಂತರ ಜಲ ಮಟ್ಟ ಹೆಚ್ಚಾಗುತ್ತಿದೆ ಎಂಬು ದನ್ನು ಮನಗಂಡು 2 ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದರು.
ಅನುಮೋದನೆಗೆ ಒಳ ಗಾದ ಕೆರೆಗಳ ಪೈಕಿ ಲಿಂಗದಹಳ್ಳಿ, ಮಾಳನಾಯಕನಹಳ್ಳಿ, ತೆರೆದಹಳ್ಳಿ, ದೇವಗೊಂಡ ನಕಟ್ಟಿ, ಇಟಗಿ, ಮಾಗೋಡ,ಅಂತರವಳ್ಳಿ, ಹಲ ಗೇರಿ,ಆಲದಕಟ್ಟಿ, ಕುಸಗೂರು, ಬಿಲ್ಲಳ್ಳಿ, ನಿಟ್ಟೂರು, ಕೋಣನತಲೆ, ಹಾರೋಗೊಪ್ಪ, ದಂಡಗಿಹಳ್ಳಿ, ಮೇಡ್ಲೇರಿ, ರಾಹುತನಕಟ್ಟಿ ಕೆರೆಗಳ ಅಭಿವೃದ್ಧಿಗೆ ಸಚಿವ ಸಂಪುಟುವು ಒಪ್ಪಿಗೆ ನೀಡಿದ್ದು, ತುಂಗಭದ್ರಾ ನದಿಯಿಂದ ನೀರು ತುಂಬಿಸಲಾ ಗುವುದು ಎಂದರು.
ಮುಖ್ಯಮಂತ್ರಿ ಯಡಿಯೂರ್ಪ ಜಿಲ್ಲಾ ಉಸ್ತುವಾರಿಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಈ ಯೋಜನೆಯ ಮಂಜೂರಾತಿಗಾಗಿ ಶ್ರಮಿಸಿದ್ದು, ಅವರುಗಳೆಲ್ಲರಿಗೂ ಕ್ಷೇತ್ರದ ಮತದಾರರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಶಾಸಕರು ಹೇಳಿದರು.
206 ಕೋಟಿ ರೂ ಮೊತ್ತದ ಮಂಜೂರಾತಿ ಸೇರಿ ದಂತೆ ಮೂಲಭೂತ ಸೌಲಭ್ಯ ಗಳಿಗೆ 32 ಕೋಟಿ, ಹನಿ ನೀರಾ ವರಿಗೆ 17 ಕೋಟಿ, ಜಲಸಂಪ ನ್ಮೂಲ ಇಲಾಖೆಯಿಂದ 25 ಕೋಟಿ, ಸಮಾಜ ಕಲ್ಯಾಣ ಇಲಾಖೆಯಿಂದ 10 ಕೋಟಿ, ಲೋಕೋಪಯೋಗಿ ಇಲಾಖೆ ಯಿಂದ 25 ಕೋಟಿ ರೂ. ಒಳಗೊಂಡಂತೆ ಅಂದಾಜು 300 ಕೋಟಿ ರೂ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರವು ಮಂಜೂರಾತಿ ನೀಡಿದೆ. ಶೀಘ್ರವೇ ಟೆಂಡರ್ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಈ ಕಾಮಗಾರಿಗಳು ಸೇರಿದಂತೆ ವಿವಿಧ ಯೋಜನೆಗಳ ಶಂಕು ಸ್ಥಾಪನೆಗೆ ಮುಖ್ಯಂತ್ರಿ ಬಿ.ಎಸ್. ಯಡಿಯೂರ್ಪನವರು ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಯೋಜನ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭಾ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಸದಸ್ಯಾರದ ಗಂಗಮ್ಮ ಹಾವನೂರ, ಹನುಮಂತಪ್ಪ ಹೆದ್ದೇರಿ,ಮಂಜುಳಾ ಹತ್ತಿ, ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಪೂಜಾರ, ಮುಖಂಡರಾದ ಎಸ್.ಎಸ್.ರಾಮಲಿಂಗಣ್ಣನವರ, ಮಂಜುನಾಥ ಓಲೇಕಾರ, ಬಸವ ರಾಜ ಹುಲ್ಲತ್ತಿ, ಶಿವಕುಮಾರ ಮುದ್ದ ಪ್ಪಳವರ, ಪವನಕುಮಾರ ಮಲ್ಲಾಡದ, ಅನೀಲ ಸಿದ್ದಾಳಿ, ಸಂತೋಷಕುಮಾರ ಪಾಟೀಲ ಇದ್ದರು.