ಇದೇ 5 ರಿಂದ ತೆರೆದುಕೊಳ್ಳಲಿರುವ ಸಿನಿಮಾಮಂದಿರಗಳು....
ತಿರುವನಂತಪುರಂ, ಜ 2 : ಕೇರಳದಲ್ಲಿ ಇದೇ 5 ರಿಂದ ಎಲ್ಲಾ ಸಿನಿಮಾ ಮಂದಿರಾಗಳು ಮತ್ತೆ ಚಾಲನೆಗೊಳ್ಳಲಿವೆ ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಹೇಳಿದ್ದಾರೆ.ಕೇರಳದಲ್ಲಿ ಕೊರೊನಾ ನಿಯಮ ಸಡಿಲಿಕೆ ಮಾಡಲಾಗಿದ್ದು, ಸಿನಿಮಾ ಥಿಯೇಟರ್ಗಳಲ್ಲಿ ಶೇ.50 ರಷ್ಟು ಜನರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೇ ಬರೋಬ್ಬರಿ 5 ತಿಂಗಳ ಬಳಿಕ ಕೇರಳದಲ್ಲಿ ಶಾಲಾ-ಕಾಲೇಜುಗಳು ಸಹ ಆರಂಭವಾಗಿದೆ.ಸಭೆ, ಸಮಾರಂಭ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ನಿಗದಿ ಪ್ರಮಾಣದ ಜನರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದೂ ಪಿಣರಾಯ್ ವಿಜಯನ್ ಹೇಳಿದ್ದಾರೆ.