ಹೂವಿನ ಹಡಗಲಿ

ಸಿಬಿಎಸ್‌ಇ ಗ್ಲೋಬಲ್ ಪಬ್ಲಿಕ್ ಶಾಲೆಗೆ ನೂರರಷ್ಟು ಫಲಿತಾಂಶ

ಸಿಬಿಎಸ್‌ಇ  ಗ್ಲೋಬಲ್  ಪಬ್ಲಿಕ್ ಶಾಲೆಗೆ ನೂರರಷ್ಟು ಫಲಿತಾಂಶ

ಲೋಕದರ್ಶನ ವರದಿ 

ಹೂವಿನಹಡಗಲಿ 16:  ತಾಲೂಕಿನ ಹೊಳಗುಂದಿ ಗ್ರಾಮದ ಹೊರ ವಲಯದಲ್ಲಿರುವ ಗ್ಲೋಬಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಈ ವರ್ಷದ  ಸಿಬಿಎಸ್‌ಇ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸಿ ಗಮನಾರ್ಹ ದಾಖಲೆ ನಿರ್ಮಿಸಿದೆ. ಶಾಲೆಯ ಎಲ್ಲಾ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ವೈಯಕ್ತಿಕ ಸಾಧನೆಗಳಲ್ಲಿಯೂ ವಿದ್ಯಾರ್ಥಿಗಳು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆರ್‌. ಧನುಷ್ ಶೇ.95 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಮಧು ಎಂ. (93ಅ), ಕೆ.ಎಂ. ಪ್ರತೀಭಾ (92ಅ), ಉಂಕಿ ಸಿದ್ದಾರ್ಥ (90ಅ), ತೇಜಸ್ವಿನಿ ಪಾಟೀಲ (88ಅ), ಎಂ ಹಫಿಜಾ(88ಅ), ಪ್ರೀತಮ್ ರೆಡ್ಡಿ (86ಅ) ಮತ್ತು ಜೈಭಾ ಎಂ. (86ಅ) ಗೌತಮ  ಸೊಪ್ಪಿನ, (85ಅ)  ಮಹಮ್ಮದ್  ಫರಾನ್,  (85ಅ) ನವ್ಯಕ್ಷಿ. (85ಅ) ಅಂಕಗಳನ್ನು ಗಳಿಸಿ ಮಲ್ಲಿಗೆ ನಾಡಿಗೆ ಕೀರ್ತಿ ತಂದಿದ್ದಾರೆ.ಶಾಲೆಯ ಪ್ರಾಂಶುಪಾಲರಾದ ಥಾಮಸ್ ಸಂತೋಷ ಅವರು ಮಾತನಾಡಿ, ವಿದ್ಯಾರ್ಥಿಗಳ ನಿರಂತರ ಪರಿಶ್ರಮ ಮತ್ತು ಶಿಕ್ಷಕರ  ಬೋಧನೆಯ ಫಲ ನೂರರಷ್ಟು ಫಲಿತಾಂಶ ಸಾಧ್ಯವಾಗಿದೆ ಎಂದರು. ವಿದ್ಯಾರ್ಥಿಗಳ  ಸಾಧನೆಗೆ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಬ್ದುಲ್ ರಫಿ, ಆಡಳಿತಾಧಿಕಾರಿ ಡಿ. ಕರೀಂ ಸಾಹೇಬ ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ