ಸಿಡಿಎಸ್ ಬಪಿನ್ ರಾವತ್ ಅಕಾಲಿಕ ವೀರ ಮರಣ: ಶ್ರದ್ಧಾಂಜಲಿ
ರಾಣೇಬೆನ್ನೂರು 10: ಭಾರತದ ಅಪ್ರತಿಮ ಸೇನಾ ದಂಡನಾಯಕ, ವೈರಿಗಳಿಗೆ ರಾಜಾಹುಲಿ, ದೇಶದ ತ್ರಿವಳಿ ಭದ್ರತಾ ಪಡೆಯ ಮುಖ್ಯಸ್ಥರಾಗಿದ್ದ ಸಿಡಿಎಸ್ ಬಿಪಿನ್ ರಾವತ್, ನಿಜಕ್ಕೂ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ಸಿಂಹ ಸ್ವಪ್ನವಾಗಿದ್ದರು. ಕೇವಲ ಬಾಯಿ ಮಾತಿನಿಂದಲೇ ಚೀನಾ ದೇಶಕ್ಕೆ ನಡುಕ ಹುಟ್ಟಿಸಿ ತಮ್ಮ ಝಂಗಾಬಲ ಪ್ರದರ್ಶಿಸಿದ ದಿಟ್ಟ ವ್ಯಕ್ತಿ ರಾವತ್ ಅವರ ಅಕಾಲಿಕ ಮರಣದಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ ಎಂದು ಭಾರತ ಮಾತಾ ಉತ್ಸವ ಸಮಿತಿಯ ಅಧ್ಯಕ್ಷ ಎಸ್.ಜಿ.ಮಹಾನುಭಾವಿಮಠ ವಿಷಾದ ವ್ಯಕ್ತಪಡಿಸಿದರು.
ಭಾರತದ ತ್ರಿವಳಿ ಭದ್ರತಾ ಪಡೆಗಳ ಮುಖ್ಯಸ್ಥ ಸಿಡಿಎಸ್ ಬಿಪಿನ್ ರಾವತ್ ಅವರು ಬುಧವಾರ ಹೆಲಿಕಾಪ್ಟರ್ ದುರಂತದಲ್ಲಿ ದಾರುಣ ಸಾವು ಕಂಡಿದ್ದರ ನಿಮಿತ್ತ ಇಲ್ಲಿನ ಪೋಸ್ಟ್ ವೃತ್ತದಲ್ಲಿ ಗುರುವಾರ ಭಾರತ ಮಾತಾ ಉತ್ಸವ ಸಮಿತಿ, ಶಿಡ್ಲು-ಕೌರವ ಪತ್ರಿಕಾ ಬಳಗ, ಬಾಪೂಜಿ ಯುವಕ ಸಂಘ, ಸ್ವಾಭಿಮಾನಿ ಕರವೇ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಪಿನ್ ರಾವತ್ ಅವರು ಅಪ್ರತಿಮ ದೇಶಪ್ರೇಮಿಯಾಗಿದ್ದರು. 2019 ಡಿ.31ರಂದು ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಹಗಲಿರುಳು ಸೇನೆಗೋಸ್ಕರ ಶ್ರಮಿಸಿ ವಾಯುಪಡೆಯನ್ನು ಆದುನೀಕರಣಗೊಳಿಸಿದ ಕೀರ್ತಿ ಅವರಿಗೆ ಸಲ್ಲಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಮಾತನಾಡಿ, ಈ ಹಿಂದೆ ಭಾರತೀಯ ಸೇನಾ ಮುಖ್ಯಸ್ಥರಾಗಿ ಹೋದವರಿಗಿಂತ ಬಿಪಿನ್ ರಾವತ್ರವರು ಭಿನ್ನವಾಗಿ ಕಾಣುತ್ತಾರೆ. ಅವರಿಗೆ ವಯಸ್ಸಾಗಿದೆ ಎನ್ನುವುದು ಕೇವಲ ಲೆಕ್ಕಕ್ಕೆ ಮಾತ್ರ. ಅವರ ಜಾಣತನ, ಚುರುಕುತನ, ಕೆಲಸದಲ್ಲಿದ್ದ ಅವರ ನಿಷ್ಠೆ ಯುವಕರನ್ನೂ ಸಹ ನಾಚಿಸುತ್ತಿತ್ತು. ಅಂತಹ ಮಹಾನ್ ವ್ಯಕ್ತಿಯ ದಾರುಣ ಸಾವು ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ರೈತ ಮುಖಂಡ ಕೃಷ್ಣಮೂರ್ತಿ ಲಮಾಣಿ, ನೀಲಕಂಠಸಾ ಭೂತೆ, ಗೀರೀಶ್ ಅಮ್ಮನವರ, ಕೆ.ಎಸ್.ನಾಗರಾಜ್, ಶಿವಕುಮಾರ ಜಾದವ್, ಮಲ್ಲಿಕಾರ್ಜುನ ಕೆಂಚರಡ್ಡಿ, ಪ್ರಭಾಕರ ಗೋಂದಕರ, ಪರಮೇಶ್ವರ ಯಡಿಯಾಪೂರ, ಶಂಭುಲಿಂಗಪ್ಪ ಹಡಪದ, ಖಾಜಿ ಚನ್ನಬಸಪ್ಪ ನಾಡರ, ಕೊಟ್ರೇಶ್ ಕುಂದಾಪುರ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೂಂಡಿದ್ದರು.
ಫೋಟೊ: ಹೆಚ್-ಆರ್ಎನ್ಆರ್ 02 ತ್ರಿವಳಿ ಭದ್ರತಾ ಪಡೆಯ ಮುಖ್ಯಸ್ಥ ಸಿಡಿಎಸ್ ಬಿಪಿನ್ ರಾವತ್ ಅವರಿಗೆ ಇಲ್ಲಿನ ಅಂಚೆ ವೃತ್ತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಿಸಲಾಯಿತು.