ರಾಣೆಬೆನ್ನೂರ

28ರಂದು ರಾಣಿಬೆನ್ನೂರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

28ರಂದು ರಾಣಿಬೆನ್ನೂರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ರಾಣೇಬೆನ್ನೂರ 23: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇದೇ ದಿ.28ರಂದು ಶನಿವಾರ ನಗರಕ್ಕೆ ಆಗಮಿಸಲಿದ್ದಾರೆ.  

ಅಂದು 7ಕೋಟಿರೂ. ವೆಚ್ಚದಲ್ಲಿ ನಿರ್ಮಿಸಿರುವ ರೈತ ಭವನದ ಉದ್ಘಾಟನೆ ಹಾಗೂ 120ಕೋಟಿರೂ, ವೆಚ್ಚದ24ುಥ 7 ಕುಡಿಯುವ ನೀರು ಸರಬರಾಜು ಯೋಜನೆಯ ಉದ್ಘಾಟನೆ 50ಲಕ್ಷ ರೂ. ವೆಚ್ಚದಲ್ಲಿ ನಗರಸಭೆಯಲ್ಲಿ ನಿರ್ಮಿಸಿರುವ ವಿಶ್ವೇಶ್ವರಯ್ಯ ಸಭಾ ಭವನದ ಉದ್ಘಾಟನೆ, ತಾಲೂಕಿನಲ್ಲಿರುವ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದ್ದಾರೆ. 

ಅವರು ಇಂದು ಸಂಜೆ ಎಪಿಎಂಸಿಯ ಸಭಾ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿ ರೈತಭವನದಲ್ಲಿ ಎಲ್ಲಾ ಯೋಜನೆಗಳ ಉದ್ಘಾಟನೆ ನೆರವೇರಿಸಿ ನಂತರ ಟಿಎಪಿಸಿಎಂಎಸ್ ಎದುರಿಗೆ ಇರುವ ಎಪಿಎಂಸಿ ಪ್ರಾಂಗಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವರೆಂದು ಹೇಳಿ ಈ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ, ಜಿಪಂ ಇಓ ರವರಿಗೆ  ಎಸ್‌ಪಿ, ಡಿವೈಎಸ್‌ಪಿಯವರಿಗೆ ಸೂಚಿಸಿದರು. 

ಈ ಸಂದರ್ಭದಲ್ಲಿ ತಾಲೂಕಿನ ಶಾಸಕ ಅರುಣಕುಮಾರ ಪೂಜಾರ, ಮಾಜಿ ಶಾಸಕ ಉಜನೇಶ ಬಣಕಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ, ಚೋಳಪ್ಪ ಕಸವಾಳ, ಎಪಿಎಂಸಿ ಅದ್ಯಕ್ಷ ಬಸವರಾಜ ಸವಣೂರ,  ಮಾಜಿ ಅದ್ಯಕ್ಷ ಮಂಜನಗೌಡ ಪಾಟೀಲ, ಸದಸ್ಯರಾದ ಪರಮೇಶಪ್ಪ ಗೂಳಣ್ಣವರ, ರಾಜೇಂದ್ರ ಬಸೇನಾಯ್ಕರ್, ರಮೇಶನಾಯ್ಕ, ಶಂಕ್ರ​‍್ಪ  ಮಾರೇರ, ಜಿ.ಜಿ.ಹೊಟ್ಟಿಗೌಡ್ರ, ನಗರಸಭಾ ಸದಸ್ಯರಾದ ನಾಗರಾಜ ಪವಾರ, ಪ್ರಕಾಶ ಪೂಜಾರ, ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಜೈನ್ ಹಾಗೂ ಗಣ್ಯ ವರ್ತಕರು ,ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ